ಬೆಂಗಳೂರು
ಕೇಂದ್ರ ಲೋಕಸಭಾ ಪಕ್ಷೇತರ ಅಭ್ಯರ್ಥಿ ಚಿತ್ರನಟ ಪ್ರಕಾಶ್ ರೈ ಬಿಬಿಎಂಪಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿ ಹೊರಡುವ ವೇಳೆ ಬಿಜೆಪಿ ಮುಖಂಡ ಪದ್ಮನಾಭ ರೆಡ್ಡಿ ಸೇರಿ ವಿವಿದ ಮುಖಂಡರಿಂದ ಮೋದಿ ಮೋದಿ ಎಂದು ಕೂಗಿ ಜೈಕಾರ, ಕಾರು ಹತ್ತಬೇಕಿದ್ದ ಪ್ರಕಾಶ್ ರೈ ಕಾರಿನಿಂದ ಮೇಲೆರಿ ಬೇದಿ, ಬೇದಿ ಎಂದು ಕೂಗಿ ಎಲ್ಲಿ 15ಲಕ್ಷ ತಿರುಗೇಟು ನೀಡಿದರು.
ಇದಕ್ಕೂ ಮುನ್ನ ಸುದಿಗಾರರೊಂದಿಗೆ ಮಾತನಾಡಿದ ರೈ, ನನ್ನಗೆ ಸಿನಿಮಾ ಚಿತ್ರರಂಗದವರು ಪ್ರಚಾರಕ್ಕೆ ಬರುವ ಅಗತ್ಯವಿಲ್ಲ, ಇದು ನನ್ನ ಮತ್ತು ಮತದಾರನ ನಡುವೆ ನಡೆಯುವ ಸಂವಾದವಾಗಿದೆ.ನಾನೂ ಯಾರ ಪ್ರತಿಸ್ಪರ್ದಿಯೂ ಅಲ್ಲ, ಕಾಂಗ್ರೆಸ್ ಕೂಡ ಜಾತಿವಾದಿ ಪಕ್ಷವಾಗಿದೆ ಕೇವಲ ಮುಸ್ಲಿಂ, ದಲಿತರ ಪರ ಎಂದು ಹೇಳುತ್ತಾರೆ. ಬಿಜೆಪಿಯವರೂ ಸಾವಿನ ಮನೆಯಲ್ಲೂ ಮೋದಿ ಮೋದಿ ಎಂದು ಕೂಗುತ್ತಾರೆ ಅದಕ್ಕೆ ಅರ್ಥವಿಲ್ಲ , ಒಂದು ಪಕ್ಷ ನಾನು ಗೆದ್ದು ಬಂದರೆ ಬಿಜೆಪಿಗೆ ಬೆಂಬಲ ನೀಡಲ್ಲ ಎಂದು ಪ್ರಕಾಶ್ ಹೇಳಿಕೆ