ಚಿ.ನಾ.ಹಳ್ಳಿ ಎ.ಎಸೈ.ಗೆ ಪಾಸಿಟೀವ್: ಠಾಣೆ ಸೀಲ್ಡೌನ್

ಚಿಕ್ಕನಾಯಕನಹಳ್ಳಿ :

     ತಾಲ್ಲೂಕಿನಲ್ಲಿ ಶುಕ್ರವಾರ 4 ಕೊರೋನಾ ಪಾಸಿಟಿವ್ ಪ್ರಕರಣ ದಾಖಲಾಗಿದ್ದು, ಒಬ್ಬರು ಎ.ಎಸ್.ಐ.ರವರಿಗೆ ಕಂಡು ಬಂದಿದ್ದು ಪಟ್ಟಣದ ಪೊಲೀಸ್ ಠಾಣೆಯನ್ನು ಸೇರಿದಂತೆ ಕೆಲವು ಕಡೆ ಸೀಲ್ಡೌನ್ ಮಾಡಲಾಗಿದೆ.

    ಪಟ್ಟಣದ ಪೊಲೀಸ್ ಠಾಣೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಎ.ಎಸ್.ಐ.ರವರಿಗೆ ಪಾಸಿಟೀವ್ ವರದಿ ಬಂದ ನಂತರ ಆ ಪ್ರದೇಶವನ್ನು ಅಗ್ನಿ ಶಾಮಕ ಇಲಾಖೆಯವರು ಸಾನಿಟೈಸ್ ಮಾಡಿದರು, ಅವರ ಗಂಟಲು ಸ್ರಾವ ತೆಗೆದು ಕೊಂಡಾಗಿನಿಂದ ರಜೆ ಮೇಲಿದ್ದರು. ಪಟ್ಟಣದ ನೆಹರು ಸರ್ಕಲ್ ನಲ್ಲಿ ಬೇಕರಿ ಹೊಂದಿರುವ ಮಾಲೀಕರ ಮಗನಿಗೆ ಕೊರೋನಾ ಸೋಂಕು ತಗುಲಿದ್ದು, ಇವರನ್ನು ಆರೋಗ್ಯ ಇಲಾಖೆ ಸಿಬ್ಬಂದಿ ಆಸ್ಪತ್ರೆಗೆ ಕರೆದೊಯ್ದರು.

      ಬ್ರಾಹ್ಮಣರ ಬೀದಿಯಲ್ಲಿ ವಾಸವಿರುವ ಇವರು, ಬೆಂಗಳೂರಿನಲ್ಲಿ ವಾಸವಿದ್ದರು ಎನ್ನಲಾಗಿದೆ, ಇತ್ತೀಚಿಗೆ ಪಟ್ಟಣಕ್ಕೆ ಆಗಮಿಸಿ ಸ್ವಯಂ ಆಸ್ಪತ್ರೆಗೆ ಹೋಗಿ ಗಂಟಲು ದ್ರವ ಪರೀಕ್ಷೆಗೆ ಒಳಗಾಗಿದ್ದಾರೆ, ಇವರು ವಾಸವಿದ್ದ ಪ್ರದೇಶವನ್ನು ಸೀಲ್ ಡೌನ್ ಮಾಡಲಾಗಿದೆ. ಕೊರೋನಾ ಪಾಸಿಟಿವ್ ಬಂದ ಹಿನ್ನಲೆಯಲ್ಲಿ ಬೇಕರಿಯನ್ನು ಪುರಸಭೆಯವರು ಬಾಗಿಲು ಮುಚ್ಚಿಸಿದ್ದಾರೆ. ಮನೆಯವರನ್ನು ಕ್ವಾರಂಟೈನ್ ಮಾಡಿದ್ದಾರೆ.
ಪಟ್ಟಣದ ಹೊರವಲಯದ ಕಾಡೇನಹಳ್ಳಿಯಲ್ಲಿ ಮತ್ತೊಬ್ಬರಿಗೆ ಕೊರೋನಾ ಪಾಸಿಟಿವ್ ಪ್ರಕರಣ ದಾಖಲಾಗಿದೆ ಹಾಗೂ ಚಿ.ನಾ.ಹಳ್ಳಿ ಪಟ್ಟಣದ ವ್ಯಕ್ತಿಯೋರ್ವರಿಗೆ ಕೊರೋನಾ ಪಾಸಿಟಿವ್ ಬಂದಿದ್ದು ಆ ವ್ಯಕ್ತಿ ತುಮಕೂರಿನಲ್ಲಿ ವಾಸವಿದ್ದಾರೆ ಎನ್ನಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap