ಪ್ರತಿಯೊಬ್ಬರಿಗೂ ನಿವೇಶನ ಪ್ರಧಾನಿ ಆಶಯ: ತಿಪ್ಪಾರೆಡ್ಡಿ

ಚಿತ್ರದುರ್ಗ:

    ದೇಶದ ಪ್ರಧಾನಿ ನರೇಂದ್ರಮೋದಿರವರು ಇನ್ನು ಮೂರು ವರ್ಷದಲ್ಲಿ ದೇಶದ ಪ್ರತಿಯೊಬ್ಬರಿಗೂ ಮನೆ ನೀಡುವ ಕನಸು ಕಂಡಿದ್ದಾರೆ. ಹಾಗಾಗಿ ಮುಂದೆ ಯಾರಿಗೂ ವಸತಿ ಸಮಸ್ಯೆಯಿರುವುದಿಲ್ಲ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.ತಾಲೂಕಿನ ಬೊಮ್ಮೇನಹಳ್ಳಿಯ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎರಡು ಕೊಠಡಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮೂವತ್ತು ಲಕ್ಷ ರೂ.ವೆಚ್ಚದ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ನಂತರ ಆಶ್ರಯ ಯೋಜನೆಯಡಿ ಫಲಾನುಭವಿಗಳಿಗೆ ಹಕ್ಕುಪತ್ರಗಳನ್ನು ವಿತರಿಸಿ ಮಾತನಾಡಿದರು.

     ಬೊಮ್ಮೇನಹಳ್ಳಿ ದೊಡ್ಡ ಹೋಬಳಿ ಇಲ್ಲಿ ಹತ್ತಾರು ಜನಾಂಗದವರು ವಾಸ ಮಾಡುತ್ತಿದ್ದಾರೆ. 261 ಮಂದಿಗೆ ಆಶ್ರಯ ಯೋಜನೆಯಡಿ ಹಕ್ಕುಪತ್ರಗಳನ್ನು ನೀಡಲಾಗುವುದು. ಯಾರಿಗಾದರೂ ನಿವೇಶನ ಸಿಗದಿದ್ದರೆ ವಾದ ವಿವಾದ ಮಾಡಬೇಡಿ. ನನ್ನ ಗಮನಕ್ಕೆ ತನ್ನಿ ಹಂತ ಹಂತವಾಗಿ ಎಲ್ಲರಿಗೂ ನಿವೇಶನಗಳನ್ನು ನೀಡಿ ಮನೆಗಳನ್ನು ಕಟ್ಟಿಸಿಕೊಡುವ ವ್ಯವಸ್ಥೆ ಮಾಡಲಾಗುವುದೆಂದು ತಿಳಿಸಿದರು.

      ನಿವೇಶನ ಹಂಚಿಕೆಯಲ್ಲಿ ಯಾರಿಗೂ ತಾರತಮ್ಯವಾಗದಂತೆ ನೋಡಿಕೊಳ್ಳುವುದು ಗ್ರಾ.ಪಂ.ಜವಾಬ್ದಾರಿ. ಶಾಂತಿಸಾಗರದಿಂದ ನೀರು ಬರುತ್ತಿರುವ ಕಾರಣ ಕುಡಿಯುವ ನೀರಿಗೆ ಮೊದಲಿದ್ದಷ್ಟು ಸಮಸ್ಯೆಯಿಲ್ಲ. ಕೆಲವು ಕಡೆ ಸಾವಿರಾರು ಅಡಿ ಬೋರ್ ಕೊರೆದರು ನೀರು ಸಿಗುತ್ತಿಲ್ಲ. ಕಡ್ಲೆಗುದ್ದಿನಲ್ಲಿಯೂ ಆರು ಎಕರೆ ಜಮೀನಿನಲ್ಲಿ ನಿವೇಶನಗಳನ್ನು ನೀಡಲಾಗುವುದು. ನನ್ನ ಕ್ಷೇತ್ರದಲ್ಲಿ ಯಾರೂ ಮನೆ ಇಲ್ಲವೆಂದು ಹೇಳಬಾರದು. ಅದಕ್ಕಾಗಿ ಮುಂದಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಮನೆ ಕಟ್ಟಿಸಿಕೊಡುತ್ತೇನೆ. ಗಾಬರಿಯಾಗುವುದು ಬೇಡ ಎಂದು ಬೊಮ್ಮೇನಹಳ್ಳಿ ಗ್ರಾಮಸ್ಥರಲ್ಲಿ ವಿನಂತಿಸಿದರು.

     ಈ ಗ್ರಾಮಕ್ಕೆ ಈಗಾಗಲೇ 3 ಕೋಟಿ ರೂ.ಗಳನ್ನು ರಸ್ತೆ ಕಾಮಗಾರಿಗಾಗಿ ನೀಡಲಾಗಿದೆ ಇನ್ನೂ ಸುಮಾರು 1.50 ಕೋಟಿಯಷ್ಟು ಹಣ ರಸ್ತೆ ನಿರ್ಮಾಣಕ್ಕಾಗಿ ನೀಡಬೇಕಿದೆ ಅದನ್ನು ಮುಂದಿನ ದಿನದಲ್ಲಿ ನೀಡಲಾಗುತ್ತದೆ. ಪಕ್ಕದ ಕಡ್ಲೇಗುದ್ದ ಗ್ರಾಮದಲ್ಲಿಯೂ ಸಹಾ ಸುಮಾರು 6 ಎಕರೆ ಜಮೀನನ್ನು ಆಶ್ರಯ ಮನೆಗಳಿಗಾಗಿ ಗುರುತಿಸಲಾಗಿದೆ. ಮನೆಗಳನ್ನು ಹಂಚುವಾಗ ಏನಾದರು ವ್ಯತ್ಯಾಸವಾಗಿದ್ದರೆ ನನ್ನ ಗಮನಕ್ಕೆ ತರುವುದರ ಮೂಲಕ ಸರಿಪಡಿಸಲಾಗುತ್ತದೆ ಆದರೆ ಇದನ್ನು ಬಿಟ್ಟು ಬೇರೆ ರೀತಿಯ ಗಲಾಟೆಗಳಿಗೆ ಅವಕಾಶ ನೀಡಬೇಡಿ ಎಂದು ಗ್ರಾಮಸ್ಥರಲ್ಲಿ ಮನವಿ ಮಾಡಿದರು.ಬೊಮ್ಮೇನಹಳ್ಳಿ ಗ್ರಾ.ಪಂ.ಅಧ್ಯಕ್ಷೆ ಕೆಂಚಮ್ಮ, ಉಪಾಧ್ಯಕ್ಷ ರಮೇಶ್, ತಾಲೂಕು ಪಂಚಾಯಿತಿ ಸದಸ್ಯ ಸುರೇಶ್‍ನಾಯ್ಕ ಸೇರಿದಂತೆ ಗ್ರಾ.ಪಂ. ಸದಸ್ಯರುಗಳು ವೇದಿಕೆಯಲ್ಲಿದ್ದರು..   

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap