ಬೆಂಗಳೂರು
ತಲಸ್ಸೇಮಿಯಾ, ಕ್ಯಾನ್ಸರ್, ಮೂತ್ರಪಿಂಡ, ಇನ್ನಿತರ ಮಾರಣಾಂತಿಕ ಆನಾರೋಗ್ಯ ಪೀಡಿತ ಐವರು ಮಕ್ಕಳ ಕೊನೆಯ ಆಸೆಯನ್ನು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಈಡೇರಿಸುವ ಮೂಲಕ ಭಾವನಾತ್ಮಕ ಕ್ಷಣಕ್ಕೆ ಸಾಕ್ಷಿಯಾದರು.
ಸದಾ ಕಾನೂನು ಸುವ್ಯವಸ್ಥೆ ಅಪರಾಧಗಳ ಬಗ್ಗೆ ಚರ್ಚೆ, ಸಭೆ, ಅಪರಾಧಿಗಳನ್ನು ಕರೆತಂದು ಮಾಹಿತಿ ನೀಡುವುದು ಸೇರಿದಂತೆ, ಇನ್ನಿತರ ಕಾರ್ಯ ಚಟುವಟಿಕೆಗಳು ನಡೆಯುತ್ತಿದ್ದ, ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸೋಮವಾರ ಮಾರಣಾಂತಿಕ ಅನಾರೋಗ್ಯ ಪೀಡಿತ ಐವರು ಮಕ್ಕಳು ಕೆಲ ಕಾಲ ಅಧಿಕಾರ ಚಲಾಯಿಸಲು ಅನುವು ಮಾಡಿಕೊಡಲಾಯಿತು.
ಮೇಕ್ ಎ ವಿಶ್ ಫೌಂಡೇಷನ್ ಮಾರಣಾಂತಿಕ ರೋಗದಿಂದ ಬಳಲುತ್ತಿದ್ದ ಮೊಹಮ್ಮದ್ ಸಾಕಿದ್ (10), ಶ್ರೀವಾಣಿ ಬಾತ್ಲ (8), ಅಫ್ರಾದ್ ಪಾಷ (7), ಸೈಯ್ಯದ್ ಇಮಾದ್ (5) ಹಾಗೂ ರುತನ್ ಕುಮಾರ್ (8) ಅವರನ್ನು ನಗರ ಪೆÇಲೀಸ್ ಆಯುಕ್ತರ ಕಚೇರಿಗೆ ಕರೆತಂದರು. ಕಚೇರಿಯ ಮುಂಭಾಗದಲ್ಲಿ ಈ ಐವರು ಮಕ್ಕಳಿಗೆ ಪೊಲೀಸ್ ಇಲಾಖೆ ವತಿಯಿಂದ ಗೌರವ ವಂದನೆ ಸಲ್ಲಿಸಲಾಯಿತು.
ಗೌರವ ವಂದನೆ ಸ್ವೀಕರಿಸಿದ ಮಕ್ಕಳನ್ನು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು, ತಮ್ಮ ಕಚೇರಿಗೆ ಕರೆದುಕೊಂಡು ಹೋಗಿ, ಬೇಟನ್ ನೀಡಿ, ತಮ್ಮ ಖುರ್ಚಿಯಲ್ಲಿ ಕೂರಿಸಿ, ಸೆಲ್ಯೂಟ್ ಮಾಡಿದರು. ಕಮಿಷನರ್ ಅಧಿಕಾರ ಚಲಾವಣೆಯ ಮಾಹಿತಿಯನ್ನು ಮಕ್ಕಳಿಗೆ ನೀಡಲಾಯಿತು. ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಇಂತಹ ಭಾವನಾತ್ಮಕ ಕ್ಷಣ ನಡೆದಿದ್ದು, ಇತಿಹಾಸದಲ್ಲಿ ಇದೇ ಮೊದಲು.ಮಾರಣಾಂತಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳಿಗೆ ತಮ್ಮ ಖುರ್ಚಿಯಲ್ಲಿ ಕೂರಿಸಿ, ಗೌರವ ನೀಡಿ ಅವರಲ್ಲಿ ಹೊಸಉತ್ಸಾಹ ತುಂಬಲಾಗಿದೆ.
ಇದರಿಂದ ಅವರ ಕುಟುಂಬದವರಿಗೂ ಧೈರ್ಯ ಬಂದಂತಾಗಿದೆ ಎಂದು ಭಾಸ್ಕರ್ ರಾವ್ ಅವರು ತಿಳಿಸಿದರು.ಕಚೇರಿಯಲ್ಲಿ ಕುಳಿತ ಮಕ್ಕಳಿಗೆ ಪೊಲೀಸ್ ಅಧಿಕಾರಿಯಾಗುವ ಕನಸು ಹೊಂದಿದ್ದರು. ಸಬ್‍ಇನ್ಸ್‍ಪೆಕ್ಟರ್ ಮಾಡುವಂತೆ, ಮೇಕ್ ಎ ವಿಶ್ ಫೌಂಡೇಷನ್ ಕೇಳಿಕೊಂಡಿತ್ತು. ಆದರೆ ನಾನು, ನನ್ನ ಖುರ್ಚಿಯಲ್ಲಿ ಕೂರಿಸಲು ಅವಕಾಶ ಮಾಡಿಕೊಟ್ಟೆ. ಇದರಿಂದ ಮಕ್ಕಳಲ್ಲಿ ನವಚೈತನ್ಯ ಉಂಟಾಗಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.
ಮಕ್ಕಳಲ್ಲಿ ಹಾಸನದ ಅರಸಿಕೆರೆಯ ರುತನ್ ಕುಮಾರ್, ಮೂತ್ರಚೀಲ ಬೆಳವಣಿಗೆ ಇಲ್ಲದೆ, ತೊಂದರೆ ಅನುಭವಿಸುತ್ತಿದ್ದಾನೆ. 9 ತಿಂಗಳ ಮಗುವಿನಿಂದ ಆತನಿಗೆ ಈ ಸಮಸ್ಯೆ ಉಂಟಾಗಿದ್ದು, ಆತನ ಚಿಕಿತ್ಸೆ ಅತ್ಯಂತ ಕಷ್ಟಕರವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








