ಕುಣಿಗಲ್
ತಹಸೀಲ್ದಾರ್ ಕಚೇರಿಯ ಆವರಣವೇ ನೀರಿನ ಹೊಂಡವಾಗಿ ನಿರ್ಮಾಣ ಎಂಬ ತಲೆಬರಹದಡಿ ನೆನ್ನೆ ಅ.17ರಂದು ಪ್ರಜಾಪ್ರಗತಿ ಪತ್ರಿಕೆಯಲ್ಲಿ ಪ್ರಕಟಿಸಲಾಗಿತ್ತು. ತಾಲ್ಲೂಕು ಶಕ್ತಿ ಕೇಂದ್ರವಾದ ತಹಸೀಲ್ದಾರ್ ಹಾಗೂ ದಂಡಾಧಿಕಾರಿಗಳ ಕಚೇರಿಯ ಆವರಣವೇ ಕೆಲ ತಿಂಗಳಿಂದ ನೀರಿನ ಹೊಂಡವಾಗಿ ನಿರ್ಮಾಣವಾಗಿರುವುದರಿಂದ ಅಲ್ಲಿಗೆ ನಿತ್ಯ ಆಗಮಿಸುವ ಹಿರಿಯ ನಾಗರಿಕರು, ಮಹಿಳೆಯರು, ಅಂಗವಿಕಲರು ಸೇರಿದಂತೆ ಸಾವಿರಾರು ಜನ ತಮ್ಮ ಕಂದಾಯ ಇಲಾಖೆ ಸಂಬಂಧಿಸಿದ ಕೆಲಸ ಮಾಡಿಸಿಕೊಳ್ಳಲು ಬರುತ್ತಾರೆ.
ಆದರೆ ಇಂತಹ ತಾಲ್ಲೂಕು ಮಟ್ಟದ ಅಧಿಕಾರಿಗಳೇ ಇರುವ ಕಚೇರಿ ಇಂತಹ ವಾತಾವರಣದಿಂದ ಕೂಡಿರುವುದು ವಿಪರ್ಯಾಸ ಸಂಗತಿ ಹಾಗೂ ಇದೇ ವಿಚಾರವನ್ನ ಹಲವು ಹಿರಿಯ ನಾಗರೀಕರು ಖಂಡಿಸಿ ಅಧಿಕಾರಿಗಳ ಜವಾಬ್ದಾರಿಯ ಬಗ್ಗೆ ಕಟುವಾಗಿ ಟೀಕಿಸುವ ಮೂಲಕ ತಮ್ಮ ಅಭಿಪ್ರಾಯವನ್ನು ಪ್ರಗತಿ ಪತ್ರಿಕೆಗೆ ತೋಡಿಕೊಂಡಿದ್ದರು.
ಇಂತಹ ವಿಚಾರವನ್ನು ಕಠಿಣ ಪದಗಳೊಂದಿಗೆ ಅಧಿಕಾರಿಗಳಿಗೆ ಮುಟ್ಟುವಂತೆ ಪ್ರಕಟಿಸಿದ ಹಿನ್ನೆಲೆಯಲ್ಲಿ ಗುರುವಾರ ಅ.17 ಬೆಳಿಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಪುರಸಭೆಯವರಿಗೆ ಸೂಚಿಸಿದ ಹಿನ್ನೆಲೆಯಲ್ಲಿ ಅವರು ಟ್ರ್ಯಾಕ್ಟರ್ ಮೂಲಕ ನೀರಿನ ಹೊಂಡವಾಗಿ ನಿರ್ಮಾಣವಾಗಿದ್ದ ತಾಲ್ಲೂಕು ಕಚೇರಿಯ ಮುಂಭಾಗದ ಗುಂಡಿಗೆ ಮಣ್ಣು ತುಂಬುವ ಕೆಲಸ ಮಾಡಿದ್ದಾರೆ. ಇಂತಹ ಕೆಲಸವನ್ನು ಮಾಡಲು ಶೀಘ್ರವಾಗಿ ಎಚ್ಚೆತ್ತು ಮುಂದಾಗಿರುವ ಅಧಿಕಾರಿಗಳ ಕ್ರಮಕ್ಕೆ ಪ್ರಜಾಪ್ರಗತಿ ಈ ಮೂಲಕ ಅವರನ್ನು ಅನಭಿನಂದಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
