ಬೆಂಗಳೂರು
ನಂಬಿಕೆಯ ಮೇಲೆ ಮನೆಗೆ ಬಂದಿದ್ದಾಗ ಕೂರಿಸಿ ಸ್ನಾನಕ್ಕೆ ಹೋಗಿದ್ದ ಯುವತಿಯ ಬೆತ್ತಲೆ ಫೋಟೋ ತೆಗೆದು ಬ್ಲಾಕ್‍ಮೇಲ್ ಮಾಡುತ್ತಿರುವ ಕಾಮುಕ ಯುವಕನಿಗಾಗಿ ಗಿರಿನಗರ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ.
ಆಕ್ಸೆಂಚರ್ ಕಂಪನಿಯ ಉದ್ಯೋಗಿ ಆನಂದ್ ಇಮ್ಯಾನುಯೆಲ್ ವಿರುದ್ಧ ಬ್ಲಾಕ್‍ಮೇಲ್ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. ಆನಂದ್ ಹಾಗೂ ಯುವತಿ ಆಕ್ಸೆಂಚರ್‍ನಲ್ಲಿ ಕೆಲಸ ಮಾಡುತ್ತಿದ್ದು ಕೆಲ ದಿನಗಳ ಹಿಂದೆ ಸಹೋದ್ಯೋಗಿ ಆನಂದ್ ಗಿರಿನಗರದ ಯುವತಿಯ ಮನೆಗೆ ಬಂದಿದ್ದ ಆತನನ್ನು ನಂಬಿದ ಮನೆಯೊಳಗೆ ಕೂರಿಸಿ ಸ್ನಾನಕ್ಕೆ ಹೋಗಿದ್ದರು.
ಈ ವೇಳೆ ಆನಂದ್ ಯುವತಿ ಸ್ನಾನ ಮಾಡುವ ವಿಡಿಯೋವನ್ನು ತನ್ನ ಫೋನಲ್ಲಿ ಸೆರೆ ಹಿಡಿದಿದ್ದ. ಬಳಿಕ ಅದನ್ನು ಇಟ್ಟುಕೊಂಡು ಯುವತಿಗೆ ನಾನು ಎಲ್ಲಿ ಕರೆಯುತ್ತೇನೋ ಅಲ್ಲಿಗೆ ನೀನು ಬರಬೇಕು ಒಂದು ವೇಳೆ ನೀನು ಬರದಿದ್ದರೆ ಈ ವಿಡಿಯೋವನ್ನು ಫೇಸ್‍ಬುಕ್‍ನಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಈ ಸಂಬಂಧ ಆಕೆ ಗಿರಿನಗರ ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








