ಬಳ್ಳಾರಿ :
ಪಿಪಿಎ ಕಿಟ್ ಗಳ ಕೊರತೆ ಇದೆ. ಕೆಲವೆಡೆ ಕಿಟ್ ಸಿಕ್ತಿಲ್ಲ. ಪ್ರತಿಯೊಂದು ಜಿಲ್ಲೆಯಲ್ಲಿ ಕೋವಿದ್ ಆಸ್ಪತ್ರೆ ಆರಂಭಿಸಿ ಅಲ್ಲಿ 200 ಬೇಡ್ ಮಾಡಿದೆ ಅದಕ್ಕಾಗಿ ರಾಜ್ಯದಲ್ಲಿ 8 ಸಾವಿರ ಬೆಡ್ ಆಗಿರುವುದರಿಂದ ಪಿಪಿಎ ಕಿಟ್ ಬೇಡಿಕೆ ಹೆಚ್ಚಾಗಿದೆ. ಸ್ವಲ್ಪ ಸಪ್ಲೈ ಕಡಿಮೆ ಆಗಿದೆ. ನಿನ್ನೆ ಒಂದಿಷ್ಟು ಬಂದಿದೆ. ಇಂದು ಎಲ್ಲಡೆ ಕಳಿಸೋ ಕೆಲಸ ಮಾಡ್ತಿದ್ದೇವೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಹೇಳಿದ್ದಾರೆ.ಅವರಿಂದು ನಗರದ ತಮ್ಮನಿವಾಸದಲ್ಲಿ ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ಕೇಂದ್ರ ಆರೋಗ್ಯ ಸಚಿವ ಜೊತೆ ಈ ಕುರಿತು ಮಾತನಾಡಿರುವೆ. ಇನ್ನು ಎರಡು ವಾರ ಕ್ವಾರಂಟೈನ್ ಮಾಡಲು ಹೇಳಿದ್ದಾರೆ. ಕೇಂದ್ರ ಎಲ್ಲವನ್ನೂ ನೀಡುತ್ತೇವೆ ಎಂದಿದ್ದಾರೆ. ವಿಶೇಷ ವಿಮಾನದಲ್ಲಿ ರಾಜ್ಯಕ್ಕೆ ಬೇಕಾದ ಸಲಕರಣೆಗಳ ಕಳಿಸುವುದಾಗಿ ಹೇಳಿದ್ದಾರೆಂದರು.
ರಾಜ್ಯದಲ್ಲಿ 91 ಕೊರೊನಾ ಪಾಸಿಟಿವ್ ಪತ್ತೆ ಯಾಗಿದ್ದು ಅವರಲ್ಲಿ 6 ಜನ ಗುಣಮುಖರಾಗಿದ್ದಾರೆ. 3 ಜನ ಪ್ರಾಣ ಕಳೆದುಕೊಂಡಿದ್ದಾರೆ.25 ಸಾವಿರಕ್ಕೂ ಹೆಚ್ಚು ಜನರನ್ನು ಗುರುತಿಸಿ ಮೂರು ಸಾವಿರ ಸ್ಯಾಂಪಲ್ ಕಲೆಕ್ಷನ್ ಮಾಡಿದ್ದೇವೆ. ಅದರಲ್ಲಿ 133 ಜನರ ವರದಿ ಬರಬೇಕಿದೆ. ಮೂವತ್ತು ಮೂರು ಸಾವಿರ ಜನರನ್ನು ನಿರೀಕ್ಷಣೆಯಲ್ಲಿಟ್ಟಿದ್ದೇವೆ.226 ಜನರು ಐಸೋಲೇಷನ್ ವಾರ್ಡ್ ನಲ್ಲಿದ್ದಾರೆಂದು ತಿಳಿಸಿದರು.
ಹೊಸಪೇಟೆ ಯಲ್ಲಿ ಮೂರು ಪಾಸಿಟಿವ್ ಬಂದಿದೆ. ಇದರಿಂದ ಅಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಸೋಂಕಿತರ ಟ್ರಾವೆಲ್ ಹಿಸ್ಟರ್ ನೋಡ್ತಿದ್ದೇವೆ. ಮನೆಯ ಸುತ್ತಲೂ ಬಫೋರ್ ಝೋನ್ ಘೋಷಣೆ ಮಾಡಿದ್ದೆ. ಇಡೀ ಪಟ್ಟಣವನ್ನು ಹೋಮ್ ಕ್ವಾರಂಟೈನ್ ಮಾಡಿದೆಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ