ತುಮಕೂರು 

ತುಮಕೂರು ನಗರದಲ್ಲಿ ನಡೆಯುತ್ತಿರುವ ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ 24 ಗಂಟೆಗಳ ಕಾಲ ಕುಡಿಯುವ ನೀರು ಸರಬರಾಜು ಕಾಮಗಾರಿಯಲ್ಲಿ ಬೇಧಭಾವ ತೋರಲಾಗುತ್ತಿತ್ತು. ಒಂದು ರಸ್ತೆಯಲ್ಲಿ ಉತ್ತಮವಾಗಿ ಟಾರ್ ಹಾಕಿದರೆ ಇನ್ನೊಂದು ರಸ್ತೆಯಲ್ಲಿ ಜಲ್ಲಿ ಕಲ್ಲು ಹಾಕಲಾಗಿತ್ತು. ಇದರಿಂದ ಬೇಸತ್ತ ಜನರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದರು. ಈ ಬಗ್ಗೆ ಪತ್ರಿಕೆಯಲ್ಲಿ ವರದಿ ಬರುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಅಧಿಕಾರಿ ವರ್ಗ ಗುರುವಾರ ಬೆಳಗ್ಗೆಯಿಂದಲೇ ಎಸ್‍ಎಸ್‍ಪುರಂನ ರಸ್ತೆಗಳಲ್ಲಿ ಟಾರ್ ಹಾಕುತ್ತಿದ್ದಾರೆ.
ಗಾಂಧಿನಗರದಲ್ಲಿ ಟಾರ್ ಹಾಕಿ ರಸ್ತೆಯ ಅಭಿವೃದ್ಧಿ ಮಾಡಿ, ಜನರಿಗೆ ಅನುಕೂಲವಾಗುವಂತೆ ಮಾಡಲಾಗಿತ್ತು. ಆದರೆ ಉಳಿದಂತೆ ಎಸ್‍ಎಸ್‍ಪುರಂನ ಹಲವು ರಸ್ತೆಗಳಲ್ಲಿ ಜಲ್ಲಿಕಲ್ಲು , ಮಣ್ಣು ಹಾಕಿ ಬಿಡಲಾಗಿತ್ತು. ಇದರಿಂದ ಜನರು ಓಡಾಡಲು ಪರದಾಡುವಂತಾಗಿತ್ತು. ಸ್ಥಳೀಯರು ಪಾಲಿಕೆ ಸದಸ್ಯರ ಮೇಲೆ ಆಕ್ರೋಶ ವ್ಯಕ್ತ ಪಡಿಸುತ್ತಿದ್ದರು. ಈ ಸಮಸ್ಯೆ ಬಗ್ಗೆ ಗುರುವಾರದ
ಪತ್ರಿಕೆಯಲ್ಲಿ ಕಾಮಗಾರಿಯಲ್ಲಿ ತಾರತಮ್ಯ:
ಸಾರ್ವಜನಿಕರ ಆಕ್ರೋಶ ಎಂಬ ತಕೆಬರಹದಡಿ ವರದಿ ಪ್ರಕಟವಾಗಿತ್ತು. ಈ ವರದಿಗೆ ಎಚ್ಚೆತ್ತ ಅಧಿಕಾರಿಗಳು, ಎಂಜಿನಿಯರ್‍ಗಳು ಸ್ಪಂದಿಸಿ ರಸ್ತೆಯ ಪಕದಲ್ಲಿನ ಹಳ್ಳಕ್ಕೆ ಟಾರ್ ಹಾಕಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿ ದ್ದಾರೆ. ಈ ಬಗ್ಗೆ ಸ್ಥಳೀಯರು ಪತ್ರಿಕೆ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
