ಬೆಂಗಳೂರು
ಅನಧಿಕೃತವಾಗಿ ಚಿನ್ನ, ಬೆಳ್ಳಿ ಆಭರಣಗಳ ಮೇಲೆ 916 ಹಾಲ್ ಮಾರ್ಕ್ ಲೋಗೋ ಮುದ್ರಿಸಿಕೊಡುತ್ತಿದ್ದ ಅಂಗಡಿಯ ಮೇಲೆ ದಾಳಿ ನಡೆಸಿರುವ ಸಿಸಿಬಿ ಪೆÇಲೀಸರು, ಖತರ್ನಾಕ್ ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ .ಶಿವಾಜಿನಗರದ ಚಿನ್ನಸ್ವಾಮಿ ಮೊದಲಿಯಾರ್ ಸ್ಟ್ರೀಟ್ನ ಸುದರ್ಶನ್ ಜೈನ್ (28) ಬಂಧಿತ ಆರೋಪಿಯಾಗಿದ್ದಾನೆ. ಬಂಧಿತನಿಂದ 60 ಗ್ರಾಂ. ತೂಕದ ಲಕ್ಷ್ಮಿ ತಾಳಿ ಕಾಸುಗಳನ್ನು ವಶಪಡಿಸಿಕೊಳ್ಳಲಾಗಿದೆ
ಆರೋಪಿಯು ನಗರ್ತಪೇಟೆಯ ಕೆಂಪಣ್ಣ ಲೇನ್ನ ರಾಜರಾಜೇಶ್ವರಿ ಮಾರ್ಕೆಟ್ನ ಅಂಗಡಿಯಲ್ಲಿ ಆರ್ಟಿಎನ್ ಟೇಸ್ಟಿಂಗ್ ಹಾಗೂ ಹಾಲ್ ಮಾರ್ಕ್ ಸೆಂಟರ್ ಇಟ್ಟುಕೊಂಡು ಅನಧಿಕೃತವಾಗಿ ಚಿನ್ನ, ಬೆಳ್ಳಿ ಆಭರಣಗಳ ಮೇಲೆ 916 ಹಾಲ್ ಮಾರ್ಕ್ ಲೋಗೋ ಮುದ್ರಿಸಿಕೊಡುತ್ತಿದ್ದ ಖಚಿತ ಮಾಹಿತಿ ಆಧರಿಸಿ, ದಾಳಿ ನಡೆಸಲಾಗಿದೆ.
ದಾಳಿ ವೇಳೆ ಆರೋಪಿಯು ಯಾವುದೇ ಪರವಾನಗಿ ಇಲ್ಲದೆ, ಅಕ್ರಮವಾಗಿ ಕಳೆದ ಆರು ತಿಂಗಳುಗಳಿಂದ ಈ ಕೃತ್ಯ ನಡೆಸುತ್ತಿರುವುದು ಪತ್ತೆಯಾಗಿದೆ. ಹಲಸೂರು ಗೇಟ್ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಮುಂದಿನ ತನಿಖೆ ಕೈಗೊಳ್ಳಲಾಗಿದೆ ಎಂದು ಜಂಟಿ ಪೆÇಲೀಸ್ ಆಯುಕ್ತ ಸಂದೀಪ್ ಪಾಟೀಲ್ ಅವರು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








