ಕಾನೂನನ್ನು ಸರಿಯಾಗಿ ಪಾಲಿಸಲು ಕರೆ

ಚೇಳೂರು

     ಕಾನೂನು ಬಗ್ಗೆ ಎಷ್ಟು ತಿಳಿದರೂ ಅದು ಕಮ್ಮಿ. ಆದರೆ ತಿಳಿದಷ್ಟು ಕಾನೂನನ್ನು ಸರಿಯಾಗಿ ಪಾಲಿಸುವುದರಿಂದ ಕಾನೂನಿಗೆ ಗೌರವವನ್ನು ನೀಡಿದಂತಾಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಿಡಿಪಿಒ ಹೊನ್ನೇಶಪ್ಪ ತಿಳಿಸಿದರು.

     ಇವರು ಚೇಳೂರಿನ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಆವರಣದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ತಾಲ್ಲೂಕು ಕಾನೂನು ಸೇವಾ ಸಮಿತಿ, ಅಭಿಯೋಜನಾ ಇಲಾಖೆ, ತಾಲ್ಲೂಕು ವಕೀಲರ ಸಂಘ ಮತ್ತು ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಕಾನೂನು ಸಾಕ್ಷರತಾ ರಥದಲ್ಲಿ ಮಹಿಳೆಯರಿಗೆ ಕಾನೂನು ಅರಿವು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಇಂತಹ ಕಾರ್ಯಕ್ರಮದಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವುದರಿಂದ ತಮ್ಮ ಮನೆಯಲ್ಲಿಯಾಗಲಿ, ತಮ್ಮ ಸುತ್ತಮುತ್ತಲಿನ ಪ್ರದೇಶದಲ್ಲಾಗಲಿ ಕಾನೂನಿನ ಬಗ್ಗೆ ಅರಿವು ಮೂಡಿಸಲು ಸಹಕಾರಿಯಾಗುತ್ತದೆ ಎಂದರು.

    ಗುಬ್ಬಿಯ ಪ್ರಧಾನ ಸಿವಿಲ್ ನ್ಯಾಯಾಧೀಶೆ ರಾಧಾ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡುತ್ತ ನಮ್ಮಗಳ ರಕ್ಷಣೆಗೆಂದು ಇರುವ ಕಾನೂನು ನಾವು ಹುಟ್ಟಿನಿಂದ ನಮ್ಮಗಳ ಜೊತೆ ಇರುತ್ತದೆ. ಅದನ್ನು ನಾವುಗಳು ಬೆಳೆದಂತೆ ಗೌರವಿಸಿಕೊಂಡು ಬಂದರೆ ಅದು ಯಾವಾಗಲೂ ನಮ್ಮಗಳ ರಕ್ಷಣೆಯನ್ನು ಮಾಡುತ್ತದೆ. ಹಲವು ಸಂದರ್ಭಗಳಲ್ಲಿ ಕಾನೂನು ನಮ್ಮಗಳಿಗೆ ಉತ್ತಮವಾದ ರಕ್ಷಣೆಯನ್ನು ನೀಡುತ್ತದೆ, ಆದರೆ ಅದಕ್ಕೆ ತಕ್ಕಂತೆ ನಾವು ಕಾನೂನನ್ನ ಗೌರವದಿಂದ ಕಾಣಬೇಕಾಗಿದೆ ಎಂದರು.

    ಈ ಕಾರ್ಯಕ್ರಮದಲ್ಲಿ ಜೀವನಾಂಶ ಮತ್ತು ಆಸ್ತಿಯ ಹಕ್ಕು ಬಗ್ಗೆ ವಕೀಲೆ ಪಿ.ಎಂ.ಪುಷ್ಪಾವತಿ ಉಪನ್ಯಾಸವನ್ನು ನೀಡಿದರು.
ಈ ಕಾರ್ಯಕ್ರಮದಲ್ಲಿ ಅಧಿಕ ಸಿವಿಲ್ ನ್ಯಾಯಾಧೀಶರಾದ ಎನ್.ಗಣೇಶ್, ಗ್ರಾಪಂ ಅಧ್ಯಕ್ಷೆ ಗಂಗಮ್ಮ, ಸರ್ಕಾರಿ ಅಭಿಯೋಜಕರಾದ ಮುನಿರಾಜು, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಟಿ.ಜಿ.ಷಡಾಕ್ಷರಿ, ಉಪಾಧ್ಯಕ್ಷ ಎ.ಎಸ್.ಶಶಿಧರ್, ಪ್ರಧಾನ ಕಾರ್ಯದರ್ಶಿ ಎಂ.ಪಿ.ಮೋಹನ್, ಗುಬ್ಬಿಯ ಸಿ.ಪಿ.ಐ. ರಂಗಸ್ವಾಮಯ್ಯ, ಪಿಎಸ್‍ಐ ಲಕ್ಷ್ಮೀಕಾಂತ್, ಅಂಗನವಾಡಿ ಮೇಲ್ವಿಚಾರಕಿ ಲೀಲಾವತಿ, ವಕೀಲರ ಸಂಘದ ಪದಾಧಿಕಾರಿಗಳು, ಸದಸ್ಯರು, ಮಹಿಳಾ ಸಂಘದ ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಇತರರು ಭಾಗವಹಿಸಿದ್ದರು.

                   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link