ಬೆಂಗಳೂರು:
ಪಾಸ್ ಹಂಚಿಕೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಿಟಿ ದೇವೇಗೌಡ ಹಾಗೂ ಸಚಿವ ಸಾರಾ ಮಹೇಶ್‍ದೇ ದರ್ಬಾರ್ ಆಗಿತ್ತು. ಜಿಲ್ಲಾಡಳಿತ ನಡೆದು ಕೊಳ್ಳುವ ರೀತಿ ನೀತಿಯಲ್ಲಿ ಲೋಪವಾಗಿದ್ದು,ಹೀಗಾಗಿ 2018ರ ಮೈಸೂರು ದಸರಾ ಆಚರಣೆ ಕುರಿತು ಸಂಪೂರ್ಣ ತನಿಖೆಯಾಗಬೇಕು ಎಂದು ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಆಗ್ರಹಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶಾಸಕ ತನ್ವೀರ್ ಸೇಠ್,ಮೈಸೂರು ದಸರಾ ಮಹೋತ್ಸವದಲ್ಲಿ ಕಾಂಗ್ರೆಸ್ ನಾಯಕರನ್ನ ಕಡೆಗಣಿಸಲಾಗಿದೆ.ಪಾಸ್ ಹಂಚಿಕೆಯಲ್ಲಿ ಸಚಿವರಾದ ಜಿ.ಟಿ.ದೇವೇಗೌಡರು ಮತ್ತು ಸಾರಾ ಮಹೇಶ್ ದರ್ಬಾರ್ ಜೋರಾಗಿತ್ತು.ಉಸ್ತುವಾರಿ ಸಚಿವರು 10ಸಾವಿರ ಪಾಸ್,ಸಾರಾ ಮಹೇಶ್5ಸಾವಿರ ಪಾಸ್ ಮತ್ತು ಮುಖ್ಯ ಮಂತ್ರಿಗಳ ಕಚೇರಿಗೆ 2ಸಾವಿರ ಪಾಸ್‍ಗಳು ರವಾನೆ ಯಾಗಿದೆ.ಅಲ್ಲದೆ ಗೋಲ್ಡ್‍ಪಾಸ್‍ಗಳನ್ನ ಮಾರಾಟ ಮಾಡಿದ್ದೂ ಉಂಟು,ಕೆಲವರು ಗೋಲ್ಡ್ ಪಾಸ್ ಹೊಂದಿದ್ದರು ಪ್ರವೇಶ ಸಿಗಲಿಲ್ಲ.ಜಿಲ್ಲಾಡಳಿತ ನಡೆದು ಕೊಳ್ಳುವ ರೀತಿ ನೀತಿಯಲ್ಲಿ ಲೋಪವಾಗಿದೆ.ಆದ್ದರಿಂದ ಪಾಸ್ ವಿತರಣೆ ಬಗ್ಗೆ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.
ಸರ್ಕಾರದಲ್ಲಿ ನಾವು ಇದ್ದೇವೆ ಎನ್ನೋದನ್ನ ಮರ್ತಿದೆ. ನಮ್ಮನ್ನು ಕಡೆಗಣಿಸಿದ್ದಾರೆ.ಪ್ರಾರಂಭದಲ್ಲಿ ನನಗು ಸಚಿವ ಪುಟ್ಟರಂಗಶೆಟ್ಟಿ ಅವರಿಗೆ ಅವಮಾನ ಮಾಡಿದ್ದಾರೆ.ಯಾರೂ ಕೂಡ ನನಗೆ ಕರೆ ಮಾಡಿಲ್ಲ.ದಸರಾ ಮಹೋತ್ಸವಕ್ಕೆ ಜಿ.ಟಿ.ದೇವೇಗೌಡರು ಆಹ್ವಾನದ ಬಗ್ಗೆ ಕರೆ ನೀಡಿಲ್ಲ.ಆಹ್ವಾನ ಪತ್ರಿಕೆಯಲ್ಲಿ ನನ್ನ ಹೆಸರಿನ ಜಾಗಕ್ಕೆ ಅವರದೇ ಪಕ್ಷದ ಅಧ್ಯಕ್ಷರ ಹೆಸರನ್ನ ಹಾಕಿದ್ರು. ಹೀಗಾಗಿ ಸರ್ಕಾರಕ್ಕೆ ಇವೆಲ್ಲಾ ಬಗ್ಗೆ ತನಿಖೆಗೆ ಒತ್ತಾಯಿಸುವೆ ಎಂದರು.
ನಾವು ದಸರಾ ಕಾರ್ಯಕ್ರಮದಲ್ಲಿ ದೂರ ಉಳಿದರು ನಮ್ಮ ಪ್ರತಿನಿಧಿಗಳು ಆಗಮಿಸಿದ್ದರು.ಡಿಸಿಎಂ ಪರಮೇಶ್ವರ್‍ರನ್ನ ಸಿಎಂ ಕಾಯಿಸಿದ್ದಾರೆ.ನಿನ್ನೆ 45ನಿಮಿಷಗಳು ಉಪಮುಖ್ಯಮಂತ್ರಿಗಳನ್ನ ಸಿಎಂ ಬರಲಿದ್ದಾರೆ ಎಂದು ಕಾಯಿಸಿದ್ದರು.ಸಿಎಂ ಎಲ್ಲಿ ಇರ್ತಾರೆ. ಯಾವಾಗ ಬರ್ತಾರೆ ಎಂದು ಪೊಲೀಸರಿಗೆ ಮಾಹಿತಿ ಇರುತ್ತದೆ.ಆದರೂ ಡಿಸಿಎಂ ಪರಮೇಶ್ವರ್‍ರನ್ನ ಕಾಯಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಈ ಬಗ್ಗೆ ನಮ್ಮ ಪಕ್ಷದಲ್ಲಿ ಚರ್ಚೆ ಮಾಡಲಾಗುವುದು.ಕೇವಲ ಪಾಸ್ ಹಂಚಿಕೆಯ ವಿಷಯವಲ್ಲದೆ,ಸಂಪೂರ್ಣ ದಸರಾದ ಆಡ ಳಿತ ವ್ಯವಸ್ಥಿತ ಬಗ್ಗೆ ನಮ್ಮ ಪಕ್ಷದಲ್ಲಿ ಚರ್ಚೆ ನಡೆಸಲಾಗುವುದು.ದಸರಾ ವೇಳೆ ನಮ್ಮ ಜೊತೆ ನಡೆದು ಕೊಂಡಿದ್ದು ಸರಿಯಿಲ್ಲ, ಸಚಿವರು ಹಾಗೂ ಅವರ ಪಿಎಗಳು ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದರು ಎಂದು ಮಾಜಿ ಸಚಿವ ತನ್ವೀರ್ ಸೇಠ್ ಜೆಡಿಎಸ್ ನಾಯಕರ ವಿರುದ್ದ ಗಂಭೀರ ಆರೋಪ ಮಾಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ