ಚಿತ್ರದುರ್ಗ:
ಉತ್ತಮ ಅಂಕಗಳಿಸಿದವರನ್ನು ಗುರುತಿಸಿ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸುವುದು ಯುವ ಸಮೂಹದ ಕರ್ತವ್ಯವಾಗಬೇಕು ಎಂದು ಶಾಸಕರಾದ ಜಿ.ಹೆಚ್. ತಿಪ್ಪಾರೆಡ್ಡಿ ಹೇಳಿದರು.ನಗರದ ಜೋಗಿಮಟ್ಟಿ ಗೆಳೆಯರ ಬಳಗ ಹಾಗೂ ಪ್ರಜ್ವಲ್ ದೇವರಾಜ್ ಅಭಿಮಾನಿಗಳ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿಧ್ಯಾರ್ಥಿಗಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಗುರುತಿಸುವುದು ಎಷ್ಟು ಮುಖ್ಯವೋ ಅವರು ಅಧ್ಯಯನದಲ್ಲಿ ಓದುವಲ್ಲಿ ಪೋಷಕರ ಪಾತ್ರವೂ ಅತೀ ಮುಖ್ಯವಾಗಿದೆ. ವಿದ್ಯಾರ್ಥಿಗಳು ಸರಕಾರದಿಂದ ಸಿಗುವ ಪ್ರೋತ್ಸಾಹ ಧನದ ಸ್ಕಾಲರ್ ಶಿಫ್ ಪಡೆದು ಪೋಷಕರಿಗೆ ಹೊರೆಯಾಗದಂತೆ ಮಾಡಬೇಕು ಎಂದರು.
ನಟ ಪ್ರಜ್ವಲ್ ದೇವರಾಜ್ ಮಾತನಾಡಿ, ಚಿತ್ರದುರ್ಗದ ಚರಿತ್ರೆಯಲ್ಲಿ ತನ್ನದೇ ಆದ ಇತಿಹಾಸ ಹೊಂದಿದೆ. ಇಲ್ಲಿನ ಶಕ್ತಿ ನೋಡಿ ನನಗೆ ಖುಷಿಯಾಗುತ್ತದೆ. ಸ್ನೇಹಿತರ ಬಳಗವು ಪ್ರತಿಭಾ ಪುರಸ್ಕಾರದಂತ ಉತ್ತಮ ಕಾರ್ಯಮಾಡುತ್ತಿದೆ. ಅಭಿಮಾನಿಗಳೂ ಏನೇನೋ ಮಾಡುತ್ತಾರೆ ಆದರೆ ಮಕ್ಕಳನ್ನು ಗುರುತಿಸು ಗೌರವಿಸಿ ಅವರಿಗೆ ಪ್ರೋತ್ಸಾಹ ನೀಡುವ ಕಾರ್ಯಕ್ಕೆ ನನ್ನ ಬೆಂಬಲ ಸದಾ ಇರುತ್ತದೆ ಎಂದರು
ಬಿಜೆಪಿ ವಿಭಾಗೀಯ ಸಹ ಪ್ರಭಾರಿ ಜಿ.ಎಂ ಸುರೇಶ್, ನಗರಸಭೆ ಸದಸ್ಯರಾದ ನಾಗಮ್ಮ, ಮಾಜಿ ಸದಸ್ಯ ಮಹೇಶ್, ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸಂತೋಷ್, ರಾಷ್ಟ್ರೀಯ ವಿದ್ಯಾರ್ಥಿ ಕಾಂಗ್ರೇಸ್ ಜಿಲ್ಲಾಧ್ಯಕ್ಷ ಡಾ. ರಾಜೇಂದ್ರ ಪ್ರಸಾದ್, ಜೆಡಿಎಸ್ ಸೇವಾದಳದ ಜಿಲ್ಲಾಧ್ಯಕ್ಷ ಶ್ರೀನಿವಾಸ್, ಹರೀಶ್, ರಘು ರವಿಕುಮಾರ್,. ರಾಜೇಶ್ ಮದರಿ, ಉಲ್ಲಾಸ್ ಇತರರು ಇದ್ದರು.