ಪೊಲೀಸರು ಒತ್ತಡದಿಂದ ಮುಕ್ತರಾಗಬೇಕು : ಡಾ.ಪಾಲಾಕ್ಷ

ಚಿತ್ರದುರ್ಗ :

     ಪೊಲೀಸ್ ಇಲಾಖೆಯದ್ದು ಅತ್ಯಂತ ಅಗತ್ಯ ಸೇವೆಯ ಇಲಾಖೆಯಾಗಿದ್ದು, ಪೊಲೀಸರು ಒತ್ತಡದಿಂದ ಮುಕ್ತರಾದಲ್ಲಿ ಮಾತ್ರ ಕರ್ತವ್ಯದಲ್ಲಿ ಉತ್ತಮ ಕಾರ್ಯಕ್ಷಮತೆ ತೋರಲು ಸಾಧ್ಯ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸಿ.ಎಲ್. ಪಾಲಾಕ್ಷ ಹೇಳಿದರು.

    ಜಿಲ್ಲಾಡಳಿತ, ಜಿಲ್ಲಾ ಪಂಚಾಯಾತ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಾನಸಿಕ ಆರೋಗ್ಯ ವಿಭಾಗದ ವತಿಯಿಂದ ಹಿರಿಯೂರು ಮತ್ತು ಹೊಳಲ್ಕೆರೆ ತಾಲ್ಲೂಕಿನ ಪೆÇೀಲಿಸ್ ಸಿಬ್ಬಂದಿಗಳಿಗೆ ಒತ್ತಡ ನಿರ್ವಾಹಣೆ ಕುರಿತು ಆರೋಗ್ಯ ಇಲಾಖೆ ಸಭಾಂಗಣದಲ್ಲಿ ಏರ್ಪಡಿಸಲಾದ ಒಂದು ದಿನದ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.

    ಪೊಲೀಸ್ ಇಲಾಖೆಯ ಕಾರ್ಯಕ್ಷೇತ್ರದಲ್ಲಿ ಕಾರ್ಯಕ್ಷಮತೆ ಸದೃಡವಾಗಿರಲು ಒತ್ತಡದಿಂದ ಮುಕ್ತರಾಗಿರುವುದು ಅಗತ್ಯವಾಗಿದೆ. ಇಲಾಖೆಯ ಕಾರ್ಯಕ್ಷೇತ್ರದ ಒತ್ತಡವನ್ನು ಅರಿತು ಒತ್ತಡವನ್ನು ಹೇಗೆ ನಿರ್ವಹಣೆ ಮಾಡಿಕೊಂಡು ಕಾರ್ಯ ಪ್ರವೃತ್ತರಾಗಬೇಕು, ಸಮುದಾಯದಲ್ಲಿಪೊಲೀಸ್ ಇಲಾಖೆ ಸೇವೆ ಅತ್ಯಗತ್ಯ ಸೇವೆಯಾಗಿದ್ದು, ಒತ್ತಡವನ್ನು ಸಮಯಕ್ಕೆ ಸರಿಯಾಗಿ ತಹಬದಿಗೆ ತರದಿದ್ದರೆ ಆರೋಗ್ಯದ ಮೇಲೆ ಪ್ರಭಾವ ಬೀರಿ, ನಿಮ್ಮ ಕುಟುಂಬ ಮತ್ತು ನಿರ್ವಹಿಸುವ ಕೆಲಸ ಕಾರ್ಯಗಳಲ್ಲಿ ವ್ಯತ್ಯಾಸವಾಗುತ್ತದೆ.

     ಇದು ದೀರ್ಘ ಕಾಲದಲ್ಲಿ ಮಾನಸಿಕ ರೋಗಕ್ಕೆ ಕಾರಣವಾಗುತ್ತದೆ. ಈ ತರಬೇತಿಯಿಂದ ತಾವು ಒತ್ತಡ ಮುಕ್ತರಾಗಿ ಸೇವೆ ಸಲ್ಲಿಸಿ ಎಂದರು.

      ಕಾರ್ಯಕ್ರಮ ಅನುಷ್ಠಾನ ಅಧಿಕಾರಿ ಡಾ.ಸಿ.ಓ. ಸುಧಾ, ಒತ್ತಡದ ಮೂಲ ಹಾಗೂ ಕುಟುಂಬ ಕಲ್ಯಾಣ ಯೋಜನೆಯಲ್ಲಿ ಪುರುಷರ ಸಹಭಾಗಿತ್ವದ ಬಗ್ಗೆ ತಿಳಿಸಿ, ಪೋಲಿಸ್ ಇಲಾಖೆಯ ಪುರುಷ ಸಿಬ್ಬಂದಿ, ಅಧಿಕಾರಿಗಳು ಈ ಯೋಜನೆಯಲ್ಲಿ ಹೆಚ್ಚು ಹೆಚ್ಚು ಭಾಗವಹಿಸಿ ಸಮಾಜಕ್ಕೆ ಮಾದರಿಯಾಗಿ. ಸರ್ಕಾರದಿಂದ ತಮಗೆ ಒಂದು ವಾರ್ಷಿಕ ಮುಂಬಡ್ತಿ ನೀಡಲಾಗುತ್ತದೆ ಅಲ್ಲದೆ ಎನ್.ಎಸ್.ವಿ. ಸರಳ ವಿಧಾನವಾಗಿದೆ ಎಂದರು.

      ಮಾನಸಿಕ ತಜ್ಞ ಡಾ.ಆರ್.ಮಂಜುನಾಥ್, ಮಾನಸಿಕ ರೋಗಗಳ ಬಗ್ಗೆ ತರಬೇತಿ ನೀಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ, ಜಿಲ್ಲಾ ಮಾನಸಿಕ ರೋಗಗಳ ನಿಯಂತ್ರಣಾಧಿಕಾರಿ ಡಾ.ಸುರೇಶ್, ನಂದಿನಿ ಕಡಿ, ವೆಂಕಟೇಶ್ ಸೇರಿದಂತೆ ಸುಮಾರು 50 ಪೊಲೀಸ್ ಸಿಬ್ಬಂದಿಗಳು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap