ದೇಶದ ಘನತೆ ಕಾಪಾಡಲು ವಿದ್ಯಾರ್ಥಿಗಳಿಗೆ ಕರೆ

ದಾವಣಗೆರೆ :

         ವಿದ್ಯಾರ್ಥಿಗಳು ದೇಶ, ಭಾಷೆ, ಸಂಸ್ಕತಿಯ ಹಿರಿಮೆ–ಗರಿಮೆ ಉಳಿಸುವ ನಿಟ್ಟಿನಲ್ಲಿ ಚಿಂತಿಸುವ ಮೂಲಕ ದೇಶದ ಘನತೆ ಕಾಪಾಡಬೇಕೆಂದು ಹಿರಿಯ ಪತ್ರಕರ್ತ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕತ ಜಿ.ಎಂ.ಆರ್ ಆರಾಧ್ಯ ಕರೆ ನೀಡಿದರು.ನಗರದ ವಿರಕ್ತಮಠದ ಆವರಣದಲ್ಲಿ ಬುಧವಾರ ದಿ ಹಿಮಾಲಯನ್ ಅಡ್ವೆಂಚರ್ ಅಂಡ್ ನೇಚರ್ ಅಕಾಡೆಮಿ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಮತ್ತು ಮಕ್ಕಳ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಗೌರವ ಸನ್ಮಾನ ಹಾಗೂ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಗೌರವ ಸನ್ಮಾನ ಸ್ವೀಕರಿಸಿ ಸ್ವೀಕರಿಸಿ ಅವರು ಮಾತನಾಡಿದರು.

        ಜಾತಿ, ಮತ, ಧರ್ಮಗಳಿಗಿಂತಲೂ ನಾವು ಭಾರತೀಯರೆಂಬ ಅಭಿಮಾನವೇ ಶ್ರೇಷ್ಠ. ಭಾರತ ಜಗತ್ತಿಗೇ ಮಾದರಿಯಾದ ದೇಶವಾಗಿದೆ. ಇಂತಹ ದೇಶದ ಗೌರವ ಕಾಪಾಡುವುದು ವಿದ್ಯಾರ್ಥಿಗಳು ಮತ್ತು ಯುವಜನತೆಯ ಕರ್ತವ್ಯವಾಗಬೇಕು ಎಂದರು.
ವಿಶೇಷ ಉಪನ್ಯಾಸ ನೀಡಿದ ಸಾಹಿತಿ ಗಂಗಾಧರ ಬಿ.ಎಲ್ ನಿಟ್ಟೂರ್, ನಮ್ಮ ನಾಡು-ನುಡಿ, ಭಾಷೆ, ಪರಂಪರೆ ಮತ್ತು ಸಂಸ್ಕøತಿಯ ಅರಿವು ಮೂಡಿಸಿ ಹೊಸ ಕಲಿಕೆಗೆ ಪ್ರೇರಣೆ ನೀಡುವುದೇ ಶ್ರೇಷ್ಠ ಶಿಕ್ಷಣವಾಗಿದೆ. ಪಠ್ಯಗಳು ವಿದ್ಯಾರ್ಥಿಗಳ ಮನಸ್ಸನ್ನು ಅರಳಿಸಿ ಅವರಲ್ಲಿ ಉದಾತ್ತ ಚಿಂತನೆ ಮತ್ತು ಶ್ರೇಷ್ಠ ಸಂಸ್ಕಾರ ಬೆಳೆಸುವಂತಿರಬೇಕೆಂದು ಪ್ರತಿಪಾದಿಸಿದರು.

         ನಮ್ಮ ಅಕ್ಕಪಕ್ಕದಲ್ಲಿಯೇ ಸಾಕಷ್ಟು ಶ್ರಮಜೀವಿಗಳು ತಮ್ಮ ಜೀವನವನ್ನು ಅವಿರತ ಪರಿಶ್ರಮದಿಂದ ಸಾರ್ಥಕಪಡಿಸಿಕೊಳ್ಳುತ್ತಿದ್ದಾರೆ. ಅವರೇ ನಿಜವಾದ ಚಾಲೆಂಜಿಂಗ್ ಸ್ಟಾರ್‍ಗಳು. ಅಂತಹ ಸಾಧಕರು ನಮಗೆ ಮಾದರಿಯಾಗಬೇಕು ಹೊರತು ಸಿನಿಮಾ ನಟರಲ್ಲ ಎಂದರು.
ಈ ವೇಳೆ ವನಿತ ಸಾಹಿತ್ಯಶ್ರೀ ಪ್ರಶಸ್ತಿ ಪುರಸ್ಕøತರಾದ ಶೈಲಜಾ ಅವರನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀಬಸವಪ್ರಭು ಸ್ವಾಮೀಜಿ ವಹಿಸಿದ್ದರು. ಅಕಾಡೆಮಿಯ ನಿರ್ದೇಶಕ ಬಿ.ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ಅಕಾಡೆಮಿಯ ಸಂಸ್ಥಾಪಕ ಕಾರ್ಯದರ್ಶಿ ಎನ್.ಕೆ ಕೊಟ್ರೇಶ್ ಪ್ರಾಸ್ತಾವಿಕ ಮಾತನಾಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link