ಪ್ರಾಚೀನ ಸ್ಮಾರಕ ರಕ್ಷಣೆ ನಮ್ಮ ಹೊಣೆ

ಚಿತ್ರದುರ್ಗ:

     ಹೊಸತನದ ಆವೇಶದಲ್ಲಿ ಪ್ರಾಚೀನ ಸ್ಮಾರಕ, ಕಟ್ಟಡ, ಅವಶೇಷಗಳು ನಾಶವಾಗಲು ಬಿಡಬಾರದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪಸಮನ್ವಯ ಯೋಜನಾಧಿಕಾರಿ(ಆರ್.ಎಂ.ಎಸ್.ಎ.) ಸಿ.ಎಂ.ತಿಪ್ಪೇಸ್ವಾಮಿ ಶಾಲಾ ಮಕ್ಕಳಲ್ಲಿ ಜಾಗೃತಿ ಮೂಡಿಸಿದರು.

     ಪಂಚಾಚಾರ್ಯ ಕಲ್ಯಾಣ ಮಂಟಪದ ಸಮೀಪವಿರುವ ತರಳಬಾಳು ಆಂಗ್ಲ ಪ್ರೌಢಶಾಲೆಯಲ್ಲಿ ಬ್ಲಾಕ್ ಹಂತದಲ್ಲಿ ವಿಜೇತರಾದ ಮಕ್ಕಳಿಗೆ ಗುರುವಾರ ಹಮ್ಮಿಕೊಳ್ಳಲಾಗಿದ್ದ 2018-19 ನೇ ಸಾಲಿನ ಜಿಲ್ಲಾ ಮಟ್ಟದ ಪ್ರಾಚ್ಯ ಪ್ರಜ್ಞೆ ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.

       ಹಿಂದಿನ ಇತಿಹಾಸ ಗೊತ್ತಿಲ್ಲದೆ ಭವಿಷ್ಯವನ್ನು ನಿರ್ಮಾಣ ಮಾಡಲು ಸಾಧ್ಯವಿಲ್ಲ. ಪುರಾತನ ಜ್ಞಾನದ ಪ್ರಜ್ಞೆ ಇರಬೇಕು. ಹಚ್ಚ ಕನ್ನಡದ ಸಾಮ್ರಾಜ್ಯ ಹುಟ್ಟಿದ್ದು, ಶಾತವಾಹನ, ಕದಂಬರು, ಮೌರ್ಯರ ಕಾಲದಲ್ಲಿ. ಚಿತ್ರದುರ್ಗ ಜಿಲ್ಲೆ ಹಲವಾರು ವಿಶಿಷ್ಟ ಸ್ಮಾರಕಗಳನ್ನು ಒಳಗೊಂಡಿರುವುದರಿಂದ ದಕ್ಷಿಣ ಭಾರತದಲ್ಲಿಯೇ ವಿಶೇಷ ಸ್ಥಾನ ಪಡೆದುಕೊಂಡಿದೆ. ಕಣ್ಣೆದುರಿನಲ್ಲಿಯೇ ಅನೇಕ ಸ್ಮಾರಕಗಳು ನಾಶವಾಗುತ್ತಿದ್ದರು. ಸಾರ್ವಜನಿಕರಲ್ಲಿ ಜಾಗೃತಿಯಾಗುತ್ತಿಲ್ಲ. ಹಾಗಾಗಿ ಸ್ಮಾರಕ, ಅವಶೇಷಗಳ ಸಂರಕ್ಷಣೆ ಕುರಿತು ಮಕ್ಕಳಲ್ಲಿ ಅರಿವು ಮೂಡಿಸಬೇಕಿದೆ ಎಂದು ಹೇಳಿದರು.

     ಮೊಳಕಾಲ್ಮುರು ತಾಲೂಕಿನ ಬ್ರಹ್ಮಗಿರಿ ಬೆಟ್ಟದ ತಪ್ಪಲಿನಲ್ಲಿ 1941 ರಲ್ಲಿ ಉತ್ಖನನ ಮಾಡಿದಾಗ ಅಶೋಕನ ಕಾಲದಲ್ಲಿ ಅಲ್ಲಿ ಮಾನವ ವಾಸ ಮಾಡುತ್ತಿದ್ದ ಎಂಬ ಕುರುಹುಗಳು ಸಿಕ್ಕಿತು. ಚಂದ್ರವಳ್ಳಿಯ ದವಳಪ್ಪನಗುಡ್ಡದ ಮೇಲಿರುವ ಅನೇಕ ಲಿಂಗಗಳನ್ನು ಪ್ರಾಚ್ಯ ಪ್ರಜ್ಞೆಯಿಲ್ಲದ ಅನಾಗರೀಕರು ಕಲ್ಲಿನಿಂದ ಕುಟ್ಟಿ ಹಾಳು ಮಾಡಿದ್ದಾರೆ. ಪ್ರಾಚೀನ ಕಾಲದ ವಿಷಯ ಹೇಳುವ ಅವಶೇಷ, ಸ್ಮಾರಕಗಳನ್ನು ಪ್ರತಿಯೊಬ್ಬರು ರಕ್ಷಿಸಬೇಕಾಗಿದೆ. ಜಿಲ್ಲೆಯಲ್ಲಿರುವ ವೀರಗಲ್ಲುಗಳನ್ನು ನೋಡಿದರೆ ತಲೆಎತ್ತಿ ಸ್ವಾಭಿಮಾನದಿಂದ ನಡೆಯುವ ಪ್ರಜ್ಞೆ ಮೂಡುತ್ತದೆ. ಅದಕ್ಕಾಗಿ ವಿದ್ಯಾರ್ಥಿಗಳು ವೀರಗಲ್ಲುಗಳನ್ನು ನೋಡಬೇಕೆಂದರು.

       ವಿಷಯ ಪರಿವೀಕ್ಷಕ ಕುಬೇಂದ್ರಪ್ಪ ಮಾತನಾಡುತ್ತ ಇತಿಹಾಸವನ್ನು ತಿಳಿಯದವರು ಇತಿಹಾಸವನ್ನು ಸೃಷ್ಟಿಸಲು ಆಗವುದಿಲ್ಲ. ಸರಿಯಾಗಿ ಇತಿಹಾಸವನ್ನು ತಿಳಿದುಕೊಂಡರೆ ಮುಂದಿನ ಪೀಳಿಗೆಗೆ ಇತಿಹಾಸದ ಮಹತ್ವವನ್ನು ತಿಳಿಸಬಹುದು. ಚಿತ್ರದುರ್ಗದಲ್ಲಿ ಐತಿಹಾಸಿಕ ಕೋಟೆ, ಸ್ಮಾರಕ, ಅವಶೇಷ, ರಾಜಮಹಾರಾಜರ ಇತಿಹಾಸ ಗೊತ್ತಾಗುತ್ತದೆ. ಯುವಜನಾಂಗ ಚಿತ್ರದುರ್ಗದ ಇತಿಹಾಸ ತಿಳಿದುಕೊಂಡು ದೇಶದ ಸಂಸ್ಕøತಿ, ನಾಗರೀಕತೆಯನ್ನು ಉಳಿಸಬೇಕಾಗಿದೆ ಎಂದು ಮನವಿ ಮಾಡಿದರು.ವಿಜಯಕುಮಾರ್, ನರಸಿಂಹಪ್ಪ, ವಿಷಯ ಪರಿವೀಕ್ಷಕರುಗಳಾದ ಕವಿತ, ಗೋವಿಂದಪ್ಪ, ಚಂದ್ರಣ್ಣ, ಶಿವಣ್ಣ, ನೋಡಲ್ ಅಧಿಕಾರಿ ಮಹಲಿಂಗಪ್ಪ ವೇದಿಕೆಯಲ್ಲಿದ್ದರು.ಸ್ಮಾರಕಗಳ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳು ಹಾಗೂ ಯುವಜನತೆಯ ಪಾತ್ರ, ಚಿತ್ರದುರ್ಗ ಕೋಟೆಯ ಸ್ಮಾರಕಗಳು, ಹಂಪಿ ಸ್ಮಾರಕ, ವಿಜಯಪುರದ ಗೋಳಗುಮ್ಮಟ ಚಿತ್ರ ಬರೆಯುವ ಸ್ಪರ್ಧೆಯನ್ನು ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿತ್ತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link