ಹಿರಿಯೂರು :
ಹಿರಿಯೂರಿನ ಪೋಲೀಸ್ ಇಲಾಖೆ ವತಿಯಿಂದ ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ, ಹಿರಿಯೂರು ನಗರ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ಪೋಲೀಸ್ ಸಿಬ್ಬಂದಿ ಪಥಸಂಚಲನ ನಡೆಸಿ ಸಾರ್ವಜನಿಕರಲ್ಲಿ ಮತದಾನದ ಅರಿವು ಮೂಡಿಸಿದರಲ್ಲದೆ ಮತದಾನ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶನೀಡದಂತೆ ಶಾಂತಿಯುತವಾಗಿ ದೈರ್ಯದಿಂದ ಮತಚಲಾಯಿಸಿ ಎಂಬುದಾಗಿ ಮತದಾರರಿಗೆ ಪಥಸಂಚಲನೆ ಮೂಲಕ ಸಂದೇಶ ಸಾರಿದರು.ಈ ಪಥಸಂಚಲನೆಗೆ ಡಿವೈಎಸ್‍ಪಿ ಎನ್.ರಮೇಶ್ ರವರು ಚಾಲನೆ ನೀಡಿದರು. ಈ ಕಾರ್ಯಕ್ರಮದಲ್ಲಿ ಸಿಪಿಐ ಆರ್.ಜಿ.ಚನ್ನೇಗೌಡ ಹಾಗೂ ಪೋಲೀಸ್ ಸಿಬ್ಬಂದಿವರ್ಗ ಮತ್ತು ಮಹಿಳಾ ಪೋಲೀಸ್ ಸಿಬ್ಬಂದಿಯವರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
