ಪ್ರಧಾನ ಮಂತ್ರಿ ನರೇಂದ್ರಮೋದಿಯವರ ಕ್ರಿಯಾಶೀಲತೆ ದೇಶದ ಗೌರವವನ್ನು ವಿಶ್ವಮಟ್ಟದಲ್ಲಿ ಹೆಚ್ಚಿಸಿದೆ.

ಚಳ್ಳಕೆರೆ

         ಭಾರತದ ಗೌರವವನ್ನು ವಿಶ್ವಮಟ್ಟಕ್ಕೆ ಸಾರಿದ ಸ್ವಾಮಿವಿವೇಕಾನಂದರ ಮಹಾನ್ ಕಾರ್ಯವನ್ನು ಇಂದು ವಿಶ್ವದಾದ್ಯಂತ ಕೊಂಡಾಡಲಾಗುತ್ತಿದೆ. ಅದೇ ರೀತಿ ಕಳೆದ ಐದು ವರ್ಷಗಳಿಂದ ಪ್ರಧಾನಮಂತ್ರಿ ನರೇಂದ್ರಮೋದಿ ಎಲ್ಲಾ ರಂಗಗಳಲ್ಲೂ ರಾಷ್ಟ್ರದ ಗೌರವವನ್ನು ಎತ್ತಿ ಹಿಡಿಯುವ ಮೂಲಕ ವಿಶೇಷ ಗೌರವವನ್ನು ಸಂಪಾದಿಸಿದ್ದು, ಪ್ರಸ್ತುತ ನಡೆಯುವ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಯವರಿಗೆ ವಿಶೇಷ ಶಕ್ತಿಯನ್ನು ಮತದಾರರು ಬಿಜೆಪಿ ಅಭ್ಯರ್ಥಿಗೆ ಮತ ಚಲಾಯಿಸುವ ಮೂಲಕ ನೀಡಬೇಕೆಂದು ನಿವೃತ್ತ ಐಎಎಸ್ ಅಧಿಕಾರಿ ಲಕ್ಷ್ಮಿನಾರಾಯಣ ತಿಳಿಸಿದರು. ನಗರದ ಹೊರವಲಯದಲ್ಲಿ ನಡೆದ ಪಕ್ಷದ ಚಿಂತಕರ ಸಭೆಯಲ್ಲಿ ಅವರು ಮಾತನಾಡಿದರು.

       ಅವರು, ಶನಿವಾರ ಕಾರ್ಯನಿಮಿತ್ತ ಇಲ್ಲಿಗೆ ಆಗಮಿಸಿದ್ದು, ಕಳೆದ ಹಲವಾರು ವರ್ಷಗಳಿಂದ ಬಿಜೆಪಿ ಪಕ್ಷದ ಹಲವಾರು ಜನಪ್ರಿಯ ಯೋಜನೆಗಳನ್ನು ನಾನು ಕಂಡಿದ್ದು, ನಾನು ಸಹ ಈ ಬಾರಿ ಲೋಕಸಭೆ ಪ್ರವೇಶಿಸಲು ಇಚ್ಚಿದ್ದು, ಪಕ್ಷ ಟಿಕೆಟ್ ನೀಡಿದರೆ ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಅಭ್ಯರ್ಥಿಯಾಗುವ ಉದ್ದೇಶ ಹೊಂದಲಾಗಿದೆ ಎಂದರು. ಈ ಬಗ್ಗೆ ಈಗಾಗಲೇ ಪಕ್ಷದ ವರಿಷ್ಠರನ್ನು ಭೇಟಿ ಮಾಡಿ ಮನವಿ ಮಾಡಿದ್ದೇನೆ. ಟಿಕೆಟ್ ದೊರೆತರೆ ನಿಮ್ಮೆಲ್ಲರ ಸಹಕಾರದಿಂದ ಗೆಲುವು ಸಾಧಿಸುತ್ತೇನೆಂಬ ಆತ್ಮವಿಶ್ವಾಸ ನನಗೆ ಇದೆ. ಟಿಕೆಟ್ ದೊರೆಯದೇ ಇದ್ದರೂ ಸಹ ಪಕ್ಷದ ಕಾರ್ಯಕರ್ತನಾಗಿ ಅಭ್ಯರ್ಥಿ ಗೆಲುವಿಗೆ ದುಡಿಯುತ್ತೇನೆಂದರು.

      ಮಂಡಲಾಧ್ಯಕ್ಷ ಬಿ.ವಿ.ಸಿರಿಯಣ್ಣ ಮಾತನಾಡಿ, ಕಳೆದ ಹಲವಾರು ವರ್ಷಗಳ ನಿರಂತರ ಬರ ಈ ಪ್ರದೇಶದ ರೈತರಿಗೆ ಹಾಗೂ ಸಾರ್ವಜನಿಕರಿಗೆ ಮಾರಕವಾಗಿದೆ. ಈ ಭಾಗದ ಜನರಿಗೆ ನೀರಾವರಿ ಸೌಲಭ್ಯಗಳನ್ನು ಒದಗಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ರಾಜ್ಯ ಮಟ್ಟದಲ್ಲಿ ಉತ್ತಮ ಅಧಿಕಾರಿಯಾಗಿ ತಾವು ಕಾರ್ಯನಿರ್ವಹಿಸ ಬಗ್ಗೆ ಎಲ್ಲರಿಗೂ ತಿಳಿದಿದ್ದು, ಪಕ್ಷ ತಮ್ಮನ್ನು ಅಭ್ಯರ್ಥಿಯನ್ನಾಗಿ ಮಾಡಿದಲ್ಲಿ ಎಲ್ಲಾ ರೀತಿಯ ಸಹಕಾರ ನೀಡುವ ಭರವಸೆ ನೀಡಿದರು.

      ಪಕ್ಷದ ಜಿಲ್ಲಾ ಉಪಾಧ್ಯಕ್ಷ ಬಿ.ಎಸ್.ಶಿವಪುತ್ರಪ್ಪ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಕರೀಕೆರೆ ತಿಪ್ಫೇಸ್ವಾಮಿ, ಉಪಾಧ್ಯಕ್ಷ ಹೊಟ್ಟೆಪ್ಪನಹಳ್ಳಿ ಮಂಜುನಾಥ, ಉಸ್ತುವಾರಿ ಟಿ.ಬೋರನಾಯಕ, ಬಿಜೆಪಿ ಮುಖಂಡರಾದ ಡಿ.ಎಂ.ತಿಪ್ಪೇಸ್ವಾಮಿ, ಎ.ವಿಜಯೇಂದ್ರ, ಹಟ್ಟಿರುದ್ರಪ್ಪ, ಜಿ.ಕೆ.ವೀರಣ್ಣ, ಸೋಮಶೇಖರ್, ಮಹಿಳಾ ಅಧ್ಯಕ್ಷೆ ಸುಭದ್ರಮ್ಮ, ಇಂಧುಮತಿ ಮುಂತಾದವರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap