ಶಿರಾ:
ಗ್ರಾಮೀಣ ಪ್ರದೇಶದ ಪ್ರತಿಭಾವಂತ ವಿಧ್ಯಾರ್ಥಿಗಳು ಶೈಕ್ಷಣಿಕವಾಗಿ ಪ್ರಗತಿ ಸಾಧಿಸಲಿ ಎಂಬ ಉದ್ದೇಶದೊಂದಿಗೆ ಶಿರಾ ನಗರದಲ್ಲಿ ಸ್ಥಾಪನೆಗೊಂಡ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜ್ ಪ್ರಸಕ್ತ ಸಾಲಿನಲ್ಲಿ ಆರಂಭಗೊಳ್ಳಲಿದ್ದು 2019-20 ನೇ ಸಾಲಿನಲ್ಲಿ ವಿಧ್ಯಾರ್ಥಿಗಳು ಪ್ರವೇಶ ಪಡೆಯಬಹುದಾಗಿದೆ ಎಂದು ಶಾಸಕ ಹಾಗೂ ರಾಜ್ಯ ಸಾರಿಗೆ ನಿಗಮದ ಅಧ್ಯಕ್ಷ ಬಿ.ಸತ್ಯನಾರಾಯಣ್ ತಿಳಿಸಿದರು.
ನಗರದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಿವಿಲ್, ಮೆಕಾನಿಕಲ್, ಎಲೆಕ್ಟ್ರಿಕಲ್ ಕೋರ್ಸ್‍ಗಳು ವಿಧ್ಯಾರ್ಥಿಗಳಿಗೆ ಲಭ್ಯವಾಗಲಿದ್ದು, ಪ್ರತಿ ವರ್ಷ 150ವಿಧ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯ ಬಹುದಾಗಿದೆ. ಕಳೆದ ಎರಡು ವರ್ಷಗಳಿಂದಲೂ ಪಾಲಿಟೆಕ್ನಿಕ್ ಕಟ್ಟಡದ ಕಾಮಗಾರಿ ನಡೆಯುತ್ತಿದ್ದು ಇದೀಗ ಕಟ್ಟಡ ಪೂರ್ಣಗೊಂಡಿದೆ. ಕೆಲ ತಾಂತ್ರಿಕ ತೊಂದರೆಗಳಿಂದಾಗಿ ದಾಖಲಾತಿ ಆರಂಭಗೊಳ್ಳಲು ತಡವಾಗಿದ್ದು ಇದೀಗ ಶಿರಾ ಭಾಗದ ವಿದ್ಯಾರ್ಥಿಗಳಿಗೆ ಪಾಲಿಟೆಕ್ನಿಕ್ ಆರಂಭದಿಂದ ಮಕ್ಕಳ ಭವಿಷ್ಯ ಉಜ್ವಲಗೊಳ್ಳಲಿದೆ ಎಂದರು.
ಶಿರಾ ನಗರದ ಹೊರ ವಲಯದಲ್ಲಿನ ರೇಷ್ನೇ ಇಲಾಖಾ ವ್ಯಾಪ್ತಿಯ ಫಾರಂನಲ್ಲಿ ನಿರ್ಮಾಣಗೊಂಡ ಕಟ್ಟಡದಲ್ಲಿ ಈ ವರ್ಷದಿಂದಲೇ ದಾಖಲಾತಿಗಳು ಪ್ರಾರಂಭವಾಗಲಿದ್ದು ಸರ್ಕಾರ ಶಾಲಾ ಆರಂಭಕ್ಕೆ ಮೇ:6 ರಂದು ಅನುಮತಿ ನೀಡಿದೆ. ಎಸ್.ಎಸ್.ಎಲ್.ಸಿ. ಹಾಗೂ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆಗೊಮಡ ವಿದ್ಯಾರ್ಥಿಗಳು ಮೇ:18ರೊಳಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ ಎಂದು ಸತ್ಯನಾರಾಯಣ್ ತಿಳಿಸಿದರು.
ಕಟ್ಟಡದ ಆರಂಭದಲ್ಲಿ ಕಾಲೇಜಿನ ಸಿಬ್ಬಂಧಿ ಕೂರಲು ಒಮದು ಪೀಠೋಪಕರಣ ಕೂಡಾ ಇರಲಿಲ್ಲ. ಸರ್ಕಾರಕ್ಕೆ ಒತ್ತಡ ತಂದು ಪೀಠೋಪರಣ ಹಾಗೂ ಪಾಠೋಪಕರಣಗಳಿಗೆ ಅನುದಾನ ಮಂಜೂರು ಮಾಡಿಸಲಾಗಿದೆ. ಈಗಾಗಲೇ 40 ಕಂಪ್ಯೋಟರ್‍ಗಳನ್ನು ಸರಬರಾಜು ಮಾಡಿಕೊಳ್ಳಲಾಗಿದ್ದು ಇನ್ನೂ 30 ಕಂಪ್ಯೂಟರ್ ಹಾಗೂ ಹೆಚ್ಚಿನ ಸಿಬ್ಬಂಧಿಗೆ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಲಾಗಿದೆ ಎಂದು ಸತ್ಯನಾರಾಯಣ್ ಹೇಳಿದರು.ಎ.ಪಿ.ಎಂ.ಸಿ. ಅಧ್ಯಕ್ಷ ನರಸಿಂಹೇಗೌಡ, ಕೋಟೆ ಮಹದೇವ್, ಲಕ್ಕನಹಳ್ಳಿ ಮಂಜುನಾಥ್, ಕೆಂಚೇಗೌಡ, ಜುಂಜೇಗೌಡ, ಹಂದಿಕುಂಟೆ ಚಂದ್ರಶೇಖರ್, ಸಿದ್ಧನಹಳ್ಳಿ ಚಂದ್ರಣ್ಣ, ಚೇತನ್ ಸೇರಿದಂತೆ ಅನೇಕ ಪ್ರಮುಖರು ಹಾಜರಿದ್ದರು.