ಕೊಟ್ಟೂರು:
ಪಟ್ಟಣದ ಸಿರಿಮಠದ ಓಣಿ, ಶಾಂತಿ ನಗರ, ಅಂಬೇಡ್ಕರ್ ನಗರದಲ್ಲಿರು ಮಿನಿ ನೀರಿನ ಟ್ಯಾಂಕ್‍ಗಳಿಗೆ ಕಳೆದ ನಾಲ್ಕೈದು ತಿಂಗಳಿನಿಂದ ಸ್ಥಳೀಯ ಆಡಳಿತದಿಂದ ನೀರು ಸರಬಾರಜು ಮಾಡದೆ ಇರುವುದರಿಂದ ಕಾಲೋನಿ ಜನರು ನೀರು ಸಿಗದೆ ತೊಂದರೆ ಅನುಭವಿಸುತ್ತಿದ್ದಾರೆ.
ಕೊಟ್ಟೂರೇಶ್ವರ ದೇವಸ್ಥಾನದ ದ್ವಾರ ಬಾಗಿಲು ಬಳಿ ಪಟ್ಟಣ ಪಂಚಾಯ್ತಿ ವತಿಯಿಂದ ಕಳೆದೆ ವರ್ಷ ಮಿನಿ ನೀರಿನ ಟ್ಯಾಂಕ್ ನಿರ್ಮಿಸಿ ದೇವರ ದರ್ಶನಕ್ಕೆ ಬರುವ ಭಕ್ತರಿಗೆ ಹಾಗೂ ಕಾಲೋನಿ ನಿವಾಸಿಗಳ ಉಪಯೋಗಕ್ಕಾಗಿ ಅನುಕೂಲ ಮಾಡಿಕೊಡಲಾಗಿತ್ತು. ಟ್ಯಾಂಕ್ ಸಮೀಪದಲ್ಲಿಯೇ ಕೊಳವೆ ಬಾವಿ ಇದ್ದರು ಕಳೆದ ನಾಲ್ಕೈದು ತಿಂಗಳಿನಿಂದ ನೀರು ಸರಿಯಾಗಿ ನೀರು ಬಿಡುತ್ತಿಲ್ಲ ಎಂದು ಸ್ಥಳಿಯ ನಿವಾಸಿಗಳು ಬೇಸರ ವ್ಯಕ್ತಪಡಿಸಿದರು.
ಹಗರಿಬೊಮ್ಮನಹಳ್ಳಿ ರಸ್ತೆಯಲ್ಲಿರುವ ಶಾಂತಿ ನಗರದಲ್ಲಿ ಪ.ಪಂ. ನಿಂದ ಕಿರು ಕುಡಿಯುವ ನೀರು ಯೋಜನಡಿಯಲ್ಲಿ ಮಿನಿ ಟ್ಯಾಂಕ್ ನಿರ್ಮಿಸಿ ಒಂದು ವರ್ಷವಾದರು ಟ್ಯಾಂಕ್‍ನಿಂದ ಹನಿ ನೀರು ನಾವು ಕಂಡಿಲ್ಲ. ಕೂಲಿ ಮಾಡುವ ನಾವು ಕುಡಿಯುವ ನೀರನ್ನು ಶುದ್ಧ ಕುಡಿಯುವ ನೀರಿನ ಘಟಕದಿಂದ ದುಡ್ಡು ಕೊಟ್ಟು ತಂದು ಕುಡಿಯುತ್ತಿದ್ದೇವೆ ಎಂದು ಶಾಂತಿನಗರ ನಿವಾಸಿಗಳು ತಮ್ಮ ಅಳಲನ್ನು ಹೇಳಿಕೊಂಡರು.
ಬೇಸಿಗೆ ಬರುವುದಕ್ಕೆ ಇನ್ನು ಕೆಲವು ತಿಂಗಳು ಬಾಕಿ ಇದೆ ಈರೀತಿಯ ನೀರಿನ ಅಭಾವ ತೆಲೆ ದೂರಿರುವುದರಿಂದ ಜನರಲ್ಲಿ ಆತಂಕ ಮನೆಮಾಡಿದೆ ಅದರಿಂದ ಕೂಡಲೆ ಸ್ಥಳೀಯ ಆಡಳಿತ ಎಚ್ಚೆತ್ತುಕೊಳ್ಳಬೇಕು ಇಲ್ಲವಾದರೆ ಸಾರ್ವಜನಿಕರಿಂದ ಜಲ ಧರಣಿಯ ತೊಂದರೆ ಪ.ಪಂ ಎದುರಿಸಬೇಕಾಗದುತ್ತದೆ ಎಂದು ಸ್ಥಳೀಯ ನಾಗರಿಕರು ಎಚ್ಚರಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ