ತಿಪಟೂರು : ಕೊರೊನಾ ಸೋಂಕು ಹಿನ್ನಲೆ ನಗರ ಠಾಣೆ ಸೀಲ್‍ಡೌನ್

ತಿಪಟೂರು :

      ಕೊರೊನಾ ಸೋಂಕು ದಿನೇದಿನೆ ತನ್ನ ವಿಸ್ತಾರವನ್ನು ಹೆಚ್ಚಿಸಿಕೊಂಡು ರುದ್ರತಾಂಡವಾಡುತ್ತಿರುವಾಗ ಕೊರೊನಾ ವಾರಿಯರ್ ಆದ ಆರಕ್ಷಕನಿಗೆ ಸೋಂಕು ತಗುಲಿ ತಿಪಟೂರು ನಗರ ಪೋಲೀಸ್ ಠಾಣೆಯನ್ನು ಸೀಲ್‍ಡೌನ್ ಮಾಲಾಗಿದೆ.

     ತಾಲ್ಲೂಕಿನಲ್ಲಿ ನೆನ್ನೆಯ ವರೆಗೂ 11 ಕೊರೊನಾ ಸೋಕಿತರು ಇದ್ದು ಎಲ್ಲರೂ ತುಮಕೂರು ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು 3 ಸೋಕಿತರು ಧೃಡಪಟ್ಟಿರತ್ತಾರೆಂಬ ವರದಿಯಿಂದ ಸೋಕಿತರ ಸಂಖ್ಯೆ 14ಕ್ಕೇ ಏರಿದೆ. ಇದರಲ್ಲಿ ಮುಖ್ಯವಾಗಿ ನಗರ ಠಾಣೆಯ ಸಿಬ್ಬಂದಿ ಯೋರ್ವರಿಗೆ ಸೋಂಕು ದೃಡಪಟ್ಟಹಿನ್ನೆಲೆಯಲ್ಲಿ ನಗರ ಠಾಣೆಯನ್ನು ಸೀಲ್‍ಡೌನ್ ಮಾಡಲಾಗಿದ್ದು ತನ್ನ ದಿನನಿತ್ಯದ ಕೆಲಸವನ್ನು ಗ್ರಾಮಾಂತರ ಠಾಣೆಯಲ್ಲಿ ನಿರ್ವಹಿಸಲಿದೆ. ಗ್ರಾಮಾಂತರ ಪ್ರದೇಶದ ಇಬ್ಬರಿಗೆ ಪಾಸಿಟೀವ್ ಬಂದಿದೆ.

     ಸ್ವಯಂ ಲಾಕ್‍ಡೌನ್‍ಗೆ ಹೆಚ್ಚುತ್ತಿರುವ ಒಲವು : ಒಂದು ಕಡೆ ಕೊರೊನಾ ಹೆಚ್ಚಾಳದಿಂದ ವರ್ತಕರುಗಳು ಸ್ವಯಂ ಲಾಕ್‍ಡೌನ್‍ಮಾಡುವ ಬಗ್ಗೆ ಮಾತನಾಡಿಕೊಳ್ಳುತ್ತಿದ್ದು ಈಗಾಗಲೇ ಸೆಲೂನ್, ಮುದ್ರಕರ ಸಂಘ ಹಾಗೂ ಕಬ್ಬಿಣ ಮತ್ತು ಹಾರ್ಡ್‍ವೇರ್ ಸಂಘಗಳು ಮದ್ಯಾಹ್ನದ ವೇಳೆಯಲ್ಲಿ ಲಾಕ್‍ಡೌನ್ ಮಾಡುತ್ತಿದ್ದಾರೆ. ಈಗ ದಿನಸಿ ವರ್ತಕರು ಹಾಗೂ ಪ್ಲೇವುಡ್ ಮತ್ತು ಗ್ಲಾಸ್ ಮಾರಾಟಗಾರರು ಸಹ ಮದ್ಯಾಹ್ನದ ಹೊತ್ತು ಲಾಕ್‍ಡೌನ್ ಮಾಡುವತ್ತ ಒಲವುತೋರುತ್ತಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ