ಬ್ಯಾಂಕ್‍ನ ಆರ್ಥಿಕ ಸದೃಢತೆಗೆ ಸಹಕಾರ ಮುಖ್ಯ

ಚಿತ್ರದುರ್ಗ;

        ನಿರೀಕ್ಷಿತ ಮಟ್ಟದಲ್ಲಿ ಕನಕ ಬ್ಯಾಂಕ್‍ನ್ನು ಅಭಿವೃದ್ದಿಯತ್ತ ಮುನ್ನಡೆಸಲು ಸಾಧ್ಯವಾಗದಿರುವುದಕ್ಕೆ ನನ್ನಲ್ಲಿ ವಿಷಾಧವಿದೆ. ಮುಂದಿನ ದಿನಗಳಲ್ಲಿ ಬ್ಯಾಂಕ್‍ನ್ನು ಆರ್ಥಿಕವಾಗಿ ಪ್ರಗತಿಯತ್ತ ಕೊಂಡೊಯ್ಯಲು ಎಲ್ಲರ ಸಹಕಾರ ಮುಖ್ಯವೆಂದು ಬ್ಯಾಂಕಿನ ಅಧ್ಯಕ್ಷ ಹಾಗೂ ನಗರಸಭೆ ಸದಸ್ಯ ಡಿ.ಮಲ್ಲಿಕಾರ್ಜುನ್ (ಪೊಲೀಸ್ ಮಲ್ಲಿ) ಅಭಿಪ್ರಾಯ ಪಟ್ಟರು

        ಇಲ್ಲಿನ ನೆಹರು ನಗರದಲ್ಲಿರುವ ಜ್ಞಾನವಿಕಾಸ ಶಾಲೆಯಲ್ಲಿ ಭಾನುವಾರ ನಡೆದ ಕನಕ ಪತ್ತಿನ ಸಹಕಾರ ಸಂಘದ ಸಭೆಯನ್ನು ಉಧ್ಘಾಟಿಸಿ ಮಾತನಾಡಿದ ಅವರು, ಕೆಲವು ಕಾರಣಗಳಿಂದಾಗಿ ಈ ಬ್ಯಾಂಕ್ ಎಲ್ಲರ ನಿರೀಕ್ಷೆಯಂತೆ ಅಭಿವೃದ್ದಿ ಕಂಡಿಲ್ಲ. ಆದರೆ ಹಿಂದಿನ ದಿನಗಳಿಗೆ ಹೊಲಿಸಿದರೆ ಸ್ವಲ್ಪ ಮಟ್ಟಿಗೆ ಸುಧಾರಣೆಯಾಗಿದೆ ಎಂದು ಹೇಳಿದರು

       ಹಿರಿಯರು ಎಲ್ಲರೂ ಸೇರಿ ನಗರದಲ್ಲಿ ಕನಕ ಬ್ಯಾಂಕ್‍ನ್ನು ತುಂಬಾ ಕಷ್ಟು ಪಟ್ಟು ಸ್ಥಾಪನೆ ಮಾಡಿದ್ದಾರೆ. ಕಳೆದ ಸುಮಾರು 18 ವರ್ಷಗಳಿಂದ ಇದು ಕುಂಟುತ್ತಲೇ ಸಾಗಿದೆ. ಬೇರೆ ಸಹಕಾರ ಸಂಘಗಳಿಗೆ ಹೋಲಿಸಿಕೊಂಡರೆ ಈ ಸಂಘದ ಬೆಳವಣಿಗೆ ಅಷ್ಟೇನು ತೃಪ್ತಿಕರವಾಗಿಲ್ಲ. ಆದರೆ ಬರುವ ದಿನಗಳಲ್ಲಿ ಸದಸ್ಯರ ನಿರೀಕ್ಷೆ ಹುಸಿಯಾಗದಂತೆ ಇದನ್ನು ಪ್ರಗತಿಯನ್ನು ಮುನ್ನಡೆಸಿಕೊಂಡು ಹೋಗಲು ಎಲ್ಲಾ ರೀತಿಯಲ್ಲಿಯೂ ಸಂಕಲ್ಪ ಮಾಡುವುದಾಗಿ ಮಲ್ಲಿಕಾರ್ಜುನ್ ಭರವಸೆ ನೀಡಿದರು

        ಯಾವುದೇ ಸಹಕಾರ ಸಂಘಗಳು ಯಶಸ್ವಿಯಾಗಿ ನಡೆಯಬೇಕಾದರೆ ಅಲ್ಲಿನ ಸಿಬ್ಬಂದಿಗಳಲ್ಲಿ ತುಂಬಾ ಕರ್ತವ್ಯ ನಿಷ್ಠೆ ಮುಖ್ಯ. ಜೊತೆಗೆ ಆಡಳಿತ ಮಂಡಳಿಯ ಹೊಣೆಗಾರಿಕೆಯೂ ಹೆಚ್ಚಿರುತ್ತದೆ. ಹೀಗಾಗಿ ಎಲ್ಲಾ ನಿರ್ದೇಶಕರು ಸಂಘದ ಆರ್ಥಿಕ ಬೆಳವಣಿಗೆಗೆ ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಅವರು ಮನವಿ ಮಾಡಿದರು

         ಬ್ಯಾಂಕಿನಲ್ಲಿ ಕೆಲವು ಸದಸ್ಯರು ಪಡೆದಿರುವ ಸಾಲ ಮರುಪಾವತಿ ಅಗುತ್ತಿಲ್ಲ. ಇದರಿಂದ ಸಂಘದ ಆರ್ಥಿಕ ಬೆಳವಣಿಗೆಗೆ ಪೆಟ್ಟು ಬೀಳುತ್ತಿದೆ. ಈ ಕಾರಣಕ್ಕಾಗಿ ಎಲ್ಲಾ ಸದಸ್ಯರುಗಳು ಸಾಲ ಮರುಪಾವತಿಯ ವಿಚಾರದಲ್ಲಿ ಸಹಕಾರ ನೀಡಬೇಕು ಎಂದು ವಿನಂತಿಸಿದರು
ಕೆಲವು ವೈಯಕ್ತಿಕ ಕಾರಣಗಳಿಂದ ಇಲ್ಲಿ ಹೆಚ್ಚು ತೊಡಗಿಸಿಕೊಂಡಿರಲಿಲ್ಲ. ಇನ್ನು ಮುಂದೆ ಪ್ರತಿವಾರವೂ ಇದ್ದು ಸಂಘದ ಎಲ್ಲಾ ಚಟುವಟಿಕೆಗಳ ಬಗ್ಗೆ ನಿಗಾವಹಿಸಲಾಗುವುದು. ಜೊತೆಗೆ ಸದಸ್ಯರುಗಳ ಸಹಕಾರದೊಂದಿಗೆ ಬ್ಯಾಂಕಿನ ಬೆಳವಣಿಗೆ ಕುರಿತಂತೆ ಸಮಾಲೋಚನೆ ನಡೆಸಿ ಕ್ರಮವಹಿಸಲಾಗುವುದು ಎಂದರು

        ಸಂಘದ ಮಾಜಿ ಅಧ್ಯಕ್ಷ ಕೆ.ಬಿ.ರಾಮಪ್ಪ ಮಾತನಾಡಿ, ಸದಸ್ಯರುಗಳು ಹಾಲಿ ಅಧ್ಯಕ್ಷರ ಮೇಲೆ ಅಪಾರವಾದ ಭರವಸೆಗಳನ್ನು ಇಟ್ಟುಕೊಂಡಿದ್ದರು. ಆದರೆ ನಾವು ಅಂದುಕೊಂಡಂತೆ ಬೆಳವಣಿಗೆ ಆಗುತ್ತಿಲ್ಲ. ಮುಂದಿನ ದಿನಗಳಲ್ಲಿ ಆದರೂ ಅಭಿವೃದ್ದಿಯ ಕಡೆಗೆ ಹೆಚ್ಚು ಗಮನ ಹರಿಸಬೇಕೆಂದು ಸಲಹೆ ನೀಡಿದರು

         ಸಂಘದ ನಿರ್ದೇಶಕ ಕೆ.ಬಿ.ಕೃಷ್ಣಪ್ಪ ಮಾತನಾಡಿ, ವರ್ಷಕ್ಕೊಮ್ಮೆ ನಡೆಯುವ ಸಭೆಗೆ ಹಾಜರಾದರೆ ಸಾಲದು, ಸಂಘದ ಎಲ್ಲಾ ಚಟುವಟಿಕೆಗಳಲ್ಲಿಯೂ ಸದಸ್ಯರು ತೊಡಗಿಸಿಕೊಳ್ಳಬೇಕು. ಇಲ್ಲಿ ಒಂದಿಷ್ಟು ಆರ್ಥಿಕ ವ್ಯವಹಾರವನ್ನೂ ನಡೆಸುವಂತಾಗಬೇಕು. ಆಗ ಮಾತ್ರ ಬೆಳವಣಿಗೆ ಸಾಧ್ಯವಾಗುತ್ತದೆ ಎಂದು ಅಭಿಪ್ರಾಯ ಪಟ್ಟರು

         ಈ ವರ್ಷದಿಂದಲಾದರೂ ಪಿಗ್ಮಿ ಸಂಗ್ರಹಕ್ಕೆ ಕ್ರಮ ಕೈಗೊಳ್ಳಬೇಕು. ಈ ವಿಚಾರದ ಕುರಿತು ಹಿಂದೆಯೂ ಸಾಕಷ್ಟು ಚರ್ಚೆಗಳು ನಡೆದಿದ್ದು, ಕನಿಷ್ಟ ಇಬ್ಬರನ್ನು ಆದರೂ ಪಿಗ್ಮಿ ಸಂಗ್ರಹಕ್ಕೆ ನೇಮಕ ಮಾಡಿಕೊಳ್ಳುವಂತೆಯೂ ಸಲಹೆ ಮಾಡಿದರು

          ಸಭೆಯಲ್ಲಿ ನಿರ್ದೇಶಕರುಗಳಾದ ಎಂ.ಕೃಷ್ಣಪ್ಪ, ಎಲ್.ಶೇಷಗಿರಿಯಪ್ಪ, ಜಿ.ಗರಡಿ ಪ್ರಕಾಶ್, ಎನ್.ರವಿಕುಮಾರ್, ಪಾರ್ವತಮ್ಮ, ಜಯಮ್ಮ, ಕಾರ್ಯದರ್ಶಿ ಬೋರೇಶ್, ಜ್ಞಾನ ವಿಕಾಸ ಶಾಲೆಯ ಮುಖ್ಯ ಶಿಕ್ಷಕ ಪುಷ್ಪರಾಜ್ ಇನ್ನಿತರರು ಉಪಸ್ಥಿತರಿದ್ದರು

                         ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link