ಪ್ರತಿಯೊಬ್ಬರು ಸ್ವಚ್ಚತೆಗೆ ಆದ್ಯತೆ ನೀಡಬೇಕು ಮಂಜುಳಾ ಶಿವಾನಂದಪ್ಪ

ಜಗಳೂರು :

    ಪ್ರತಿಯೊಬ್ಬರು ಸ್ವಚ್ಚತೆಗೆ ಆದ್ಯತೆ ನೀಡಬೇಕು ಎಂದು ತಾಲೂಕು ಪಂಚಾಯಿತಿ ಅಧ್ಯಕ್ಷೆ ಮಂಜುಳಾ ಶಿವಾನಂದಪ್ಪ ಹೇಳಿದರು.
ಸ್ವಚ್ಚಮೇಮೆವ ಜಯತೆ ಆಂದೋಲನದ ಅಂಗವಾಗಿ ಮಂಗಳವಾರ ಪಟ್ಟಣದ ತಾಲೂಕು ಪಂಚಾಯಿತಿ ಆವರಣದಲ್ಲಿ ಸಸಿ ನೆಡುವುದರ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

    ಸ್ವಚ್ಚತೆಯ ಬಗ್ಗೆ ಸರಕಾರ ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದ್ದರು ಸಹ ಇನ್ನು ಇದರ ಮಹತ್ವ ತಿಳಿದಿಲ್ಲ. ನಾವು ನಮ್ಮ ಮನೆ ಗ್ರಾಮ ಪಟ್ಟಣದಲ್ಲಿ ಸ್ವಚ್ಚತೆಯ ಬಗ್ಗೆ ಆದ್ಯತೆ ನೀಡಬೇಕು ಎಂದು ಹೇಳಿದರು.

    ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಕಾಧಿಕಾರಿ ಜಾನಕೀರಾಮ್ ಮಾತನಾಡಿ ಗ್ರಾಮಿಣ ಪ್ರದೇಶದಲ್ಲಿ ಗ್ರಾಮಸ್ಥರು ಮೊದಲು ಜಾಗೃತಿಯಾಗಬೇಕು. ಗ್ರಾಮವನ್ನು ಸ್ವಚ್ಚವಾಗಿಟ್ಟುಕೊಂಡರೆ ರೋಗಗಳು ನಮ್ಮ ಹತ್ತಿರ ಸುಳಿಯೋದಿಲ್ಲ. ಎಲ್ಲಿಯವರೆಗೆ ಇದರ ಬಗ್ಗೆ ಗ್ರಾಮಸ್ಥರಲ್ಲಿ ಅರಿವು ಮೂಡುವುದಿಲ್ಲವೂ ಅಲ್ಲಿಯವರೆಗೆ ಸ್ವಚ್ಚತೆಯ ಮಹತ್ವವನ್ನು ಅರಿಯಲು ಸಾದ್ಯವಿಲ್ಲ ಎಂದರು.

     ಈ ಸಂಧರ್ಭದಲ್ಲಿ ಉಪಾಧ್ಯಕ್ಷ ಮುದೆಗೌಡ್ರು ಬಸವರಾಜ್, ಸದಸ್ಯರಾದ ತಿಮ್ಮೇಶ್, ಬಸವರಾಜ್, ಶಿಲ್ಪ, ಮುಖಂಡರಾದ ಸುರೇಶ್ ನಾಯ್ಕ, ಚಂದ್ರಶೇಖರ್ , ಬಿಇಓ , ಸಮಾಜ ಕಲ್ಯಾಣ ಇಲಾಖೆಯ ಆಶೋಕ್ ಯುವರಾಜ್ ನಾಯ್ಕ, ಕೃಷಿ ಇಲಾಖೆಯ ಬಸಣ್ಣ, ಅರಣ್ಯ ಇಲಾಖೆಯ ರಶ್ಮಿ, ತಾಲೂಕು ಪಂಚಾಯಿತಿ ಸಿಬ್ಬಂದಿಗಳಾದ ಸಿದ್ದಿಕ್ , ಅಜ್ಜಪ್ಪ, ವಿನಯ್, ತಿಮ್ಮೇಶ್, ರೇವಣ್ಣ ನಾಯ್ಕ್, ಬಾಷಾ, ತಿಪ್ಪೇಶ್, ಸುನಿಲ್ ಕುಮಾರ್ ಸೇರಿದಂತೆ ಮತ್ತಿತರರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap