ಬೆಂಗಳೂರು
ನಗರದ ಗಿರಿನಗರ ಪೊಲೀಸ್ ಅಚ್ಚರಿ ಪಡುವಂತಹ ಪ್ರಕರಣ ದಾಖಲಾಗಿದೆ ಸುಶ್ಮಿತ ಎನ್ನುವ ಯುವತಿ ಠಾಣೆಗೆ ನೀಡಿರುವ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆಗಿಳಿದ ಪೊಲೀಸರಿಗೆ ಶಾಕ್ ಮೇಲೆ ಶಾಕ್ ಸಿಕ್ಕಿದೆ.
ಏಕೆಂದರೆ ಯುವತಿ ತನ್ನೊಂದಿಗೆ ಕೆಲಸ ಮಾಡುತ್ತಿದ್ದ ಯುವಕನನ್ನು ಬೆದರಿಸಲು ದೂರು ನೀಡಿ ರಾದ್ದಾಂತ ಮಾಡಿರುವುದು ಕಂಡು ಬಂದಿದ್ದು ಆಕೆಯ ಈ ಕೃತ್ಯಕ್ಕೆ ಕಾರಣವೇನು ಎಂಬುದರ ತನಿಖೆ ಕೈಗೊಂಡಿದ್ದಾರೆ.
ನಾನು ಖಾಸಗಿ ಕಂಪನಿಯಲ್ಲಿ ಹೆಚ್ ಆರ್ ಆಗಿ ಕೆಲಸ ಮಾಡುತ್ತಿದ್ದೇನೆ. ಆದರೆ ನನ್ನನ್ನ ಪ್ರತಿದಿನ ಯಾರೋ ಹಿಂಬಾಲಿಸುತ್ತಿದ್ದಾರೆ, ಬೇರೆ ಬೇರೆ ಫೋನ್ ನಂಬರ್ ನಿಂದ ಕಾಲ್ ಮಾಡಿ ಕೊಲೆ ಬೆದರಿಕೆ ಹಾಕುತ್ತಾರೆ.ನಾನು ಮನೆಯಲ್ಲಿರುವ ವೇಳೆ ಖಾಸಗಿ ವಿಡಿಯೋಗಳನ್ನೂ ನನ್ನ ಮತ್ತು ಮನೆಯ ಸದಸ್ಯರಿಗೆ ಕಳುಹಿಸುತ್ತಿದ್ದಾರೆ.
ಕೆಲ ದಿನಗಳ ಹಿಂದೆ ಸಿಲ್ಕ್ ಬೋರ್ಡ್ ಬಳಿ ನನ್ನನ್ನು ಅಪಹರಿಸಿ ಮಾಡಿ ಕೈಕಾಲು ಕಟ್ಟಿ ಹೊಸಕೋಟೆಯ ನಿರ್ಜನ ಪ್ರದೇಶದಲ್ಲಿ ಎಸೆದು ಪರಾರಿಯಾದರು ಎಂದು ಸುಶ್ಮಿತಾ ದೂರಿನಲ್ಲಿ ಉಲ್ಲೇಖಿಸಿದ್ದರು.
ಯುವತಿಯ ದೂರನ್ನು ಗಂಭೀರವಾಗಿ ಪರಿಗಣಿಸಿ ತನಿಖೆಗೆ ಇಳಿದ ಪೊಲೀಸರಿಗೆ ಯುವತಿಯ ಮೇಲೆಯೇ ಶಂಕೆ ವ್ಯಕ್ತವಾಗಿತ್ತು. ಯುವತಿ ಕೆಲಸ ಮಾಡುವ ಖಾಸಗಿ ಕಂಪನಿಯಲ್ಲಿ ಸ್ನೇಹಿತನಾಗಿದ್ದ ಅನಂದ್ ಎಂಬವರನ್ನು ವಿಚಾರಿಸಿದ ಪೊಲೀಸರು ಶಾಕ್ ಆಗಿದ್ದರು.
ದೂರುದಾರೆ ಸುಶ್ಮಿತ ತನ್ನ ಕುಟುಂಬದವರನ್ನು ಹೆದರಿಸಲು, ತನ್ನ ಮೊಬೈಲ್, ಸೇರಿದಂತೆ ಕುಟುಂಬಸ್ಥರು ಎಲ್ಲಾ ನಂಬರ್‍ಗಳಿಗೂ, ಬೆದರಿಕೆ ಮಸೇಜ್‍ಗಳು, ಮನೆಯಲ್ಲೇ ಕ್ಯಾಮರಾ ಇಟ್ಟು ಶೂಟ್ ಮಾಡಿದ ವಿಡಿಯೋಗಳನ್ನು ಹಾಕುತ್ತಿದ್ದಳು.
ಇದಕ್ಕಾಗಿಯೇ ಸುಮಾರು ಹದಿನೈದು ಸಿಮ್ ಕಾರ್ಡ್ ಗಳನ್ನು ಖರೀದಿ ಮಾಡಿ ಆ ಸಿಮ್ ಗಳಿಂದ ಈ ರೀತಿ ತನ್ನಷ್ಟಕ್ಕೆ ತಾನೇ ಸೀನ್ ಕ್ರಿಯೆಟ್ ಮಾಡಿಕೊಳ್ಳುತ್ತಿದ್ದಾಳೆ ಎಂದು ಆನಂದ್ ರಹಸ್ಯವನ್ನು ಪೊಲೀಸರ ಮುಂದೆ ಬಿಚ್ಚಿಟ್ಟಿದ್ದಾರೆ.ಯುವತಿಯ ಈ ಹೈಡ್ರಾಮ ನೋಡಿದ ಪೊಲೀಸರಿಗೆ ಆಕೆಯ ನಡುವಳಿಕೆಯಿಂದ ಬೆಚ್ಚಿಬಿದ್ದಿದ್ದಾರೆ. ಇನ್ನೂ ಯುವತಿಯ ಕುಟುಂಬಸ್ಥರು ಕೂಡ ಶಾಕ್ ಆಗಿದ್ದು ಈ ಎಲ್ಲಾ ನಾಟಕೀಯ ಬೆಳವಣಿಗೆ ಕಾರಣವೇನು ಎನ್ನುವುದರ ಬಗ್ಗೆ ಹೆಚ್ಚಿನ ತನಿಖೆಯನ್ನು ಪೊಲೀಸರು ಕೈಗೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
