ಶಾಲಾ ಮಕ್ಕಳಿಗೋಸ್ಕರವಾದರೂ ರಸ್ತೆ ಸರಿಪಡಿಸಿ..!!

ಗ್ರಾಮೀಣ ಪ್ರದೇಶದ ರಸ್ತೆಗಳನ್ನು ಅಧಿಕಾರಿಗಳು, ಜನಪ್ರತಿನಿಧಿಗಳು ಗಮನಿಸಲಿ

ತಿಪಟೂರು

      ಜೂನ್ 1 ರಿಂದ ಶಾಲೆ ಪ್ರಾರಂಭವಾಗಿದ್ದು ಗ್ರಾಮೀಣ ಮಕ್ಕಳು ನಗರದತ್ತ ಬರುವುದು ಸಾಮಾನ್ಯ ಆದರೆ ನಗರದತ್ತ ಮಕ್ಕಳನ್ನು ಕಳುಹಿಸಲು ಪೋಷಕರು ರಸ್ತೆಗೆ ಹೆದರುವಂತಾಗಿದೆ.

      ತಮ್ಮ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಸಾಲಸೋಲಮಾಡಿ ಉತ್ತಮವಾದ ಶಾಲೆಗಳಿವೆ ಎಂದು ಎಲ್ಲರಿಗೂ ಆಸೆ ಇದೆ ಆದರೆ ಈ ಆಸೆಯಲ್ಲಿ ಪಟ್ಟಣಕ್ಕೆ ಕಳುಹಿಸಿದ ಮಕ್ಕಳು ಹಿಂತಿರುಗಿ ಬರುವವರೆಗೂ ನೆಮ್ಮದಿ ಇಲ್ಲದೆ ಹತ್ತು ನಿಮಿಷ ತಡವಾದರು ಏನು ಅಪಘಾತವಾಯಿತೋ ಎಂಬಂತೆ ನರಕದಲ್ಲಿ ಜೀವಿಸುವಂತೆ ನಮ್ಮ ರಸ್ತೆಗಳು ಆತಂಕದ ಸ್ಥಿತಿಯನ್ನು ನಿರ್ಮಾಣಮಾಡಿವೆ.

       ಅರಳಗುಪ್ಪೆಯಿಂದ ಕರಡಾಳು ಸಂತೆಮಾರ್ಗವಾಗಿ ತಿಪಟೂರು ನಗರಕ್ಕೆ ಸಂಪರ್ಕಕಲ್ಪಿಸುವ ರಸ್ತೆಯೂ ಇದಕ್ಕೆ ಹೊರತಾಗಿಲ್ಲ ತಿಪಟೂರು ನಗರದಿಂದ ಕರಡಾಳು ಸಂತೆ ಮೈದಾನದವರೆಗೂ ರಸ್ತೆ ಸ್ವಲ್ಪಮಟ್ಟಿಗೆ ಚೆನ್ನಾಗಿದ್ದು ಅಲ್ಲಿಂದ ಮುಂದೆಯಂತು ಹೇಳತೀರದಷ್ಟು ಹಾಳಾಗಿದ್ದು ಆ ರಸ್ತೆಯಲ್ಲಿಯೇ ಯಾವುದೇ ನಿಯಮಗಳಿಲ್ಲದೇ ಸರ್ಕಾರಿ ಬಸ್‍ಗಳು, ಆಟೋಗಳು, ದ್ವಿಚಕ್ರವಾಹನಗಳು ಪ್ರಾಣವನ್ನು ಕೈನಲ್ಲಿಹಿಡಿದು ಅಲೆದಾಡುವಂತಾಗಿದೆ.

      ಇನ್ನು ತಾಲ್ಲೂಕಿನಲ್ಲಿ ಬಸ್‍ಗಳು ಮುಖವನ್ನೇ ನೋಡದ ಹಳ್ಳಿಗಳಲ್ಲಿ ಹೊನ್ನವಳ್ಳಿ ಹೋಬಳಿಯ ಮಾರುಗೊಂಡನಹಳ್ಳಿಯೂ ಸಹ ಒಂದು : ಇನ್ನು ಯಾವಕಡೆ ಇಂದಲೂ ಬಸ್‍ಗಳು ತಲುಪಲು ಸಾಧ್ಯವಾಗದಂತೆ ಇರುವ ದ್ವೀಪದಂತೆ ಇರುವ ಪ್ರದೇಶವೇ ಮಾರುಗೊಂಡನಹಳ್ಳಿ ಈ ಹಳ್ಳಿಗೆ ತಲುಪಬೇಕಾದರೆ ಬಿದರೆಗುಡಿ-ಹೊನ್ನವಳ್ಳಿ, ತಿಪಟೂರು ಗುಡುಗೊಂಡನಹಳ್ಳಿ ಹೊನ್ನವಳ್ಳಿ, ಇಲ್ಲವೇ ಅಯ್ಯನಬಾವಿ ಬೊಮ್ಮಲಾಪುರ ಗೊಲ್ಲರಹಟ್ಟಿ ಇವೆಲ್ಲಾ ಮಾರ್ಗವಾಗಿ ಕಡಿಮೆ ಎಂದರು 3 ಕಿಮಿ ನಡೆದೇ ಹೋಗಬೇಕು ಇಲ್ಲವೇ ಇಲ್ಲಿ ಜನರಿಂದ ಕಿಕ್ಕಿರಿದು ತುಂಬಿರುವ ಪ್ರಯಾಣಿಕರ ಆಟೋವಾಗಲಿ, ಲಗೇಜ್ ಆಟೋವಾಗಲೀ, ಇಲ್ಲವೇ ಯಾವುದಾದರೂ ದ್ವಿಕ್ರವಾಹನಕ್ಕೆ ಕಾಯುಪರಿಸ್ಥಿತಿಯಲ್ಲಿರುವ ಸಾರ್ವಜನಿಕರು ಮತ್ತು ಇಲ್ಲಿನ ಮಕ್ಕಳು ಪ್ರೌಢಶಾಲೆಗಾಗಿ ಗುಡಿಗೊಂಡನಹಳ್ಳಿಯ ಪ್ರೌಢಶಾಲೆಗೆ ಹೋಗುತ್ತಾರೆ, ಇವರಿಗೆ ಸರ್ಕಾರ ಕೊಟ್ಟಿರುವ ಬೈಸಿಲಕ್ ಒಳ್ಳೆಯದೇ ಆದರೆ ಈ ಬೈಸಿಕಲ್‍ಅನ್ನು ಈ ರಸ್ತೆಯಲ್ಲಿ ಓಡಿಸಲು ಸಾಧ್ಯವಾಗದಷ್ಟುಮಟ್ಟಿಗೆ ರಸ್ತೆಯು ಹಾಳಾಗಿದ್ದು ಮಾರುಗೊಂಡನಹಳ್ಳಿ ಮತ್ತು ಬೊಮ್ಮಲಾಪುರ ಗೊಲ್ಲರಹಟ್ಟಿ, ಕಾಲೋನಿಯ ಮಕ್ಕಳು ಬೈಸಿಕಲ್ ಇದ್ದರೂ ರಸ್ತೆಗೆ ಹೆದರಿ ಕಾಲ್ನಡಿಗೆಯಲ್ಲಿಯೇ ಶಾಲೆಗೆ ತೆರಳುವಂತಹ ಸ್ಥಿತಿನಿರ್ಮಾಣವಾಗಿದೆ.

ಪೋಷಕರಿಗೆ ಎಚ್ಚರಿಕೆ :

      ಮಕ್ಕಳನ್ನು ನಗರದ ಖಾಸಗಿ ಶಾಲೆಗಳಿಗೆ ಕಳುಹಿಸುವ ಭರದಲ್ಲಿ ಯಾವುದೋ ಒಂದು ವಾಹನಕ್ಕೆ ಮಕ್ಕಳನ್ನು ಕಳುಹಿದರೆ ಸಾಕೆನ್ನುವ ಪೋಷಕರು, ಇನ್ನು ಇನ್ನಿಬ್ಬರು ಮಕ್ಕಳನ್ನು ಹತ್ತಿಸಿಕೊಂಡರೆ ಇನ್ನೆರಡುಕಾಸು ದೊರೆಯುತ್ತೆನ್ನುವ ವಾಹನದ ಮಾಲೀಕರು, ಇವೆಲ್ಲಕ್ಕೂ ಮಿಗಿಲಾಗಿ ನಿರುದ್ಯೋಗದಿಂದ ಬೇಸತ್ತು ಅಲ್ಪಸ್ವಲ್ಪಹಣ ಮತ್ತು ಸಾಲಮಾಡಿ ವಾಹನವನ್ನು ತಂದು ಮಕ್ಕಳು ಮತ್ತು ಪ್ರಯಾಣಿಕರನ್ನು ನಗರಕ್ಕೆ ಸಾಗಿಸುವ ಭರದಲ್ಲಿ ಈ ಹಾಳಾದ ರಸ್ತೆಯಲ್ಲಿಯೇ ಪ್ರಯಾಣಿಕರನ್ನು ಹತ್ತಿಸಿಕೊಂಡು ಬರುವ ಚಾಲಕ/ಮಾಲೀಕರು ಸ್ವಲ್ಪ ಹೆಚ್ಚುಕಡಿಮೆಯಾದರೂ ಅನಾಹುತವಾಗುವುದರಲ್ಲಿ ಸಂದೇಹವೇಇಲ್ಲ. ಸಾಧ್ಯವಾದಷ್ಟು ಉತ್ತವಾದ ವಾಹನಗಳಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸಿ ಮಕ್ಕಳ ಭವಿಷ್ಯಕ್ಕೆ ಪೋಷಕರು ಪೂರಕವಾಗಬೇಕು.

        ಇಷ್ಟೆಲ್ಲಾದ ಮದ್ಯೆ ಸಂಬಂಧಪಟ್ಟ ಜನಪ್ರತಿನಿಧಿಗಳು, ಅಧಿಕಾರಿಗಳು ವಿದ್ಯಾಭ್ಯಾಸಕ್ಕಾಗಿ ನಗರಕ್ಕೆ ಬರುವ ಮಕ್ಕಳನ್ನು ದೃಷ್ಠಿಯಲ್ಲಿಟ್ಟುಕೊಂಡಾದರೂ ಭಾರತದ ಮುಂದಿನ ಭವ್ಯಪ್ರಜೆಗಳಿಗಾಗಿ ರಸ್ತೆಯನ್ನು ಸಾಧ್ಯವಾದಷ್ಟು ಶೀಘ್ರವಾಗಿ ದುರಸ್ತಿಗೊಳಿಸುತ್ತಾರೇನೊ ಕಾದುನೋಡಬೇಕಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap