ಹರಿಹರ:
ಭೂಮಿಯನ್ನು ನಾವು ಕಾಪಾಡಿದರೆ ಭೂಮಿ ನಮ್ಮ ಕುಟುಂಬವನ್ನು ಜೀವಿತಾವದಿಯ ವರೆಗೆ ಕಾಪುಡುತ್ತದೆ ಎಂದು ಬೆಳ್ಳೂಡಿಯ ಕಾರ್ಗಿಲ್ ಕಂಪನಿ ಆಡಳಿತ ಮುಖ್ಯಸ್ಥರಾದ ಪ್ರವೀಣ ಹೇಳಿದರು.
ತಾಲೂಕಿನ ಬೆಳ್ಳೂಡಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಕಾರ್ಗಿಲ್ ಕಂಪನಿ ಹಮ್ಮಿಕೊಂಡಿದ್ದ ಪ್ರತಿದಿನವೂ ಭೂಮಿ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ದಿನಮಾನದಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ಭೂಮಿ ನಾಶವಾಗುತ್ತಿದೆ. ನಾವು ಈ ಭೂಮಿಯನ್ನು ಕಾಪಾಡಿದರೆ, ಭೂಮಿ ನಮ್ಮನ್ನು ಕಾಪಾಡುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಭೂಮಿಯನ್ನು ಎಲ್ಲಾ ರೀತಿಯಿಂದ ಕಾಪಾಡಬೇಕು ಎಂದು ಸಾರ್ವಜನಿಕರಿಗೆ ಕರೆ ನೀಡಿದರು.
ಭೂಮಿಯಲ್ಲಿ ಒಂದು ಬೆಳೆಯನ್ನು ಬೆಳೆಯಬೇಕಾದರೆ ರೈತ ತನ್ನ ಬೆವರು ಸುರಿಸಿ, ಸತತ ಪರಿಶ್ರಮವನ್ನು ಪಡುತ್ತಾನೆ. ಅವನು ಬೆಳೆದ ದಾನ್ಯಗಳಿಂದ ತಯಾರಿಸಿದ ಆಹಾರವನ್ನು ನಾವುಗಳು ವ್ಯಯ ಮಾಡುತ್ತಿದ್ದೇವೆ. ಯಾವುದೇ ಆಹಾರವನ್ನಾಗಲಿ ನಮಗೆ ಬೇಕಾದಷ್ಟು ನೀಡಿಕೊಳ್ಳಬೇಕು ಅಧಿಕ ಆಸೆಯಿಂದ ಆಹಾರವನ್ನು ದುರಪಯೋಗ ಮಾಡಬಾರದು. ಆಹಾರವನ್ನು ಉತ್ಪಾದಿಸು ಈ ಭೂಮಿಗೆ ನಾವು ಬೆಲೆ ಕೊಡಬೇಕು ಎಂದು ಹೇಳಿದರು.
ಕಾಂಪನಿಯ ಸಿಬ್ಬಂದಿ ಪ್ರದೀಪ್ ಮಾತನಾಡಿ, ನಿಮ್ಮ ಊರಿನಲ್ಲಿ ಸ್ಥಪಿತವಾಗಿರುವ ಕಾರ್ಗಿಲ್ ಕಂಪನಿ ಎಲ್ಲಾ ರೀತಿಯಿಂದಲೂ ಮಾನ್ಯತೆ ಪಡೆದಿದ್ದು, ಕಾಂಪನಿಯಿಂದ ಪರಿಸರ, ಭೂಮಿ ಹಾಗೂ ಗಾಳಿಗೆ ಯಾವುದೆ ಅನಾನುಕೂಲಗಳು ಉಂಟಾಗದಂತೆ ಕಂಪನಿ ತನ್ನ ಕಾರ್ಯವನ್ನು ನೆಡೆಸುತ್ತಿದೆ. ನಾವುಗಳು ಭೂಮಿಯನ್ನು ಎಷ್ಟು ಚನ್ನಾಗಿ ನೋಡಿಕೊಳ್ಳುತ್ತೀವೂ ಭೂಮಿ ಉತ್ತಮ ಬೆಳೆಯನ್ನು ಕೊಡುತ್ತದೆ. ನಾವು ನೈಸರ್ಗಿಕ ಸಂಪನ್ಮೂಲಗಳನ್ನು ಕಾಪಾಡುವಂತವರಾಗಬೇಕು ಎಂದು ತಿಳಿಸಿದರು.
ಗ್ರಾ.ಪಂ ಅಧ್ಯಕ್ಷ ಮರುಳುಸಿದ್ದೇಶ್ ಮಾತನಾಡಿ, ನಮ್ಮ ಗ್ರಾಮದಲ್ಲಿ ಕಾರ್ಗಿಲ್ ಕಂಪನಿ ಸ್ಥಾಪನೆಯಾದ ನಂತರ ನಮ್ಮ ಗ್ರಾಮಕ್ಕೆ ಉತ್ತಮ ಹೆಸರು ಲಬಿಸಿದೆ. ಕಂಪನಿಯ ವತಿಯಿಂದ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಶೌಚಾಲಯಗಳ ಮತ್ತು ಶುದ್ಧನೀರಿನ ಘಟಕಗಳು ಹಾಗೂ ಇನ್ನೂ ಅನೇಕ ಸಾಮಾಜಿಕ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಾ ಬಂದಿದೆ. ಕಂಪನಿಯಲ್ಲಿ ನೂರಾರು ಜನ ಸ್ಥಳಿಯರನ್ನು ಕೆಲಸಕ್ಕೆ ತೆಗೆದುಕೊಂಡು, ಅವರ ಜೀವನಕ್ಕೆ ಆಸರೆಯಾಗಿದ್ದಾರೆ. ಕಂಪನಿಯಿಂದ ಈ ರೀತಿಯ ಜನಪರ ಕಾರ್ಯಗಳು ಮುಂದೆಯೂ ನಡೆಯುತ್ತಿರಲಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಂಪನಿಯ ಘಟಕಗಳ ಮುಖ್ಯಸ್ಥ ಉದೇಶ್ ವಿಜ್, ಸಿಬ್ಬಂದಿಗಳಾದ ಗೊಕುಲ್, ಕವನ್ ಕಾವೇರಪ್ಪ, ಬಸವರಾಜ್, ಮಂಜುನಾಥ್, ಗ್ರಾ.ಪಂ ಉಪಾಧ್ಯಕ್ಷೆ ಗೀತಮ್ಮ, ಪಿಡಿಓ ಬಿರದರ್, ಎಪಿಎಂಸಿ ಅಧ್ಯಕ್ಷ ನರೇಂದ್ರ, ಹಾಗೂ ಇತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
