ಕೇಬಲ್ ರವಿ ಹತ್ಯೆ :ಕಾರ್ಯಾಚರನೆ ತೀವ್ರಗೊಳಿಸಿದ ಪೊಲೀಸರು

ಬೆಂಗಳೂರು

         ಕಚೇರಿಯಲ್ಲಿದ್ದ ರೌಡಿ ಕೇಬಲ್ ವಿಜಿ ಅಲಿಯಸ್ ಲಕ್ಕಸಂದ್ರ ವಿಜಯ್‍ಕುಮಾರ್‍ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಆರೋಪಿಗಳ ಸುಳಿವು ಪತ್ತೆಯಾಗಿದ್ದು ಅವರ ಬಂಧನದ ಕಾರ್ಯಾಚರಣೆಯನ್ನು ಆಡುಗೋಡಿ ಪೊಲೀಸರು ತೀವ್ರಗೊಳಿಸಿದ್ದಾರೆ.

        ನಗರದ ಲಕ್ಕಸಂದ್ರದ 16 ನೇ ಕ್ರಾಸ್‍ನ ಮಂಗಳವಾರ ರಾತ್ರಿ ಕಚೇರಿಯಲ್ಲಿದ್ದ ಕೇಬಲ್ ರವಿಯನ್ನು ಆರೇಳು ಮಂದಿಯ ಗ್ಯಾಂಗ್ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿತ್ತು ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಆರೋಪಿಗಳ ಬಂಧನಕ್ಕೆ ತೀವ್ರ ಶೋಧ ನಡೆಸಿದ್ದಾರೆ.

       ಕೊಲೆಯಾದ ವಿಜಿ ಸೈಲೆಂಟ್ ಸುನೀಲನ ಸಹಚರನಾಗಿದ್ದು, ಹಲವು ವರ್ಷಗಳಿಂದ ರೌಡಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದನು. ಈತನ ವಿರುದ್ಧ ಕೊಲೆ, ಕೊಲೆ ಯತ್ನ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿದ್ದವು ಹಳೆಯ ದ್ವೇಷದ ಹಿನ್ನಲೆಯಲ್ಲಿ ಕೇಬಲ್ ರವಿಯ ಮೇಲೆ ಹಿಂದೆ ಐದಾರು ಬಾರಿ ಕೊಲೆಯತ್ನ ನಡೆದಿತ್ತು.

       ಕಡಬಗೆರೆ ಸೀನನ ಶೂಟೌಟ್ ಪ್ರಕರಣಲ್ಲಿ ಪೆÇಲೀಸರ ಅತಿಥಿಯಾಗಿದ್ದ ವಿಜಿ, ಕೊಲೆ ಯತ್ನ ಸೇರಿ ಸುಮಾರು 12 ಪ್ರಕರಣಗಳಲ್ಲಿ ಭಾಗಿಯಾಗಿದ್ದನು ಕಡಬಗೆರೆ ಸೀನನ ಕೇಸ್‍ನಲ್ಲಿ ಬಂಧಿತ ನಾಗಿ ಜಾಮೀನಿನ ಮೇಲೆ ಹೊರಬಂದ ನಂತರ ರೌಡಿಸಂನಿಂದ ಕೊಂಚ ದೂರ ಉಳಿದಿದ್ದ. ಕಳೆದ ಒಂದೂವರೆ ವರ್ಷದಿಂದ ಯಾವುದೇ ಅಪರಾಧ ಪ್ರಕರಣಗಳಲ್ಲಿ ವಿಜಿ ಭಾಗಿಯಾಗಿರಲಿಲ್ಲ. ಜೈಲಿನಿಂದ ಹೊರಬಂದ ನಂತರ ಸುನೀಲ ಮತ್ತು ಆತನ ಗ್ಯಾಂಗ್‍ನಿಂದ ಅಂತರ ಕಾಯ್ದುಕೊಂಡಿದ್ದ ಎನ್ನಲಾಗಿದೆ.

      ದ್ವೇಷದಿಂದ ಕುದಿಯುತ್ತಿದ್ದ ಎದುರಾಳಿಗಳು ರಾತ್ರಿ ಸಂಚು ರೂಪಿಸಿ ಕೊಲೆ ಮಾಡಿ ಪರಾರಿಯಾಗಿದ್ದು ಅವರ ಸುಳಿವು ಪತ್ತೆಯಾಗಿದೆ ಅದಷ್ಟು ಶೀಘ್ರ ಬಂಧಿಸಲಾಗುವುದು ಎಂದು ಡಿಸಿಪಿ ಡಾ. ಬೋರಲಿಂಗಯ್ಯ ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link