ತುಮಕೂರು
ಹೈದರಾಬಾದ್‍ನಲ್ಲಿ ನಡೆದ ಹತ್ಯಾಚಾರದ ಘಟನೆಗೆ ಸಂಬಂಧಿಸಿದಂತೆ ಅಲ್ಲಿನ ಪೋಲೀಸ್ ಇಲಾಖೆ ಕೈಗೊಂಡ ನಿರ್ಧಾರದಿಂದ ಮುಂದೆ ಅತ್ಯಾಚಾರ ಮಾಡಬೇಕೆಂಬ ಆಲೋಚನೆ ಕೂಡ ಯಾರು ಮಾಡುವುದಿಲ್ಲ. ಅಂತಹ ದಿಟ್ಟ ನಿರ್ಧಾರ ಕೈಗೊಂಡ ಪೋಲೀಸರಿಗೆ ನಮ್ಮ ಅಭಿನಂದನೆಗಳು ಎಂದು ಆಟೋ ಚಾಲಕ ಸಂಘದ ಪ್ರತಾಪ್ ತಿಳಿಸಿದರು.
ನಗರದ ಟೌನ್‍ಹಾಲ್ ವೃತ್ತದಲ್ಲಿ ವಿವಿಧ ಆಟೋ ಚಾಲಕರ ಸಂಘಗಳಿಂದ ಹಮ್ಮಿಕೊಳ್ಳಲಾಗಿದ್ದ ಸಂಭ್ರಮಾಚರಣೆಯನ್ನುದ್ದೇಶಿಸಿ ಮಾತನಾಡಿದ ಅವರು ನವೆಂಬರ್ 27ರಂದು ನಡೆದ ಸೈಬರಾಬಾದ್ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಪಶುವೈದ್ಯೆಯ ಮೇಲೆ ನಾಲ್ವರು ಕಾಮುಕರು ಅತ್ಯಾಚಾರವೆಸಗಿ ಆ ಮಹಿಳೆಯ ಮೇಲೆ ಪೆಟ್ರೋಲ್ ಸುರಿದು ಕೊಲೆ ಮಾಡಿದ್ದರು.
ಘಟನೆ ನಡೆದು ಒಂದು ವಾರದೊಳಗೆ ನಾಲ್ವರು ಆರೋಪಿಗಳನ್ನು ಸೆರೆ ಹಿಡಿದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಗುರುವಾರದಂದು ಕೊಲೆ ಮಾಡಿದ ಸ್ಥಳದ ಮಹಜರು ಮಾಡಲೆಂದು ಆರೋಪಿಗಳನ್ನು ಕರೆ ತಂದಾಗ ಪರಾರಿಯಾಗಲು ಯತ್ನಿಸಿದ್ದು, ಆ ನಾಲ್ವರು ಆರೋಪಿಗಳಿಗಳ ಮೇಲೆ ಗುಂಡು ಹಾರಿಸಿದ್ದಾರೆ. ಈ ರೀತಿಯಾಗಿ ಸಾವನ್ನಪ್ಪಿದ್ದ ವೈದ್ಯೆಗೆ ನ್ಯಾಯವನ್ನು ಒದಗಿಸಿಕೊಟ್ಟಿದ್ದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.
ತೆಲಂಗಾಣ ಪೋಲೀಸರು ತೆಗೆದುಕೊಂಡ ತೀರ್ಮಾನಕ್ಕೆ ಅಖಂಡ ಭಾರತವು ಗೌರವಿಸುತ್ತಿದೆ. ಇಂತಹ ತೀರ್ಮಾನ ನ್ಯಾಯಬದ್ಧವಾಗಿದೆ. ಇಂತಹ ಕಾಮುಕರಿಗೆ ಇನ್ನೂ ಕಠಿಣವಾದ ಶಿಕ್ಷೆ ನೀಡುವಂತಾಗಬೇಕು. ಈ ಘಟನೆಯಿಂದ ಪೋಲೀಸ್ ಇಲಾಖೆಯ ಮೇಲೆ ಅಪಾರವಾದ ನಂಬಿಕೆ ಉಂಟಾಗಿದೆ.
ಇಂತಹ ಘಟನೆಗಳಿಗೆ ಸಂಬಂಧಿಸಿದಂತೆ ಪೋಲೀಸ್ ಇಲಾಖೆಗೆ ನಮ್ಮ ಪ್ರೋತ್ಸಾಹ ಇರುತ್ತದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಜೈ ಭೀಮ್ ಆಟೋ ನಿಲ್ದಾಣ ಸಂಘದ ಅಧ್ಯಕ್ಷ ಮಂಜು, ಎಚ್‍ಎಂಬಿಎಸ್ ಆಟೋ ಚಾಲಕರ ಸಂಘದ ಅಧ್ಯಕ್ಷ ಇಂತಿಯಾಜ್ ಮತ್ತು ಸಂಗಡಿಗರು, ಟೌನ್‍ಹಾಲ್ ಆಟೋಚಾಲಕರ ಸಂಘದ ಅಧ್ಯಕ್ಷ ಜಗ್ಗಣ್ಣ ಹಾಗೂ ಸಂಗಡಿಗರು, ತಾಲ್ಲೂಕು ಅಧ್ಯಕ್ಷರು ಕುಮಾರಸ್ವಾಮಿ, ಖಾಸಗಿ ಶಾಲಾ ವಾಹನ ಚಾಲಕರ ಸಂಘದ ಜಿಲ್ಲಾ ಮುಖಂಡ ಮಂಜು, ಶಿವಕುಮಾರ ಸ್ವಾಮೀಜಿ ಆಟೋ ನಿಲ್ದಾಣ ಚಾಲಕರ ಸಂಘದ ಅಧ್ಯಕ್ಷ ಮಂಜುನಾಥ್, ವಾಲ್ಮೀಕಿ ಸೇನೆ ಮುಖಂಡ ರಂಗಪ್ಪನಾಯಕ ಸೇರಿದಂತೆ ನೂರಾರು ಆಟೋ ಚಾಲಕರು ಭಾಗವಹಿಸಿದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ