ಬರಗೂರು
ಸಿದ್ದರಾಮಯ್ಯನವರು ಮುಖುಮಂತ್ರಿಯಾಗಿದ್ದಾಗ ಉಚಿತವಾಗಿ ಅನ್ನಭಾಗ್ಯ ಯೋಜನೆ ನೀಡಿ ಬಡ ಜನತೆಯ ಹಸಿವನ್ನು ನೀಗಿಸಿದರು. ಸಿರಾ ಕ್ಷೇತ್ರಕ್ಕೆ ಸಾಕಷ್ಟು ಎಂಎಲ್‍ಎ, ಎಂಪಿಗಳಾಗಿದ್ದಾರೆ, ಅವರ ಕೊಡುಗೆ ಕ್ಷೇತ್ರಕ್ಕಿದೆ. ನನ್ನ 10 ವರ್ಷದ ಅವಧಿಯಲ್ಲಿ ನೀಡಿರುವ ಕೊಡುಗೆ ನೋಡಿ ನೀವುಗಳು ನನ್ನನ್ನು ಆಶೀರ್ವದಿಸಿ ಎಂದು ಮಾಜಿ ಸಚಿವ ಟಿಬಿ ಜಯಚಂದ್ರ ಹೇಳಿದರು.
ಅವರು ಸಿರಾ ತಾಲ್ಲೂಕಿನ ಬರಗೂರು ಗ್ರಾಮ ಪಂಚಾಯಿತಿ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡುತ್ತಾ, ಹೇಮಾವತಿಯಿಂದ 1 ಟಿಎಂಸಿ, ಭದ್ರ್ರಾದಿಂದ 3 ಟಿಎಂಸಿ, ಎತ್ರಿನ ಹೊಳೆಯಿಂದ ಅರ್ಧ ಟಿಎಂಸಿ ನೀರು ಒಟ್ಟು 35 ಸಾವಿರ ಎಕರೆಯಲ್ಲಿ ಭತ್ತ ಬೆಳೆಯುವಷ್ಟು ನೀರು ಸಿರಾ ಕೆರೆಗೆ ಬರುತ್ತದೆ.
ಸಿರಾಕ್ಕೆ ಬರುವ ನೀರಿನ ಪ್ರಮಾಣವನ್ನು ಕಡಿಮೆ ಮಾಡಿಸುವ ಮನವಿ ಸಿಎಂ ಕಚೇರಿಗೆ ಹೋಗಿದೆ. ಸಿರಾಕ್ಕೆ ನೀರಿನ ಪ್ರಮಾಣವನ್ನು ಕಡಿಮೆ ಮಾಡಲು ಹೊರಟಿರುವ ಬಿಜೆಪಿ ಸರ್ಕಾರವು ದ್ವೇಷದ ರಾಜಕಾರಣ ಮಾಡುತ್ತಿದೆ. ನೀರಿನ ಪ್ರಮಾಣವು ಕಡಿಮೆಯಾದರೆ ಸಿಎಂ ಕುರ್ಚಿ ಅಲುಗಾಡಿಸುವುದನ್ನು ಬಲ್ಲೆ. ನೀರು ಕಡಿಮೆಯಾದರೆ ಹುಲಿಕುಂಟೆ ಹೋಬಳಿ ಮುಂದಿನ ದಿನಗಳಲ್ಲಿ ಮರುಭೂಮಿಯಾಗುತ್ತದೆ ಎಂದರು.
ಕಾಂಗ್ರೆಸ್ ಮುಖಂಡ ಕಲ್ಕೆರೆ ರವಿಕುಮಾರ್ ಮಾತನಾಡಿ, ಟಿಬಿಜೆ ತಮ್ಮ ಹತ್ತು ವರ್ಷದ ಅವಧಿಯಲ್ಲಿ ಸಿರಾ ತಾಲ್ಲೂಕನ್ನು ಮೂವತ್ತು ವರ್ಷ ಮುಂದಕ್ಕೆ ಅಭಿವೃದ್ದಿಯಲ್ಲಿ ಸಾಗಿಸಿದ್ದಾರೆ. ರಾಜ್ಯದಲ್ಲೇ ಪ್ರಥಮವಾಗಿ ಸಿರಾ ನಗರದಲ್ಲಿ ತಾಯಿ ಮಗು ಆಸ್ಪತ್ರೆಯನ್ನು ಸ್ಥಾಪಿಸಿದ್ದಾರೆ. 12 ಕೋಟಿ ರೂ.ಗಳಲ್ಲಿ ಸೇತುವೆ ನಿರ್ಮಾಣವಾಗುತ್ತಿದೆ. ಮದಲೂರಿಗೆ 13 ದಿನಗಳ ಕಾಲ ಹೇಮಾವತಿ ನೀರು ಹರಿಯಿತು, ಮಳೆ ನೀರು ಬರಲು ಸಾಧ್ಯವೆ ಸ್ವಾಮಿ ಎಂದು ಪ್ರಶ್ನಿಸಿದರು.
ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷ ಆರ್ ರಾಜೇಂದ್ರ ಮಾತನಾಡಿ, ಈ ಕ್ಷೇತ್ರಕ್ಕೆ ಅಭಿವೃದ್ದಿಗಾಗಿ ಜಯಚಂದ್ರರವರ ಕೊಡುಗೆ ತುಂಬಾ ಇದೆ, ಇವರ ಸೇವೆಯನ್ನು ಗುರ್ತಿಸಿ ಕಾಂಗ್ರೆಸ್‍ಗೆ ಬಲ ನೀಡಿ ಎಂದರು. ಬ್ಲಾಕ್ ಕಾಂಗ್ರೆಸ್ ಗ್ರಾಮಾಂತರ ಅಧ್ಯಕ್ಷ ನಟರಾಜು ಬರಗೂರು, ನಗರ ಅಧ್ಯಕ ಪಿ ಆರ್. ಮಂಜುನಾಥ್, ಕಾಂಗ್ರೆಸ್ ಮುಖಂಡ ಹೊನ್ನಗಿರಿಗೌಡ, ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಿ ಹಲಗುಂಡೇಗೌಡ, ತಾ. ಕುಂಚಿಟಿಗರ ಸಂಘದ ಅಧ್ಯಕ್ಷ ತ್ಯಾಗರಾಜು, ಡಿಸಿಸಿ ಬ್ಯಾಂಕ್ ತಾಲ್ಲೂಕು ನಿರ್ದೇಶಕ ಜಿಎಸ್ ರವಿ, ಜಿಎನ್ ಮೂರ್ತಿ, ಹಾರೋಗೆರೆ ಮಹೇಶ್, ಮಹಿಳಾ ಕಾಂಗ್ರೆಸ್ ಘಟಕದ ತಾ ಅಧ್ಯಕ್ಷೆ ರೇಖಾ, ರಾಮಕೃಷ್ಣ, ಬಿ.ಸಿ ಸತೀಶ್, ನರಸಪ್ಪ, ಶ್ರೀನಿವಾಸ್ ಗೌಡ, ಡಿಸಿ ನಾರಾಯಣಪ್ಪ, ಗುಜ್ಜಾರಪ್ಪ, ಅಜ್ಜೇಗೌಡ, ಲತೀಫ್, ಫÀಕೃದ್ದೀನ್, ಹನುಮಂತರಾಯಪ್ಪ, ತಿಮ್ಮೇಗೌಡ, ಸಿದ್ದಪ್ಪ, ನಾಗಭೂಷಣ್ ಇನ್ನೂ ಹಲವಾರು ಕಾಂಗ್ರೆಸ್ ಮುಖಂಡರು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ