ಪೊಲೀಸ್ ಠಾಣೆಯ ಸುತ್ತಮುತ್ತಲಿನ ಪರಿಸರದ ಸ್ವಚ್ಚತಾ ಕಾರ್ಯ

ಹೊಳಲ್ಕೆರೆ:

      ಗ್ರಾಪಂ, ಪಪಂ, ಪುರಸಭೆ, ನಗರಸಭೆಗಳ ಮೇಲೆ ಅವಲಂಬಿಗಳಾಗದೆ ನಮ್ಮ ನಮ್ಮ ಪರಿಸರವನ್ನು ನಾವೇ ಸ್ವಚ್ಚ ಮಾಡಿಕೊಳ್ಳುವ ಅಭ್ಯಾಸವನ್ನ ಪ್ರತಿಯೊಬ್ಬರೂ ರೂಢಿಸಿಕೊಳ್ಳಬೇಕು ಎಂದು ಪಿಎಸ್‍ಐ ಮಹೇಶ್ ತಿಳಿಸಿದರು.

         ಪಟ್ಟಣದ ಪೊಲೀಸ್ ಠಾಣೆಯ ಸುತ್ತಮುತ್ತಲಿನ ಪರಿಸರದ ಸ್ವಚ್ಚತಾ ಕಾರ್ಯದಲ್ಲಿ ಪಾಲ್ಗೊಂಡು ಮಾತನಾಡಿದರು.ಯಾವುದೇ ಕಚೇರಿಗಳಿರಲಿ, ಮನೆಗಳ ಆಸು ಪಾಸಿನಲ್ಲಾಗಲಿ ನಾವು ಸ್ವಯಂ ಪ್ರೇರಿತರಾಗಿ ಸ್ವಚ್ಚತೆಗೆ ಮುಂದಾಗಬೇಕು. ಆಗ ಮಾತ್ರ ಮಹಾತ್ಮ ಗಾಂಧಿಜೀಯವರ ಕನಸು ನನಸಾಗಲು ಸಾಧ್ಯ.

         ಪೊಲೀಸ್ ಸಿಬ್ಬಂದಿಗಳು ತಮ್ಮ ಮನೆಯ ಸುತ್ತಮುತ್ತ ಸ್ವಚ್ಚತೆಯನ್ನು ಕಾಪಾಡಿ, ಹಾಗೆಯೇ ಎಲ್ಲಾ ಇಲಾಖೆಗಳ ಸಿಬ್ಬಂದಿಗಳು ಇದನ್ನು ಅಳವಡಿಸಿಕೊಳ್ಳುವ ಪ್ರಯತ್ನ ಮಾಡಬೇಕು. ಸರಕಾರಿ ನೌಕರರೇ ಈ ರೀತಿ ಸ್ವಚ್ಚತೆಗೆ ಮುಂದಾಗುವುದರಿಂದ ರೈತರು, ವ್ಯಾಪಾರಸ್ಥರು, ಕೂಲಿ ಕಾರ್ಮಿಕರಲ್ಲಿ ಅರಿವು ಮೂಡಿಸಿದಂತಾಗುತ್ತದೆ. ಇದರಿಂದ ಗ್ರಾಪಂ, ಪಪಂ, ಪುರಸಭೆ, ನಗರಸಭೆಗಳ ಮೇಲಿನ ಒತ್ತಡ ಕಡಿಮೆಯಾಗುವುದರ ಜೊತೆ ಸಾಂಕ್ರಾಮಿಕ ರೋಗಗಳು ಹರಡದಂತೆ ತಡೆಗಟ್ಟಬಹುದು ಇದು ಆರೋಗ್ಯದ ಇಲಾಖೆಗೂ ಸಹಕಾರ ನೀಡಿದಂತಾಗುತ್ತದೆ.

       ಪ್ರತಿ ಕಚೇರಿಗಳಲ್ಲಿ ಒಂದಿಷ್ಟು ಸ್ಥಳಾವಕಾಶ ಇದ್ದೇ ಇರುತ್ತದೆ. ಸುತ್ತ ಕಾಂಪೌಂಡ್‍ಗಳಲ್ಲಿ ಗಿಡ ಮರಗಳನ್ನು ಬೆಳೆಸಬೇಕು ಇದರಿಂದ ಪರಿಸರ ಸಂರಕ್ಷಣೆ ಕೂ ಮಾಡಿದಂತಾಗುತ್ತದೆ ಎಂದು ಸಲಹೆ ನೀಡಿದರು.ಪೊಲೀಸ್ ಇಲಾಖೆ ಪುರುಷ ಹಾಗೂ ಮಹಿಳಾ ಸಿಬ್ಬಂದಿಗಳು ಠಾಣೆಯ ಸ್ವಚ್ಚತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap