ದಾವಣಗೆರೆ:
ರಸ್ತೆ ಅಪಘಾತವಾದಂತಹ ಸಂದರ್ಭದಲ್ಲಿ ಪ್ರಥಮ ಚಿಕಿತ್ಸೆ ನೀಡಿದರೆ ಒಬ್ಬ ವ್ಯಕ್ತಿಯ ಜೀವ ಉಳಿಸಲು ಸಾಧ್ಯವಾಗಲಿದೆ ಎಂದು ಡಿವೈಎಸ್‍ಪಿ ದೇವರಾಜ್ ತಿಳಿಸಿದರು.ನಗರದ ಯುಬಿಡಿಟಿ ಕಾಲೇಜಿನಲ್ಲಿ ಶುಕ್ರವಾರ ಉತ್ತಮ ನಾಗರೀಕ ಕಾನೂನು ಹಾಗೂ ಕೆಲಸದ ಸ್ಥಳದಲ್ಲಿ ಲೈಂಗಿಕ ದೌರ್ಜನ್ಯ ತಡೆ ಕುರಿತು ಏರ್ಪಡಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಅಪಘಾತವಾದಂತ ಸಂದರ್ಭದಲ್ಲಿ ಪ್ರತಿಯೊಬ್ಬರು ಪ್ರಥಮ ಚಿಕಿತ್ಸೆ ನೀಡುವುದಕ್ಕೆ ಮುಂದಾಗಬೇಕು. ಹರೀಶ್ ಎಂಬ ಯುವಕ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ವೇಳೆ ಯಾರು ಸಹಾಯ ಮಾಡದೆ ಮೊಬೈಲ್ ನಲ್ಲಿ ವಿಡಿಯೋ ತೆಗೆಯುವುದನ್ನು ಬಿಟ್ಟು ಅಪಾಯದಲ್ಲಿರುವವರ ಜೀವ ರಕ್ಷಣೆಗೆ ಮುಂದಾಗಿಬೇಕೆಂದು ಕಿವಿಮಾತು ಹೇಳಿದರು.
ನಮ್ಮ ದೇಶದಲ್ಲಿ 4 ನಿಮಿಷಕ್ಕೊಬ್ಬರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪುತ್ತಿದ್ದು, 360 ಜನ ಒಂದು ದಿನಕ್ಕೆ ರಸ್ತೆ ಅಪಘಾತದಲ್ಲಿ ಸಾವನ್ನಪ್ಪುತ್ತಿದ್ದಾರೆ. ಗಂಟೆಗೆ 17 ಜನ ಸಾವನ್ನಪ್ಪುತ್ತಿದ್ದಾರೆ. ರಸ್ತೆ ಅಪಘಾತದಲ್ಲಿ 50 ಲಕ್ಷ ಜನರು ಶಾಶ್ವತ ಗಾಯಾಳು ಗಳಾಗುತ್ತಿದ್ದಾರೆಂದು ಮಾಹಿತಿ ನೀಡಿದರು.
ಕಾನೂನುಗಳು ಹೇಳುವುದನ್ನು ಪಾಲನೆ ಮಾಡದೆ ಇದ್ದಾಗ ಅದು ಅಪರಾಧವಾಗುತ್ತದೆ. ರಸ್ತೆ ನಿಯಮ ಪಾಲನೆ, ನಿರ್ಲಕ್ಷಿತ ಚಾಲನೆ, ಹೆಲ್ಮೇಟ್ ಧರಿಸದಿರುವುದು, ಮದ್ಯಪಾನ ಮಾಡಿ ಚಾಲನೆ ಮಾಡುವುದು. ಸೀಟ್ ಬೆಲ್ಟ್ ಹಾಕದೆ ಚಾಲನೆ ಮಾಡುವುದು ಇದರಿಂದ ಹೆಚ್ಚು ಅಪಘಾತಗಳು ಸಂಭವಿಸುತ್ತವೆ ಎಂದರು.
ನಿಯಮದ ಪ್ರಕಾರ ಪ್ರತಿ 30 ಕಿಲೋಮೀಟರ್‍ಗೆ ಆಸ್ಪತ್ರೆ ಇರಬೇಕು ಎಂದರು. ಮಹಿಳೆಯರಿಗೆ ಕೆಲಸದ ಸ್ಥಳಗಳಿಗೆ ಲೈಂಗಿಕ ದೌರ್ಜನ್ಯ ನೀಡುವುದರ ಬಗ್ಗೆ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಬೇಕು. ಯಾವುದೇ ರೀತಿ ಅಸಹಾಯಕ ನಡುವಳಿಕೆ ಕಂಡುಬಂದಲ್ಲಿ ಅದರ ವಿರುದ್ದ ಧ್ವನಿ ಎತ್ತುವ ಕೆಲಸ ಮಾಡಬೇಕು. ಉತ್ತಮ ನಾಗರೀಕರಾಗಿ ಕರ್ತವ್ಯವನ್ನು ನಿಭಾಯಿಸಬೇಕೆಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಡಾ.ಶಿವಪ್ರಸಾದ್, ಮಂಜುನಾಥ್ ಮತ್ತಿತರರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








