ಬೆಂಗಳೂರು
ಮುಂಗಾರು ಮಳೆ ಪ್ರಾರಂಭಕ್ಕೆ ಇನ್ನೊಂದು ತಿಂಗಳು ಬಾಕಿ ಇದೆ ಮಳೆ ಹೆಚ್ಚಾದರೆ ಬೆಂಗಳೂರು ತತ್ತರಿಸಿ ಹೋಗುತ್ತದೆ. ಮಳೆಯಿಂದ ಉಂಟಾಗುವ ಅವಘಡಗಳನ್ನು ತಡೆಯಲು ಸಂಚಾರ ಟ್ರಾಫಿಕ್ ಪೊಲೀಸರು ಮುಂದಾಗಿದ್ದಾರೆ.
ನಗರದಲ್ಲಿ ಸಣ್ಣದೊಂದು ಮಳೆ ಬಂದರೆ ಸಾಕು ಮರಗಳು ರಸ್ತೆಗೆ ಉರುಳಿ ಬಿಡುತ್ತವೆ. ರಸ್ತೆ ತುಂಬೆಲ್ಲ ನೀರು ನಿಂತು, ಕಿಲೋಮಿಟರ್ ಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಗುತ್ತದೆ. ಮಳೆಯ ಸಂದರ್ಭದಲ್ಲಿ ಪಾತ್ ಹೋಲ್‍ಗೆ ಬೈಕ್ ಇಳಿದು ಕೈಕಾಲು ಮುರಿದುಕೊಳ್ಳೋದರಿಂದ ಹಿಡಿದು, ವಾಹನ ಸವಾರರು ಜೀವ ಕಳೆದುಕೊಳ್ಳುತ್ತಾರೆ. ಮಳೆಗಾಲದಲ್ಲಿ ಅವೈಜ್ಞಾನಿಕ ವಿದ್ಯುತ್ ಕಂಬಗಳು, ಟ್ರಾನ್ಸ್ ಫಾರ್ಮರ್‍ಗಳಿಂದ ಮಕ್ಕಳು, ಸಾರ್ವಜನಿಕರು ಕರೆಂಟ್ ಶಾಕ್ ಹೊಡೆದು ಪ್ರಾಣ ಕಳೆದುಕೊಂಡಿರೋ ಉದಾಹರಣೆಗಳು ಸಾಕಷ್ಟಿವೆ.
ಇಷ್ಟೆಲ್ಲಾ ಅವಘಡಗಳನ್ನು ತಡೆಯುವ ನಿಟ್ಟಿನಲ್ಲಿ ಬೆಂಗಳೂರು ಸಂಚಾರ ವಿಭಾಗದ ಹೆಚ್ಚುವರಿ ಪೆÇಲೀಸ್ ಆಯುಕ್ತ ಹರಿಶೇಖರನ್, ತಮ್ಮ ಸಿಬ್ಬಂದಿ ಮೂಲಕ ನಗರದಲ್ಲಿ ಎಲ್ಲೆಲ್ಲಿ ಏನೇನ್ ಸಮಸ್ಯೆ ಆಗಲಿದೆ, ಹೇಗೆ ಟ್ರಾಫಿಕ್ ಜಾಮ್ ಆಗಲಿದೆ ಯಾವ್ಯಾವ ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕು ಎನ್ನುವ ವರದಿ ಸಿದ್ದಪಡಿಸಿದ್ದಾರೆ.
ವರದಿಯಲ್ಲಿ ಏನಿದೆ
*ನಗರದ 45 ಪ್ರದೇಶ 130 ಕಡೆಗಳ ರಸ್ತೆಗಳಲ್ಲಿ ಮಳೆ ನೀರು ನಿಂತು ಟ್ರಾಫಿಕ್ ಜಾಮ್ ಉಂಟಾಗುವುದನ್ನು ಗುರುತಿಸಲಾಗಿದೆ.221 ಪಾದಚಾರಿ ಮಾರ್ಗಗಳ ಬಳಿ 86 ಸ್ಕೈವಾಕ್ ಹಾಗೂ ಮೇಲುಸೇತುವೆಗಳು ನಿರ್ಮಿಸಬೇಕಿದೆ.34 ಸುರಂರ್ಗ ಮಾರ್ಗ, 213 ಕಡೆಗಳಲ್ಲಿ ಪಾದಚಾರಿ ಮಾರ್ಗಗಳ ದುರಸ್ತಿಗೆ ಕ್ರಮ ಕೈಗೊಳ್ಳಬೇಕಾಗಿದೆ 478 ಭಾಗಗಳಲ್ಲಿ ಜಂಕ್ಷನ್ ಗಳನ್ನು ಅಭಿವೃದ್ಧಿಗೊಳಿಸುವುದು, 292 ಜಾಗಗಳಲ್ಲಿ ಕಾಮಗಾರಿಯನ್ನು ತ್ವರಿತವಾಗಿ ಮುಗಿಸುವುದನ್ನು ವರದಿಯಲ್ಲಿ ಪ್ರಸ್ತಾಪಿಸಿದ್ದಾರೆ.
97 ವಿದ್ಯುತ್ ಕಂಬ ಹಾಗೂ 76 ಟ್ರಾನ್ಸ್ ಫಾರ್ಮರ್ ಸ್ಥಳಾಂತರ. ಹೊಸದಾಗಿ 105 ವಿದ್ಯುತ್ ಕಂಬ ಅಳವಡಿಕೆ.47 ಅಪಾಯಕಾರಿ ಅಕ್ಸಿಡೆಂಟ್ ಜೋನ್ಸ್‍ಗಳಲ್ಲಿ ಅಪಘಾತಗಳ ತಡೆಗೆ ಕ್ರಮ ಹೊಸದಾಗಿ 227 ಜಾಗಗಳಲ್ಲಿ ರಸ್ತೆ ಉಬ್ಬುಗಳ ನಿರ್ಮಾಣ, ಅವೈಜ್ಞಾನಿಕವಾಗಿರುವ 131 ಹಂಪ್ಸ್ ಗಳ ತೆರವು ನಗರದ 52 ಕಡೆಗಳಲ್ಲಿ ರಸ್ತೆಗೆ ಹೊಂದಿಕೊಂಡಂತೆ ಕಸದ ರಾಶಿ ಹಾಕುತ್ತಿದ್ದು, ಅವುಗಳ ತೆರವಿಗೆ ಕ್ರಮ ಕೈಗೊಳ್ಳಬೇಕಿರುವುದನ್ನು ವರದಿಯಲ್ಲಿ ತಿಳಿಸಿದ್ದಾರೆವರದಿಯನ್ನು ಹೆಚ್ಚುವರಿ ಆಯುಕ್ತ ಹರಿಶೇಖರನ್ ಅವರು ಬಿಬಿಎಂಪಿ ಸೇರಿದಂತೆ ಸಂಬಂಧಪಟ್ಟ ಎಲ್ಲಾ ಇಲಾಖೆಗೆ ನೀಡಿ ಮಳೆಗಾಲ ಪ್ರಾರಂಭಕ್ಕೂ ಮುನ್ನವೇ ಮುಂಜಾಗ್ರತೆ ವಹಿಸುವಂತೆ ಮನವಿ ಮಾಡಿದ್ದಾರೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








