ಸ್ವಗ್ರಾಮಕ್ಕೆ ಹೊರಟವರಿಗೆ ಆಂಧ್ರ ಪೊಲೀಸರಿಂದಲೆ ತಡೆ

ಶಿರಾ

   ರಾಜ್ಯದಲ್ಲಿ ಕೊರೋನಾ ಮಹಾಮಾರಿಯ ಅಬ್ಬರ ಹೆಚ್ಚಾದಂತೆ ಕೂಲಿ ಕೆಲಸಕ್ಕೆಂದು ಈ ಹಿಂದೆ ಆಂಧ್ರ್ರದಿಂದ ಹಾಸನಕ್ಕೆ ಬಂದಿದ್ದ 95 ಕ್ಕೂ ಹೆಚ್ಚು ಮಂದಿ ಕೂಲಿ ಕಾರ್ಮಿಕರು ಹಾಸನದಿಂದ ಆಂಧ್ರ  ಪ್ರದೇಶದ ತಮ್ಮ ಸ್ವಗ್ರಾಮಕ್ಕೆ ತೆರಳುವಾಗ ಆರಕ್ಷಕರ ದಿಗ್ಬಂಧನಕ್ಕೆ ಒಳಗಾದ ಪ್ರಸಂಗ ಶಿರಾ ತಾಲ್ಲೂಕಿನ ಆಂಧ್ರದ ಗಡಿಯಲ್ಲಿ ಸೋಮವಾರ ರಾತ್ರಿ ನಡೆದಿದೆ.

   ಕಳೆದ ಒಂದು ವರ್ಷದ ಹಿಂದೆ ಆಂಧ್ರ್ರ ಪ್ರದೇಶದ ಪ್ರಕಾಶಂ ಜಿಲ್ಲೆಯ ಚಂದ್ರಶೇಖರ ಪುರದ ಸುಮಾರು 95 ಮಂದಿ ಕಾರ್ಮಿಕರು ಗ್ರಾನೈಟ್, ಗಾರೆ ಕೆಲಸಕ್ಕೆಂದು ಹಾಸನಕ್ಕೆ ಹೋಗಿದ್ದರು. ಕೊರೋನಾ ಭೀತಿಯಿಂದಾಗಿ ಈ ಎಲ್ಲಾ ಕಾರ್ಮಿಕರು ಸೋಮವಾರ ಸಂಜೆ ನಾಲ್ಕು ಟೆಂಪೂ ವಾಹನಗಳಲ್ಲಿ ಸ್ವಗ್ರಾಮಕ್ಕೆ ತೆರಳುತ್ತಿದ್ದಾಗ ಶಿರಾ ಸಮೀಪದಲ್ಲಿ ಆಂಧ್ರ್ರ ಪೊಲೀಸರ ದಿಗ್ಬಂಧನಕ್ಕೆ ಒಳಗಾದರು.

    ಆಂಧ್ರ್ರ ಪೊಲೀಸರು ಅವರನ್ನು ಮರಳಿ ಹಾಸನಕ್ಕೆ ತೆರಳುವಂತೆ ಸೂಚಿಸಿದಾಗ ವಿಧಿ ಇಲ್ಲದೆ ಶಿರಾ ಕಡೆ ಮರಳುವ ಸಂzರ್ಭದಲ್ಲಿ ಕರ್ನಾಟಕ ಪೊಲೀಸರು ಕೂಡ ಅವರನ್ನು ತಡೆದು ತಮ್ಮ ವಶಕ್ಕೆ ತೆಗೆದುಕೊಂಡರಲ್ಲದೆ, ಸೋಮವಾರ ರಾತ್ರಿ ಅವರನ್ನು ಶಿರಾ ನಗರದ ವಿದ್ಯಾರ್ಥಿ ನಿಲಯವೊಂದರಲ್ಲಿ ತಂಗಲು ಹೇಳಿ ಊಟೋಪಚಾರದ ವ್ಯವಸ್ಥೆ ಮಾಡಿಸಿದರು.

    ಮಂಗಳವಾರ ಬೆಳಗ್ಗೆ ಜಿಲ್ಲಾಧಿಕಾರಿಗಳು, ಮಧುಗಿರಿ ಉಪ ವಿಭಾಗಾಧಿಕಾರಿಗಳು ಹಾಗೂ ಸ್ಥಳೀಯ ತಹಸೀಲ್ದಾರ್ ಗಮನಕ್ಕೆ ತರಲಾಗಿ ಅವರನ್ನು ಮಧುಗಿರಿಯಲ್ಲಿ ಕ್ವಾರಂಟೈನ್‍ಲ್ಲಿಡುವ ಇಲ್ಲವೇ ಪರೀಕ್ಷೆಯ ನಂತರ ಅವರನ್ನು ಸ್ವ್ವಗ್ರಾಮಕ್ಕೆ ಕಳುಹಿಸುವ ವ್ಯವಸ್ಥೆ ಮಾಡಲು ಅಧಿಕಾರಿಗಳು ಸಮಾಲೋಚನೆ ನಡೆಸಿದ್ದಾರೆ ಎನ್ನಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap