ದಾವಣಗೆರೆ:
ಧಾರವಾಡದ ಎಸ್.ಡಿ.ಎಂ. ತಾಂತ್ರಿಕ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರಮಟ್ಟದ ತಾಂತ್ರಿಕ ಮೇಳ ಇನ್‍ಸಿಗ್ನಿಯಾ ದಲ್ಲಿ ನಗರದ ಜಿ.ಎಂ. ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಭಾಗವಹಿಸಿ ಪ್ರಬಂಧ ಮಂಡಿಸಿ ಪ್ರಶಸ್ತಿ ಪಡೆದಿದ್ದಾರೆ.
ಕಾಲೇಜಿನ ಇನ್ಫೊರ್ಮೇಷನ್ ಸೈನ್ಸ್ ಅಂಡ್ ಇಂಜಿನಿಯರಿಂಗ್ ವಿಭಾಗದ 4ನೇ ಸೆಮಿಸ್ಟರ್ ವಿದ್ಯಾರ್ಥಿಗಳಾದ ರಾಘವೇಂದ್ರ .ಎ ಹಾಗೂ ನೇಮಿತಾ.ಎನ್.ಜಿ. ಅವರುಗಳು “Pribots: A Virtual Conversational Interface Agent”ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಮಂಡಿಸಿದ ತಾಂತ್ರಿಕ ಪ್ರಬಂದ ಕ್ಕೆ ಪ್ರಥಮ ಪ್ರಶಸ್ತಿ ದೊರೆತಿದೆ.
ವಿನಯ್ ಬಿ.ಕೆ ಹಾಗೂ ಹರ್ಷಿತಾ.ಜಿ.ಇ. “Emotional Stress Detection Using EEG Signal and Deep Learning Technologies” ಎಂಬ ವಿಷಯ ಕುರಿತು ಮಂಡಿಸಿದ ತಾಂತ್ರಿಕ ಪ್ರಬಂದಕ್ಕೆ ದ್ವಿತೀಯ ಪ್ರಶಸ್ತಿ ದೊರೆತಿದೆ. ಇನ್ಫೊರ್ಮೇಷನ್ ಸೈನ್ಸ್ ಅಂಡ್ ಇಂಜಿನಿಯರಿಂಗ್ ವಿಭಾಗದ ಪ್ರೂ|| ಫೈರೋಜ್ ಖಾನ್ ಮತ್ತು ಪ್ರೂ|| ಇಮ್ರಾನ್ ಖಾನ್ ಅವರುಗಳು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುವುದರ ಜೊತೆಗೆ ತರಬೇತಿ ನೀಡಿದ್ದಾರೆ.
ಈ ಸಾಧಕ ವಿದ್ಯಾರ್ಥಿಳಿಗೆ ಕಾಲೇಜಿನ ಆಡಳಿತಾಧಿಕಾರಿ ವೈ.ಯು. ಸುಭಾಶ್‍ಚಂದ್ರ, ಪ್ರಾಂಶುಪಾಲ ಡಾ|| ಪಿ.ಪ್ರಕಾಶ್, ಇನ್ಫೊರ್ಮೇಷನ್ ಸೈನ್ಸ್ ಅಂಡ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸರು ಹಾಗೂ ಡೀನ್ ಅಕ್ಯಾಡೆಮಿಕ್ ಡಾ||ಸುನೀಲ್ ಕುಮಾರ್, ಪ್ರಾಧ್ಯಾಪಕ ವರ್ಗದವರು ಹಾಗು ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ