ಮೈಸೂರು
ಕೊರೊನಾ ವೈರಸ್ ತಡೆಗಟ್ಟಲು ದೇಶಾದ್ಯಂತ ವಿಧಿಸಲಾಗಿರುವ ಲಾಕ್ ಡೌನ್ ಉಲ್ಲಂಘಿಸಿ ಅನಗತ್ಯವಾಗಿ ಓಡಾಟ ನಡೆಸುತ್ತಿದ್ದವರಿಗೆ ಮೈಸೂರು ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.
ಲಾಕ್ ಡೌನ್ ನಡುವೆಯೂ ನಗರದಲ್ಲಿ ಅಡ್ಡಾಡಿರುವ ವಾಹನ ಸವಾರರಿಗೆ ತಕ್ಕಪಾಠ ಕಲಿಸಲು ಪೊಲೀಸರು ತೀರ್ಮಾನಿಸಿ ದ್ದಾರೆ. ಮೈಸೂರು ನಗರದಲ್ಲಿ ಅಡ್ಡಾಡಿರುವ ಕಿಡಿಗೇಡಿಗಳ ವಾಹನ ಸಂಖ್ಯೆ ಆಧರಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಅಲ್ಲದೇ ಈ ಸಂಬಂಧ ವಾಹನ ನೋಂದಣಿ ಸಂಖ್ಯೆ ಆಧಾರದ ಮೇಲೆ ಮಾಲೀಕರಿಗೆ ಕಾರಣ ಕೇಳಿ ನೋಟಿಸ್ ನೀಡಿದ್ದು, ಸೂಕ್ತ ಸಮಜಾಯಿಷಿ ನೀಡದಿದ್ದಲ್ಲಿ ಕ್ರಿಮಿನಲ್ ಕೇಸ್ ದಾಖಲಿಸುವ ಎಚ್ಚರಿಕೆ ನೀಡಿದ್ದಾರೆ.