ರಾಜಕಾರಣಿಗಳು ಏಲಿಯನ್ ಗಳಂತಾಗಿದ್ದಾರೆ : ಪ್ರೊ.ಚಂದ್ರಶೇಖರ ಪಾಟೀಲ

ಬೆಂಗಳೂರು

      ರಾಜ್ಯ ರಾಜಕಾರಣ ಬದಲಾಗಿದ್ದು ನಾವು ಆಯ್ಕೆ ಮಾಡಿದ ರಾಜಕಾರಣಿಗಳು ಏಲಿಯಾನ್‍ಗಳಂತೆ ವಲಸೆ ಹೋಗಿದ್ದಾರೆ. ಕೆಲವರು, ರೆಸಾರ್ಟ್ ಕಡೆ ಮುಖ ಮಾಡಿದರೆ,ಇನ್ನೂ ಕೆಲವರು ನಾಪತ್ತೆ ಆಗಿದಂತೆ ಕಾಣುತ್ತದೆ ಎಂದು ಹಿರಿಯ ಸಾಹಿತಿ  ಪ್ರೊ.ಚಂದ್ರಶೇಖರ ಪಾಟೀಲ ಅವರು ವ್ಯಂಗ್ಯವಾಡಿದರು.

       ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಶನಿವಾರ ಪದ್ಮಭೂಷಣ ಡಾ.ರಾಜಕುಮಾರ ಸಾಂಸ್ಕೃತಿಕ ಸಂಸ್ಥೆ ಏರ್ಪಡಿಸಿದ್ದ, ರಾಜಕುಮಾರ್ ಅಭಿಮಾನಿ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದು ಅವರಿಗೆ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿ ರಾಜ್ಯದ ರಾಜಕಾರಣಿಗಳು ತಮ್ಮ ಸರ್ವ ಉದ್ದೇಶ ಮರೆತು ‘ಏಲಿಯಾನ್’ಗಳಂತೆ ಹಾರಾಟ ನಡೆಸುತ್ತಿದ್ದಾರೆ ಎಂದು ಹರಿಹಾಯ್ದರು.

        ರಾಜ್ಯದಲ್ಲಿ ಹಲವು ಸಮಸ್ಯೆಗಳಿವೆ. ಕನ್ನಡ ಚಳವಳಿಗೆ ಸಂಬಂಧಿಸಿದ ಅನೇಕ ಬೇಡಿಕೆಗಳು ನೆನಗುದಿಗೆ ಬಿದ್ದಿವೆ. ಇದನ್ನು ಗಮನಿಸದ ರಾಜಕಾರಣಿಗಳು, ರೆಸಾರ್ಟ್ ಎಂದು ಹಾರಾಟ ನಡೆಸಿ ಸ್ವ ಉದ್ದೇಶ ಮರೆತು ವೈಯುಕ್ತಿಕ ಲಾಭ, ಅಧಿಕಾರ, ಹಣಕ್ಕಾಗಿ ಕೈಚಾಚುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

      ರಾಜ್ ಕುಮಾರ್ ಅಭಿಮಾನಿಗಳ ಸಂಘ ಹೋರಾಟಗಾರ ಮೂಲ ತವರು ಮನೆ ಹಾಗೂ ತಾಯಿ ಬೇರು ಇದ್ದಂತೆ.ಈ ಸಂಘಟನೇಯಲ್ಲಿಯೇ, ಅನೇಕರು ಕನ್ನಡ ಪರ ಧ್ವನಿಗೂಡಿಸಿದರು ಎಂದ ಅವರು, ಯುವ ಜನಾಂಗ ಚಳುವಳಿ ಮುಂದುವರೆ ಸಬೇಕು ಎಂದು ಕರೆ ನೀಡಿದರು.ಕಾರ್ಯಕ್ರಮದಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಡಾ.ಹೆಚ್.ಎಸ್. ದೊರೆಸ್ವಾಮಿ ,ಸಾಂಸ್ಕೃತಿಕ ಸಂಸ್ಥೆ ಅಧ್ಯಕ್ಷ ಶಂಕರ್ ಹೂಗಾರ ಪ್ರಾಸ್ತಾವಿಕ ನುಡಿಗಳನ್ನಾಡದರು. ಭಾರತೀಯ ಚಲನಚಿತ್ರ ಒಕ್ಕೂಟ ಉಪಾಧ್ಯಕ್ಷ ಕೆ.ಪಿ.ಎನ್. ಚಂದ್ರಶೇಖರ್, ಕನ್ನಡ ಜನಶಕ್ತಿ ಕೇಂದ್ರದ ಅಧ್ಯಕ್ಷ ಸಿ.ಕೆ.ರಾಮೇಗೌಡ ಸೇರಿದಂತೆ ಪ್ರಮುಖರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link