ಬೆಂಗಳೂರು
ಹಳೇ ಸಿನಿಮಾಗಳಂತೆ ಸಾಮಾನ್ಯವಾಗಿ ಪೊಲೀಸರು ಎಲ್ಲಾ ಮುಗಿದಮೇಲೆ ಬರುತ್ತಾರೆ ಎಂಬುದು ಹಳೆಯ ಮಾತು ಇನ್ನು ಮುಂದೆ ಹಾಗಲ್ಲ ಎಂದು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದಾರೆ.
100ಕ್ಕೆ ಕರೆ ಮಾಡಿದ ಕೇವಲ ಒಂಬತ್ತು ನಿಮಿಷದಲ್ಲಿ ಹೊಯ್ಸಳ ವಾಹನ ಘಟನೆ ನಡೆದ ಸ್ಥಳದಲ್ಲಿ ಹಾಜರಿರುತ್ತದೆ ಇಎರ ಸತ್ಯಾಸತ್ಯತೆಯನ್ನು ಸಾರ್ವಜನಿಕರು ಕರೆ ಮಾಡಿ ಪರೀಕ್ಷಿಸಬಹುದು’ ಎಂದು ಹೇಳಿದ್ದಾರೆ. ತೆಲಂಗಾಣದ ಪಶುವೈದ್ಯೆ ಮೇಲೆ ನಡೆದಿರುವ ಅತ್ಯಾಚಾರ ಘಟನೆ ದೇಶವನ್ನೇ ಬೆಚ್ಚಿ ಬೀಳಿಸಿದ್ದು, ಈ ರೀತಿಯ ಘಟನೆ ಬೆಂಗಳೂರಿನಲ್ಲಿ ನಡೆಯುವ ಆತಂಕವಿಲ್ಲ ಎಂದು ಆಯುಕ್ತ ಭಾಸ್ಕರ್ ರಾವ್ ಭರವಸೆ ನೀಡಿದರು.
ನಗರದ ಮಹಿಳೆಯರ ಸುರಕ್ಷತೆಗೆ ಪೊಲೀಸರು ಬದ್ಧವಾಗಿದ್ದು, ಮಹಿಳೆಯರ ಸುರಕ್ಷತೆಗಾಗಿ ‘ಸುರಕ್ಷಾ’ ಆಪ್ ಇದ್ದು ಅದನ್ನು ಬಳಸಿಕೊಳ್ಳುವಂತೆ ಭಾಸ್ಕರ್ ರಾವ್ ಹೇಳಿದರು. ಸುರಕ್ಷಾ ಆಪ್ ನಿಂದ ಕರೆಮಾಡಿದ ಕರೆ ಬರಲಿಲ್ಲವೆಂದರೂ ವಿಡಿಯೋ ಸನಿಹದ ಕಂಟ್ರೋಲ್ ರೂಂ ಗೆ ಬರುತ್ತದೆ ಎಂದು ಆಯುಕ್ತರು ಮಾಹಿತಿ ನೀಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ