ಹಂಪಿ ಉತ್ಸವ ರದ್ಧತಿಗೆ ಏಕತಾ ವೇದಿಕೆ ಖಂಡನೆ

ದಾವಣಗೆರೆ: 

       ರಗಾಲದ ನೆಪದಲ್ಲಿ ಪ್ರಸಕ್ತ ಸಾಲಿನ ಐತಿಹಾಸಿಕ ಹಂಪಿ ಉತ್ಸವ ರದ್ದು ಮಾಡಿರುವ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಕ್ರಮ ಖಂಡಿಸಿ, ಕರ್ನಾಟಕ ಏಕತಾ ವೇದಿಕೆ ಪದಾಧಿಕಾರಿಗಳು ಅಪರ ಜಿಲ್ಲಾಧಿಕಾರಿ ಪದ್ಮ ಬಸವಂತಪ್ಪ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಬರಗಾಲದ ನೆಪದಲ್ಲಿ 2018-19ನೇ ಸಾಲಿನ ಐತಿಹಾಸಿಕ ಹಂಪಿ ಉತ್ಸವವನ್ನು ರದ್ದು ಮಾಡುತ್ತಿರುವುದನ್ನು ಅತ್ಯಂತ ಖಂಡನೀಯವಾಗಿದೆ.

           ಕರ್ನಾಟಕವಲ್ಲದೇ ಭಾರತದ ಇತಿಹಾಸದಲ್ಲಿ “ಸುವರ್ಣ ಯುಗವನ್ನು” ಪ್ರಪಂಚಕ್ಕೆ ಪರಿಚಯಿಸಿದ ವಿಜಯನಗರವೆಂಬ ಕನ್ನಡಿಗರ ಸಾಮ್ರಾಜ್ಯದ ವಿಜಯೋತ್ಸವದ ಸಂಕೇತವಾದ “ಹಂಪಿ ಉತ್ಸವವನ್ನು ಬರಗಾಲದ ನೆಪವೊಡ್ಡಿ ರದ್ದು ಮಾಡಿರುವುದು ಕನ್ನಡಿಗರಿಗೆ ಮಾಡಿರುವ ಅಪಮಾನ ಎಂದು ಮನವಿಪತ್ರದಲ್ಲಿ ಆಕ್ರೋಶ ವ್ಯಕ್ತಪಡಿಸಲಾಗಿದೆ.

         13ನೇ ಶತಮಾನದಲ್ಲಿ ಇಂದಿನ ಬಳ್ಳಾರಿಯ ಕಂಪ್ಲಿಯಲ್ಲಿ ಜನಿಸಿದ ಕುಮಾರರಾಮ ಎಂಬ ಕನ್ನಡಿಗ ತನ್ನ ಶೌರ್ಯ ಪರಾಕ್ರಮದಿಂದ ಹೋರಾಡಿ ಮುಗ್ಧರಿಗೆ, ಹಿರಿಯರಿಗೆ ಹಾಗೂ ಕಷ್ಟದಲ್ಲಿದ್ದವರ ರಕ್ಷಕನಾಗಿದ್ದ ಆದರೆ, ಮಹಮದ್ ಬಿನ್ ತೊಘಲಕ್‍ನ ಕುತಂತ್ರದಿಂದ ಕ್ರಿಸ್ತಶಕ 1320ರಲ್ಲಿ ಸಾವನ್ನಪ್ಪಿದ, ಈತನ ಮಾವನ ಮಕ್ಕಳಾದ ಹಕ್ಕಬುಕ್ಕರು ಶ್ರೀಗುರು ವಿದ್ಯಾರಣ್ಯರ ಆಶೀರ್ವಾದದಿಂದ ಕ್ರಿಸ್ತಶಕ 1336ರಲ್ಲಿ ವಿಜಯನಗರ ಸಾಮ್ರಾಜ್ಯ ಸ್ಥಾಪಿಸಿ, ವೈರಿಗಳನ್ನು ಮೆಟ್ಟಿ ಹಂಪಿಯನ್ನು ರಾಜಧಾನಿಯನ್ನಾಗಿಸಿ ಹೋರಾಡುತ್ತಾ ಶತೃಗಳ ಮೈಚಳಿ ಬಿಡಿಸಿದ ಕೃಷ್ಣದೇವರಾಯರವರೆಗೂ ಸಾಹಿತ್ಯ, ಕಲೆ, ವಾಸ್ತುಶಿಲ್ಪ, ಆಡಳಿತ ಪ್ರತಿಯೊಂದರಲ್ಲೂ ವಿಶ್ವಕ್ಕೆ ಸುವರ್ಣಯುಗವೆಂದು ಪರಿಚಯಿಸಿದ ಮಹಾನ್ ಸಾಮ್ರಾಜ್ಯ ಇದಾಗಿದೆ.

         ಈ ಸಾಮ್ರಾಜ್ಯದ ವಿಜಯೋತ್ಸವ ಪ್ರತೀಕವಾಗಿ ಹಂಪಿ ಉತ್ಸವ ಆಚರಿಸುತ್ತಾ, ಕಲೆ ಸಾಹಿತ್ಯ, ಸಾಹಸ, ವಸ್ತುಪ್ರದರ್ಶನದ ಮೂಲಕ ವಿದೇಶಿಗರ ಕಾಶಿಯಾಗಿರುವ ಹಾಗೂ ಭಾರತದಾದ್ಯಂತ ಭಾರತ ಸರ್ಕಾರವೇ ಹಂಪಿಯ ಕಲ್ಲಿನ ರಥದ ಚಿತ್ರವಿರುವ ನೋಟನ್ನು ಪರಿಚಯಿಸಿ ವಿಜಯನಗರ ಸಾಮ್ರಾಜ್ಯದ ಕಲೆ ಮತ್ತು ವಾಸ್ತುಶಿಲ್ಪಕ್ಕೆ ಗೌರವಿಸಿದೆ. ಅಲ್ಲದೆ, ವಿಶ್ವವಿಖ್ಯಾತ ಮೈಸೂರ ದಸರಾ ಹಬ್ಬಕ್ಕೂ ಪ್ರೇರಕವಾಗಿರುವ ಹಂಪಿ ಉತ್ಸವವನ್ನು ಯಾವುದೇ ಕಾರಣಕ್ಕೂ ರದ್ದು ಮಾಡಬಾರದು ಎಂದು ಒತ್ತಾಯಿಸಿರುವ ಕರ್ನಾಟಕ ಏಕತಾ ವೇದಿಕೆ ಒಂದು ವೇಳೆ ರದ್ದು ಮಾಡಿದ್ದೇ ಆದರೆ, ಬೆಂಗಳೂರು ಚಲೋ ನಡೆಸಬೇಕಾಗುತ್ತದೆ ಎಂದು ಸರ್ಕಾರಕ್ಕೆ ಮನವಿ ಪತ್ರದ ಮೂಲಕ ಎಚ್ಚರಿಸಿದೆ.ಈ ಸಂದರ್ಭದಲ್ಲಿ ವೇದಿಕೆಯ ರಾಜ್ಯಾಧ್ಯಕ್ಷ ಎನ್.ಹೆಚ್.ಹಾಲೇಶ್, ದಕ್ಷಿಣ ಯುವ ಘಟಕ ಅಧ್ಯಕ್ಷ ನಾಗರಾಜ, ಹಳೇಬಾತಿ ಗ್ರಾಮ ಘಟಕದ ಅಧ್ಯಕ್ಷ ಹಾಲೇಶ್, ಸಂತೋಷ್, ಶಿವರಾಜ್ ಮತ್ತಿತರರು ಹಾಜರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link