ಪ್ರಜಾಪ್ರಗತಿ ವರದಿಯಿಂದ ಎಚ್ಚೆತ್ತ ಅಧಿಕಾರಿಗಳಿಂದ ಚರಂಡಿ ಸಮಸ್ಯೆಗೆ ಪರಿಹಾರ

ತುಮಕೂರು

       ನಗರದ 35ನೇ ವಾರ್ಡ್‍ನ ಸಿದ್ದರಾಮೇಶ್ವರ ಬಡಾವಣೆ ಹಾಗೂ ಮಂಜುನಾಥ್‍ನಗರ, ಮಹಾಲಕ್ಷ್ಮಿ ನಗರ ಸೇರಿದಂತೆ ಸುತ್ತಮುತ್ತಲಿನಲ್ಲಿ ಚರಂಡಿ ಸಮಸ್ಯೆ ಯಥೇಚ್ಛವಾಗಿತ್ತು.

     ಈ ಬಗ್ಗೆ ಮೇ.5ರಂದು ಸಮಸ್ಯೆಗಳ ಕೂಪ : ಇದು ಸ್ಮಾರ್ಟ್ ಸಿಟಿಗೆ ಕಳಂಕ ಎಂಬ ತಲೆಬರಹದಡಿ ವಿಸ್ತೃತ ವರದಿ ಪ್ರಕಟ ಮಾಡಲಾಗಿತ್ತು. ಈ ವರದಿಗೆ ಎಚ್ಚೆತ್ತ ಅಧಿಕಾರಿ ವರ್ಗ ಸ್ಥಳಕ್ಕೆ ಭೇಟಿ ಸಮಸ್ಯೆ ಪರಿಹರಿಸಿದೆ. ಕಳೆದ ವಾರದಲ್ಲಿ ಸುರಿದ ಮಳೆಗೆ ಚರಂಡಿಗಳು ತುಂಬಿ ರಸ್ತೆಗಳ ಮೇಲೆ ಚರಂಡಿ ನೀರು ಹರಿದಿತ್ತು.

       ಅಲ್ಲದೆ ಇಲ್ಲಿ ಅವೈಜ್ಞಾನಿಕವಾಗಿ ನಿರ್ಮಾಣ ಮಾಡಲಾದ ಚರಂಡಿಯಿಂದ ನೀರು ಸರಾಗವಾಗಿ ಹರಿಯದೆ, ನಿಂತಲ್ಲೇ ನಿಂತು ದುರ್ವಾಸನೆ ಬೀರುವುದರ ಜೊತೆಗೆ ಸೊಳ್ಳೆಗಳ ಆವಾಸ ಸ್ಥಾನವಾಗಿ ಮಾರ್ಪಾಟಾಗಿತ್ತು. ಅಲ್ಲದೆ ಇರುವ ಒಂದು ರಾಜಕಾಲುವೆಯನ್ನು ಮುಚ್ಚಲಾಗಿದ್ದು, ನೀರು ಹರಿಯುತ್ತಿರಲಿಲ್ಲ. ಈ ಬಗ್ಗೆ ಹಲವು ಬಾರಿ ಮಹಾನಗರ ಪಾಲಿಕೆಗೆ ಹಾಗೂ ಜನಪ್ರತಿನಿಧಿಗಳಿಗೆ ಮಾಹಿತಿ ನೀಡಿ, ಮನವಿ ಮಾಡಿದ್ದರೂ ಯಾವುದೇ ಕ್ರಮ ಜರುಗಿಸಿರಲಿಲ್ಲ.ಈ ಬಗ್ಗೆ ಪ್ರಜಾಪ್ರಗತಿಗೆ ಬಂದ ಮಾಹಿತಿ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಯನ್ನು ಅರಿತು ಅದರ ಬಗ್ಗೆ ವಿಸ್ತøತವಾಗಿ ವರದಿಯನ್ನು ಮಾಡಿದ್ದೆವು.

       ವರದಿಯನ್ನು ಗಮನಿಸಿದ ಮಹಾನಗರ ಪಾಲಿಕೆ ಅಧಿಕಾರಿಗಳು ಹಾಗೂ ಎಂಜಿನಿಯರ್ ವರ್ಗ, ಆರೋಗ್ಯ ಪರಿವೀಕ್ಷಕರು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಯನ್ನು ಪರಿಹರಿಸಿದ್ದಾರೆ. ಇದು ಪ್ರಜಾಪ್ರಗತಿ ವರದಿಯ ಫಲಶೃತಿಯಾಗಿದೆ. ಕಳೆದ ಒಂದು ವಾರದ ಹಿಂದೆ ಎಲ್ಲೆಂದರಲ್ಲಿ ಕಸದ ರಾಶಿಗಳು ರಾರಾಜಿಸುತ್ತಿದ್ದವು. ರಸ್ತೆ ಮೇಲೆ ಒಳಚರಂಡಿ ನೀರು ಹರಿಯುತ್ತಾ ಜನರು ತೀವ್ರ ಸಮಸ್ಯೆಗಳಿಗೆ ಒಳಗಾಗಿದ್ದರು. ವರದಿಯ ನಂತರ ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿವರ್ಗ ಸುಮಾರು 12 ಗಂಟೆಗಳ ಕಾಲ ಸ್ಥಳದಲ್ಲಿ ನಿಂತು ಸ್ವಚ್ಚಗೊಳಿಸಿದ್ದು ಸ್ಥಳೀಯರು ನಿಟ್ಟುಸಿರು ಬಿಟ್ಟಂತಾಗಿದೆ.


       ಕಳೆದ ಒಂದು ವಾರದ ಹಿಂದೆ ಈ ಸ್ಥಳದಲ್ಲಿ ರಾಶಿ ರಾಶಿ ಕಸ ರಾರಾಜಿಸುತ್ತಿತ್ತು, ಚರಂಡಿ ನೀರು ರಸ್ತೆ ಮೇಲೆ ಹರಿಯುತ್ತಾ ಸ್ಥಳೀಯರು ನರಕಯಾತನೆ ಅನುಭವಿಸುತ್ತಿದ್ದರು. ಈ ಬಗ್ಗೆ ಪ್ರಜಾಪ್ರಗತಿಗೆ ಮಾಹಿತಿ ನೀಡಿದ ತಕ್ಷಣ ಅವರು ಸ್ಥಳಕ್ಕೆ ಭೇಟಿ ನೀಡಿ ವರದಿಯನ್ನು ಮಾಡಿ, ಈ ಬಗ್ಗೆ ಆಯುಕ್ತರ ಗಮನಕ್ಕೆ ತಂದಿದ್ದರು. ಇದರಿಂದ ಎಚ್ಚೆತ್ತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸ್ವಚ್ಛಗೊಳಿಸಿದ್ದಾರೆ. ಈಗ ಇಲ್ಲಿನ ಜನರು ಸಮಸ್ಯೆಯಿಂದ ನಿರಾಳವಾಗಿ ಜೀವನ ಮಾಡುವಂತಾಗಿದೆ. ಇದಕ್ಕೆ ಪ್ರಜಾಪ್ರಗತಿ ಪತ್ರಿಕೆಗೆ ಎಷ್ಟೇ ಧನ್ಯವಾದಗಳನ್ನು ಹೇಳಿದರೂ ಸಾಲದು. ಕಳೆದ 10 ವರ್ಷಗಳಿಂದ ಇದ್ದಂತಹ ಸಮಸ್ಯೆ ಇಂದು ಪರಿಹಾರವಾಗಿದೆ.

ಜಯಪ್ರಕಾಶ್, ಸ್ಥಳೀಯ ನಿವಾಸಿ


   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap