ಬೆಂಗಳೂರು:
ದಕ್ಷ ಹಾಗು ಪ್ರಮಾಣಿಕ ಪೊಲೀಸ್ ಅಧಿಕಾರಿ ಎಂದೇ ಖ್ಯಾತರಾಗಿದ್ದ ಅಣ್ಣಾಮಲೈ ಸ್ವಯಂ ನಿವೃತ್ತಿ ಘೋಷಿಸಿ, ಪೊಲೀಸ್ ಇಲಾಖೆಯಿಂದ ದೂರ ಸರಿದ ಬೆನ್ನಲ್ಲೇ ಕರ್ನಾಟಕದ ಮತ್ತೋರ್ವ ಐಪಿಎಸ್ ಅಧಿಕಾರಿ ಸಂಜಯ್ ಸಹಾಯ್ ಸ್ವಯಂ ನಿವೃತ್ತಿ ಘೋಷಿಸಿದ್ದಾರೆ.
ಇದೀಗ ಕರ್ನಾಟಕ ರಾಜ್ಯ ಗಣಕ ಪರಿಷತ್ ಎಡಿಜಿಪಿಯಾಗಿರುವ ಸಂಜಯ್ ಸಹಾಯ್ ಸ್ವಯಂನಿವೃತ್ತಿ ಪಡೆಯಲು ಮುಂದಾಗಿದ್ದಾರೆ. ಇದಕ್ಕೆ ರಾಜ್ಯ ಸರ್ಕಾರ ಅನುಮತಿ ಕೂಡ ನೀಡಿದೆ. ಮಾ. 31ರವರೆಗೆಸಂಜಯ್ ಸಹಾಯ್ ಕರ್ತವ್ಯ ನಿರ್ವಹಿಸಲಿದ್ದಾರೆ.ರಾಜ್ಯ ಪೊಲೀಸ್ ಕಂಪ್ಯೂಟರ್ ವಿಭಾಗದ ಎಡಿಜಿಪಿ ಆಗಿರುವ ಸಂಜಯ್ ಸಹಾಯ್ 1989ರ ಬ್ಯಾಚ್ನ ಐಪಿಎಸ್ ಅಧಿಕಾರಿ. ಇವರ ಸ್ವಯಂ ನಿವೃತ್ತಿಯ ನಿರ್ಧಾರಕ್ಕೆ ಕಲಂ 16(2) DCRB ನಿಯಮದಂತೆ ರಾಜ್ಯ ಸರ್ಕಾರ ಅನುಮತಿ ನೀಡಿ, ಆದೇಶ ಹೊರಡಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
