ಹುಳಿಯಾರು:
ಪತ್ರಿಕೆಯಲ್ಲಿ ಬಂದ ವರದಿಯ ಪರಿಣಾಮ ಹುಳಿಯಾರಿನ ಒಣಕಾಲುವೆಗೆ ಸುರಿದಿದ್ದ ರಸ್ತೆ ತ್ಯಾಜ್ಯವನ್ನು ಗುತ್ತಿಗೆದಾರ ತೆರವುಗೊಳಿಸಿದ್ದಾರೆ.ತಿಮ್ಲಾಪುರ ಕೆರೆಯಿಂದ ಹುಳಿಯಾರು ಕೆರೆಗೆ ನೀರು ಹರಿಸುವ ಸಲುವಾಗಿ ಹುಳಿಯಾರು ಬಳಿ ತಿಪಟೂರು ರಸ್ತೆಗೆ ಅಡ್ಡಲಾಗಿ 30 ವರ್ಷಗಳ ಹಿಂದೆ ಕಾಲುವೆ ನಿರ್ಮಾಣ ಮಾಡಲಾಗಿತ್ತು. ಯಾವುದೇ ಜಲ ಮೂಲ ಇಲ್ಲದ ಹುಳಿಯಾರು ಕೆರೆ ತುಂಬಲು ಈ ಕಾಲುವೆ ಅತ್ಯಗತ್ಯವಾಗಿತ್ತು. ತಿಮ್ಲಾಪುರ ಕೆರೆಗೆ ತುಂಬಿದ ಸಂದರ್ಭದಲ್ಲೆಲ್ಲಾ ಹುಳಿಯಾರು ಕೆರೆಗೆ ಈ ಕಾಲುವೆ ಮೂಲಕ ನಿರು ಹರಿಸಲಾಗಿತ್ತು.
ಆದರೆ ಈ ಕಾಲುವೆಗೆ ಹುಳಿಯಾರಿನಲ್ಲಿ ನಡೆಯುತ್ತಿರುವ 243 ನ್ಯಾಷನಲ್ ರಸ್ತೆ ಕಾಮಗಾರಿಯ ತ್ಯಾಜ್ಯವನ್ನು ತುಂಬಿ ಕಾಲುವೆ ಮುಚ್ಚಿದ್ದರು. ಇದರಿಂದ ತಿಮ್ಲಾಪುರ ಕೆರೆ ತುಂಬಿದ್ದಾಗ ಹುಳಿಯರು ಕೆರೆಗೆ ನೀರು ಹರಿಸಲು ಅಸಾಧ್ಯ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿತ್ತು. ಈ ಬಗ್ಗೆ ಕಾಲುವೆಯ ಅಗತ್ಯತೆ ಮತ್ತು ಆಗಿರುವ ತೊಂದರೆಯ ಬಗ್ಗೆ ನಮ್ಮ ಪತ್ರಿಕೆ ಮೊದಲು ವಿಸ್ತೃತ ವರದಿ ಪ್ರಕಟಿಸಲಾಗಿತ್ತು.
ಇದರಿಂದ ಎಚ್ಚೆತ್ತ ಗುತ್ತಿಗೆದಾರರು ಕಾಲುವೆಗೆ ತುಂಬಿದ್ದ ತ್ಯಾಜ್ಯವನ್ನು ತೆರವುಗೊಳಿಸಿದರು. ಅಲ್ಲದೆ ರಸ್ತೆ ಕಾಮಗಾರಿ ಮುಗಿದ ನಂತರ ಸೇತುವೆ ಕಾಮಗಾರಿ ಮಾಡಬೇಕಿದ್ದು ಈ ಕಾಮಗಾರಿ ನಡೆಯುವ ವೇಳೆ ವಾಹನ ಸವಾರರ ಸುಗಮ ಸಂಚಾರ ಕ್ಕೆ ತೊಂದರೆಯಾಗಬಾರದೆಂದು ಕಾಲುವೆಗೆ ಮಣ್ಣು ಹಾಕಿದ್ದು ಬಿಟ್ಟರೆ ಕಾಲವೆ ಮುಚ್ಚುವ ದುರುದ್ದೇಶ ನಮ್ಮದಲ್ಲ ಎಂದು ಸ್ಪಷ್ಟನೆ ನೀಡಿದರು.