ನಾಗರಿಕರ ರಕ್ಷಣೆಯಲ್ಲಿ ಪೊಲೀಸರ ಪಾತ್ರ ಮಹತ್ವದ್ದು

ತುಮಕೂರು:

    ಪೊಲೀಸ್ ಇಲಾಖೆಯೆಂದರೆ ಶಿಸ್ತಿನ ಇಲಾಖೆ. ಕಾನೂನು ಸುವ್ಯವಸ್ಥೆ ಪಾಲನೆ ಹಾಗೂ ನಾಗರಿಕರ ರಕ್ಷಣೆಯಲ್ಲಿ ಪೊಲೀಸರ ಪಾತ್ರ ಮಹತ್ವದ್ದಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಜಿ.ಎಸ್.ಸಂಗ್ರೇಶಿ ಅಭಿಪ್ರಾಯಪಟ್ಟರು.

    ಜಿಲ್ಲಾಪೊಲೀಸ್ ಇಲಾಖೆ ವತಿಯಿಂದ ನಡೆದ ಪೊಲೀಸ್ ಹುತಾತ್ಮ ದಿನಾಚರಣೆಯಲ್ಲಿ ಹುತಾತ್ಮ ಪುತ್ಥಳಿಗೆ ಗೌರವ ನಮನ ಸಲ್ಲಿಸಿ ಮಾತನಾಡಿದ ಅವರು 21-01-1959ರಲ್ಲಿ ಲಡಾಖ್‍ನಲ್ಲಿ ಚೀನಾದೇಶವು ನಮ್ಮ ಯೋಧರನ್ನು ಸೆರೆಹಿಡಿದು ಹಿಂಸಿಸಿತು. ಈ ಘಟನೆಯಲ್ಲಿ 20ಜನ ಯೋಧರು ಹುತಾತ್ಮರಾದರು. ಇದರ ನೆನಪಿನಲ್ಲಿ ಪ್ರತೀ ವರ್ಷ ಅ.21ರಂದು ಪೊಲೀಸ್ ಹುತಾತ್ಮ ದಿನಾಚರಣೆ ಆಚರಿಸಿಕೊಂಡು ಬರಲಗುತ್ತಿದೆ ಎಂದರು.

   ದೇಶಸೇವೆಯಲ್ಲಿ ತೊಡಗಿ ಈವರೆಗೆ ಹುತಾತ್ಮರಾದ ದೇಶದ 4,804 ಪೊಲೀಸರನ್ನು ಈ ಸಂದರ್ಭದಲ್ಲಿ ಸ್ಮರಿಸುವುದು ಅಗತ್ಯವಾಗಿದೆ ಎಂದ ನ್ಯಾಯಾಧೀಶರು, ಪ್ರತೀ ಪೊಲೀಸರು, ಯೋಧರು ತಮ್ಮ ಜೀವನವನ್ನು ದೇಶದ ರಕ್ಷಣೆ, ನಾಗರಿಕ ಸಮಾಜದಲ್ಲಿ ಶಾಂತಿ ಸ್ಥಾಪನೆಗೆ ಮುಡಿಪಾಗಿಟ್ಟಿರುತ್ತಾರೆ. ನಾಗರಿಕರಲ್ಲೂ ಇವರ ಬಗ್ಗೆ ಗೌರವವಿದ್ದು, ಅದನ್ನು ಉಳಿಸಿಕೊಂಡು ಹೋಗುವ ಕಾರ್ಯವನ್ನು ಪೊಲೀಸರು ಮಾಡುತ್ತಿದ್ದು, ಮುಂದುವರಿಯಬೇಕು ಎಂದು ತಿಳಿಹೇಳಿದರು.

   ಎಸ್ಪಿ ಡಾ.ಕೆ.ವಂಸಿಕೃಷ್ಣ ಅವರು ಕಳೆದ ವರ್ಷ ಭಾರತದಲ್ಲಿ ಕರ್ತವ್ಯ ಪಾಲನೆಯಲ್ಲಿ ಹುತಾತ್ಮರಾದ ದೇಶದ 265 ಹುತಾತ್ಮ ಯೋಧರ ಹೆಸರನ್ನು ಸ್ಮರಿಸಿ ಮಾತನಾಡಿ ಹುತಾತ್ಮ ಪೊಲೀಸರಲ್ಲಿ ಕಳೆದ ವರ್ಷ ಕರ್ನಾಟಕದಲ್ಲಿ 17 ಮಂದಿ ಮೃತಪಟ್ಟಿದ್ದು, ತುಮಕೂರು ಜಿಲ್ಲೆಯ ಇಬ್ಬರು ಪೊಲೀಸರು ಸೇರಿದ್ದಾರೆ. ಕರ್ತವ್ಯ ನಿರ್ವಹಿಸುವ ವೇಳೆ ತಮ್ಮ ಪ್ರಾಣವನ್ನು ಲೆಕ್ಕಿಸದೆ ಹೋರಾಡುವ ಪೊಲೀಸರನ್ನು ಸ್ಮರಿಸುವ ದಿನವೇ ಅ.21 ಪೊಲೀಸ್ ಹುತಾತ್ಮ ದಿನಾಚರಣೆಯಾಗಿದೆ ಎಂದು ಮಾಹಿತಿ ನೀಡಿದರು.

   ಗೌರವ ನಮನ: ಹುತಾತ್ಮ ಪೊಲೀಸರ ಸ್ಮರಣಾರ್ಥ ಪೊಲೀಸ್ ಪುತ್ಥಳಿಗೆ, ಪ್ರಧಾನ ಜಿಲ್ಲಾ ನ್ಯಾಯಾಧೀಶರು, ಎಸ್ಪಿ ಡಾ.ಕೆ.ವಂಸಿಕೃಷ್ಣ, ಎಎಸ್ಪಿ ಉದೇಶ್‍ಕುಮಾರ್, ಜಿಲ್ಲಾ ಶಾಖಾ ಸಹಾಯಕ ಆಡಳಿತಾಧಿಕಾರಿ ಕೃಷ್ಣಪ್ಪ. ನಿವೃತ್ತ ಡಿವೈಎಸ್ಪಿ ಡಿ.ಎಲ್ . ಜಗದೀಶ್, ಡಿಸಿಆರ್‍ಬಿ ಡಿವೈಎಸ್ಪಿ ಸೂರ್ಯನಾರಯಣರಾವ್, ತಿಪಟೂರು ಡಿವೈಎಸ್ಪಿ ಚಂದನ್, ಕುಣಿಗಲ್ ಗಾನ ಜಿ.ಕುಮಾರ್ ಮಧುಗಿರಿ ಡಿವೈಎಸ್ಪಿ ಪ್ರವೀಶ್, ಹೆಡ್ ಕಾನ್ಸ್‍ಟೇಬಲ್ ರವಿಕುಮಾರ್, ಎಸ್ಪಿ ಕಚೇರಿ ಕಾನ್ಸ್‍ಟೇಬಲ್ ವಿಭಾಗದಿಂದ ಜಗದೀಶ್ , ಹೋಂ ಗಾರ್ಡ್, ಕೆಎಸ್‍ಆರ್‍ಪಿ ಕಮಾಂಡೆಂಟ್, ಅಗ್ನಿಶಾಮಕದಳದ ಅಧಿಕಾರಿಗಳ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಚಿ.ನಿ.ಪುರುಷೋತ್ತಮ್ ಪುಷ್ಪಗುಚ್ಚ ಅರ್ಪಿಸಿ ಗೌರವ ನಮನ ಸಲ್ಲಿಸಿದರು. ಜಿಲ್ಲೆಯ ವೃತ್ತ ನಿರೀಕ್ಷಕರುಗಳು, ಉಪ ನಿರೀಕ್ಷಕರುಗಳು ಹಾಜರಿದ್ದರು. ಹುತಾತ್ಮ ಪೊಲೀಸರ ಗೌರವಾರ್ಥ ಪೊಲೀಸ್ ಧ್ವಜವನ್ನು ಅರ್ಧಕ್ಕಿಳಿಸಿ ವಿದಾಯ ಗೀತೆಯನ್ನು ಪೊಲೀಸ್ ಬ್ಯಾಂಡ್‍ನವರು ನುಡಿಸಿದರಲ್ಲದೆ., ಗಾಳಿಯಲ್ಲಿ ಕುಶಾಲತೋಪು ಹಾರಿಸಲಾಯಿತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link