ಚಳ್ಳಕೆರೆ
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಚಳ್ಳಕೆರೆ ವೃತ್ತ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಪೊಲೀಸ್ ಇಲಾಖೆ ಪಥಸಂಚಲನ ನಡೆಸುವ ಮೂಲಕ ಮತದಾನದವನ್ನು ಶಾಂತಿಯುತವಾಗಿ ನಡೆಸುವಂತೆ, ಯಾವುದೇ ರೀತಿಯ ಅಹಿತರಕ ಘಟನೆಗೆ ಅವಕಾಶ ನೀಡದೇ ಕಾನೂನು ಸುವ್ಯವಸ್ಥೆ ಕಾಪಾಡುವಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.
ಈಶಾನ್ಯ ವಲಯ ಐಜಿಪಿ ಮುಖರ್ಜಿ ಮತ್ತು ಜಿಲ್ಲಾ ರಕ್ಷಣಾಧಿಕಾರಿ ಡಾ.ಕೆ.ಅರುಣ್ ಸೂಚನೆಯಂತೆ ಚಳ್ಳಕೆರೆ ವೃತ್ತ ನಿರೀಕ್ಷಕ ಎನ್.ತಿಮ್ಮಣ್ಣ ತಮ್ಮ ವ್ಯಾಪ್ತಿಯ ಸಿಬ್ಬಂದಿಯ ಸಹಕಾರದೊಂದಿಗೆ ಬುಧವಾರ ಚಳ್ಳಕೆರೆ ನಗರವೂ ಸೇರಿದಂತೆ ಕಸಬಾ ಹೋಬಳಿ, ಪರಶುರಾಮಪುರ ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ ಪೊಲೀಸ್ ಇಲಾಖೆಯಿಂದ ಪಥಸಂಚಲವನ್ನು ಕೈಗೊಂಡರು.
ವೃತ್ತ ನಿರೀಕ್ಷಕ ಎನ್.ತಿಮ್ಮಣ್ಣ ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿ, ಏಪ್ರೀಲ್ 18ರ ಗುರುವಾರ ಲೋಕಸಭಾ ಚುನಾವಣೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಮುನ್ನೆಚ್ಚರಿಕೆ ಕ್ರಮವಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ವಿಶೇಷವಾಗಿ ಈ ಬಾರಿ ವೃತ್ತ ವ್ಯಾಪ್ತಿಯ ಎಲ್ಲಾ ಮತಗಟ್ಟೆ ಕೇಂದ್ರಗಳ ಗ್ರಾಮಗಳಿಗೆ ಭೇಟಿ ನೀಡಿ ಪಥಸಂಚಲನ ನಡೆಸಲಾಗುತ್ತಿದೆ.
ಈ ಸಂದರ್ಭದಲ್ಲಿ ಎಲ್ಲಾ ಮತದಾರರಿಗೂ ಏ.18ರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ನಿರ್ಭಯವಾಗಿ ಮತದಾರರು ತಪ್ಪದೆ ಮತವನ್ನು ಚಲಾಯಿಸುವಂತೆ ಮನವಿ ಮಾಡಿಕೊಳ್ಳಲಾಗುತ್ತಿದೆ ಎಂದರು. ಪಥ ಸಂಚಲನ ನಡೆಸುವುದರಿಂದ ಮತದಾನ ಸಂದರ್ಭದಲ್ಲಿ ಯಾವುದೇ ರೀತಿಯ ಕಾನೂನು ಬಾಹಿರ ಚಟುವಟಿಕೆಗಳು ತೊಡಗುವವರ ವಿರುದ್ದ ಜಾಗೃತಿಗೊಳಿಸಿದಂತಾ ಗಿದೆಯಲ್ಲದೆ ಮತದಾನ ಶಾಂತಿಯುತವಾಗಿ ನಡೆಸಲು ಇಲಾಖೆಯೊಂದಿಗೆ ಸಹಕಾರಿಸುವಂತೆ ಮನವಿ ಮಾಡಲಾಗಿದೆ ಎಂದರು.
ಚಳ್ಳಕೆರೆ ನಗರ, ಚನ್ನಮ್ಮನಾಗತಿಹಳ್ಳಿ, ಸೂರನಹಳ್ಳಿ, ಪರಶುರಾಮಪುರ, ಮೀರಸಾಬಿಹಳ್ಳಿ, ಜಾಜೂರು, ಬೆಳಗೆರೆ, ನಾರಾಯಣಪುರ, ಸಾಣೀಕೆರೆ, ಚೆಟ್ಟೆಕಂಬ, ಮತ್ಸಮುದ್ರ ಮುಂತಾದ ಗ್ರಾಮಗಳಲ್ಲಿ ಪಥ ಸಂಚಲನ ನಡೆಸಿದರು. ಈ ಸಂದರ್ಭದಲ್ಲಿ ಪಿಎಸ್‍ಐಗಳಾದ ಎನ್.ಗುಡ್ಡಪ್ಪ, ಮೋಹನ್‍ಕುಮಾರ್, ರಘುನಾಥ , ರವಿಕುಮಾರ್, ಪ್ರೊಬೇಷನರಿ ಪಿಎಸ್‍ಐ ಧನಂಜಯ ಮುಂತಾದವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








