ಕುಣಿಗಲ್
ಕಳೆದ ಹದಿಮೂರು ವರ್ಷದಿಂದ ಅಚ್ಚುಕಟ್ಟು ಪ್ರದೇಶಗಳಿಗೆ ಕರೆಯ ನೀರನ್ನು ಬಿಡದೆ ಬರೀ ಕುಡಿಯುವುದಕ್ಕೆ ಬಳಸಿಕೊಳ್ಳುವ ಮೂಲಕ ರೈತರಿಗೆ ಅನ್ಯಾಯಮಾಡಲಾಗುತ್ತಿದ್ದು ಈ ಬಾರಿಯಾದರೂ ಶಾಸಕರು ಹಾಗೂ ಜಿಲ್ಲಾಡಳಿತ ರೈತರ ಅಚ್ಚು ಕಟ್ಟು ಪ್ರದೇಶಗಳಿಗೆ ಹೇಮಾವತಿ ನೀರುಹರಿಸುವ ಮೂಲಕ ರೈತಾಪಿ ಜನರಿಗೆ ನೆರವಾಗಲಿ ಎಂದು ಜೆ.ಡಿ.ಎಸ್. ರಾಜ್ಯ ಪ್ರಧಾನ ಕಾರ್ಯದರ್ಶಿ ಜಗದೀಶ್‍ನಾಗರಾಜಯ್ಯ ಒತ್ತಾಯಿಸಿದ್ದಾರೆ.
ಅವರು ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತ ತಾಲ್ಲೂಕಿನ ದೊಡ್ಡಕೆರೆಗೆ ನೀರು ಹರಿಸಿ ಗಂಗಾ ಪೂಜೆ ಮಾಡಿ ಬರೀ ಕೆರೆ ತುಂಬಿಸುವ ರಾಜಕಾರಣ ಮಾಡುವುದು ಸರಿಯಾದ ಕ್ರಮವಲ್ಲ ಈ ಹಿಂದೆ ಇದ್ದ ಜನಪ್ರತಿನಿಧಿಗಳು ತಾಲ್ಲೂಕಿನ ಕೊತ್ತಗೆರೆ, ಸೇರಿದಂತೆ ವಿವಿಧ ಕೆರೆಗಳಿಗೆ ನೀರು ತುಂಬಿಸಿ ರೈತಾಪಿಜನರಿಗೆ ಅನುಕೂಲ ಮಾಡುತ್ತಿದ್ದರು
ಆದರೆ ಹದಿಮೂರು ವರ್ಷದಿಂದ ಕುಣಿಗಲ್ ದೊಡ್ಡಕರೆಯ ಅಚ್ಚು ಕಟ್ಟು ಪ್ರದೇಶಕ್ಕೆ ನೀರು ಹರಿಸದೇ ಇರುವುದು ರೈತಾಪಿ ಜನರಿಗೆ ಮಾಡಿದ ಅನ್ಯಾಯ ಆದ್ದರಿಂದ ಈಗ ಹೇಮಾವತಿ ಸಂಬೃದ್ದವಾಗಿ ತುಂಬಿರುವುದರಿಂದ ತಾಲ್ಲೂಕಿನಲ್ಲಿರುವ ಎಲ್ಲ ಕೆರೆಗಳಿಗೂ ನೀರು ಹರಿಸುವ ಕೆಲಸವನ್ನು ಶಾಸಕರು ಮತ್ತು ಜಿಲ್ಲಾಡಳಿತ ಮಾಡಿದರೆ ಅವರಿಗೆ ಬೆಂಬಲ ನೀಡುವುದಾಗಿಯೂ ಹೇಳಿದ ಅವರು ಬರೀ ಕೆರೆ ತುಂಬಿಸುವ ಕೆಲಸ ಮಾಡಿದರೆ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈಗಾಗಲೇ ದೊಡ್ಡಕೆರೆಯಲ್ಲಿರುವ ನೀರು ಕೆಲವು ವರ್ಷಗಳ ಹಳೆಯ ನೀರು ನಿಂತು ದುರ್ವಾಸೆ ಬೀರುತ್ತಿದೆ ಈ ಬಾರಿ ಮುಂಚಿತವಾಗಿಯೇ ಹೇಮಾವತಿ ನೀರು ಹರಿದು ಬರುತ್ತಿರುವುದರಿಂದ ಕೂಡಲೇ ಹಳೆಯ ನೀರನ್ನು ಅಚ್ಚುಕಟ್ಟು ಪ್ರದೇಶಗಳಿಗೆ ಬಿಟ್ಟು ಹೊಸದಾಗಿ ತುಂಬಿಸುವ ಕೆಲಸ ಮಾಡಬೇಕಾಗಿದೆ ಜೊತೆಗೆ ಪಟ್ಟಣದ ನಾಗರಿಕರಿಗೆ ಕುಡಿಯಲು ಎಷ್ಟು ಬೇಕು ಅಷ್ಟನ್ನು ಸಮರ್ಪಕವಾಗಿ ಬಳಸಿಕೊಂಡು ಮುಂದಿನ ದಿನಗಳಲ್ಲಿ ಉಳಿದ ನೀರನ್ನು ಅಚ್ಚುಕಟ್ಟು ಪ್ರದೇಶಗಳಿಗೆ ಹಂತಹಂತವಾಗಿ ಹರಿಸಿದರೆ ರೈತಾಪಿಜನರು ಬತ್ತ,ಕಬ್ಬು,ರಾಗಿ ಮುಂತಾದ ಬೆಳೆಯನ್ನು ಬೆಳೆದುಕೊಂಡು ತಮ್ಮ ಜೀವನ ಉತ್ತಮಪಡಿಸಿಕೊಳ್ಳಲು ಸಾಧ್ಯವಾಗುತ್ತದೆ ಅದನ್ನು ಬಿಟ್ಟು ಬರಿ ಕುಡಿಯಲು ನೀರುತುಂಬಿಸುವ ನಾಟಕವಾಡಿದರೆ ಪ್ರಯೋಜನವಿಲ್ಲ ಮೂಲತ ಈ ಭಾಗದ ಜನರಿಗೆ ಬೆಳೆ ಬೆಳೆಯಲು ಅನುಕೂಲವಾದರೆ ಆರ್ಥಿಕವಾಗಿ ತಾಲ್ಲೂಕು ಸದೃಢವಾಗಲು ಸಾಧ್ಯ ಈ ನಿಟ್ಟಿನಲ್ಲಿ ಶಾಸಕರು ನೀರು ಹರಿಸಲು ಮುಂದಾದರೆ ನಾವು ಪಕ್ಷಾತೀತವಾಗಿ ಬೆಂಬಲಿಸುತ್ತೇವೆ ಹೊರೆತು ಬರೀ ಕುಡಿಯಲು ದೊಡ್ಡಕೆರೆಗೆ ನೀರು ತುಂಬುವ ನಾಟಕವಾಡಿದರೆ ಪ್ರಯೋಜನವಿಲ್ಲ ಎಂದು ಟೀಕಿಸಿದರು.
ಪತ್ರಿಕಾಗೋಷ್ಠಿಯಲ್ಲಿ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಕೆ.ಎಲ್.ಹರೀಶ, ಮುಂಖಂಡರಾದ ಚಂದ್ರಪ್ಪ, ಗವಿಯಪ್ಪ, ರಂಗಸ್ವಾಮಿ, ದೀಪು, ಮಂಜುನಾಥ್, ಮನೋಜ್‍ಗೌಡ ಮುಂತಾದವರಿದ್ದರು.