ಹುಳಿಯಾರು:
ಹುಳಿಯಾರು ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಎಎಸ್ಐ ಸೇರಿದಂತೆ ಐವರು ಪೊಲೀಸರು ವರ್ಗಾವಣೆಯಾಗಿದ್ದು ಅವರಿಗೆ ಬೀಳ್ಕೊಡುಗೆ ಸಮಾರಂಭವು ಮಂಗಳವಾರ ಠಾಣೆಯಲ್ಲಿ ಸರಳವಾಗಿ ಜರುಗಿತು.ಎಎಸ್ಐ ರಾಜಪ್ಪ ಅವರು ಮಧುಗಿರಿ ತಾಲೂಕಿನ ಬಡುವನಹಳ್ಳಿಗೆ, ಪೊಲೀಸ್ ಕಾನ್ ಸ್ಟೇಬಲ್ ಮಲ್ಲಿಕಾರ್ಜುನಯ್ಯ ಅವರು ಪ್ರಮೋಷನ್ ಪಡೆದು ದಪ್ಪೆದ್ದಾರ್ ಆಗಿ ಕುಣಿಗಲ್ಗೆ, ದಪ್ಪೆದ್ದಾರ್ ಗೌರೀಶ್ ಅವರು ಹೊನ್ವಳ್ಳಿಗೆ, ದಪ್ಪೇದ್ದಾರ್ ಶಂಕರಪ್ಪ ಅವರು ಹಂದನಕೆರೆಗೆ ಹಾಗೂ ಶೃತಿ ಅವರು ತುಮಕೂರಿಗೆ ಎಸ್ಟಿಪಿಓ ಆಗಿ ವರ್ಗಾವಣೆಗೊಂಡಿದ್ದಾರೆ.
ಹುಳಿಯಾರು ಪಿಎಸ್ಐ ವಿಜಯ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಈ ಐದು ಮಂದಿಗೂ ಠಾಣಾ ಆವರಣದಲ್ಲಿ ಸನ್ಮಾನಿಸಿ ಬೀಳ್ಕೊಡಲಾಯಿತು. ವರ್ಗಾವಣೆಗೊಂಡ ಪೊಲೀಸರು ಕರ್ತವ್ಯ ನಿರ್ವಹಣೆಗೆ ಸಹಕರಿಸಿದ ಎಲ್ಲಾ ಪಿಎಸ್ಐ ಹಾಗೂ ಪೊಲೀಸರಿಗೂ ಕೃತಜ್ಞತೆ ಸಲ್ಲಿಸಿದರು.
ಹುಳಿಯಾರು ಎಎಸ್ಐ ಶಿವಪ್ಪ, ಸಿಬ್ಬಂದಿಗಳಾದ ಮಂಜುನಾಥ್, ಶಂಕರ್, ಜಾಫರ್, ಗೋಣಿಸ್ವಾಮಿ, ಚೇತನ್, ನಾಗರಾಜು ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
