ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆ

ಹೊಳಲ್ಕೆರೆ :

        ತಾಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ವಿಗೆ ಪಕ್ಷ ಬೇದ ಮರೆತು ಕೆಲಸ ಮಾಡಬೇಕು ಎಂದು ಮಾಜಿ ಶಾಸಕ ಪಿ.ರಮೇಶ್ ತಿಳಿಸಿದರು.

       ತಾಲೂಕಿನ ಶಿವಪುರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಜ.30 ರಂದು ನಡೆಯಲಿರುವ 6ನೇ ತಾಲೂಕು ಮಟ್ಟದಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

         ಐತಿಹಾಸಿಕ ಹಾಗೂ ಶರಣ ಸಂಸ್ಸøತಿಯ ನೆಲೆಬೀಡು ಎನಿಸಿರುವ ಶಿವಪುರ ಗ್ರಾಮದಲ್ಲಿ ತಾಲೂಕು ಮಟ್ಟದ ಸಾಹಿತ್ಯ ಸಮ್ಮೇಳನಹಮ್ಮಿಕೊಂಡಿರುವುದು ನಮ್ಮೆಲ್ಲರ ಸೌಭಾಗ್ಯ. ಸಾಹಿತ್ಯವು ಗ್ರಾಮೀಣ ಪ್ರದೇಶದ ಮೆರುಗನ್ನು ಹೆಚ್ಚಿಸುವಂತಹದ್ದಾಗಿದ್ದು, ಕಾರ್ಯಕ್ರಮದ ಯಶಸ್ವಿಗೆ ಪ್ರತಿಯೊಬ್ಬರೂ ಕೈ ಜೋಡಿಸಬೇಕು.

        ಸಮ್ಮೇಳನದ ಯಶಸ್ವಿಗೆ ಸಮಿತಿಗಳ ಅಗತ್ಯವಿದ್ದು, ಯಾರಿಗೆ ಯಾವ ಜವಾಬ್ದಾರಿ ವಹಿಸುತ್ತೇವೆಯೋ ಅದನ್ನು ಅವರು ಸಮರ್ಥವಾಗಿ ನಿಭಾಯಿಸಬೇಕು. ಯಾವುದೇ ಗೊಂದಲಗಳು ಸೃಷ್ಠಿಯಾಗದಂತೆ ಆಹ್ವಾನ ಪತ್ರಿಕೆ, ಸಮಿತಿಗಳು, ಜವಾಬ್ದಾರಿಗಳನ್ನು ವಹಿಸಬೇಕು. ಆ ನಿಟ್ಟಿನಲ್ಲಿ ಗ್ರಾಮದ ಮುಖಂಡರು, ಯುವ ಸಮುದಾಯ ನಿರ್ಣಯಗಳನ್ನು ಕೈಗೊಳ್ಳಬೇಕು ಎಂದರು.

         ಜಿಪಂ ಮಾಜಿ ಸದಸ್ಯ ಕುನುಗಲಿ ಷಣ್ಮುಖಪ್ಪ ಮಾತನಾಡಿ, ಇದು ತಾಲೂಕು ಮಟ್ಟದ ಸಮ್ಮೇಳನವಾಗಿರುವು ಕಾರಣ ಕೇವಲ ಶಿವಪುರಕ್ಕೆ ಸೀಮಿತವಾಗುವುದು ಬೇಡ. ಹಾಗಾಗಿ ಇಲ್ಲಿನ ಸುತ್ತಮುತ್ತಲ ಗ್ರಾಮಸ್ಥರು, ಯುವಕ ಸಂಘಟನೆಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸಾಹಿತ್ಯಾಭಿಮಾನಿಗಳು ಒಗ್ಗಟ್ಟಾಗಿ ಕೆಲಸ ಮಾಡೋಣ. ಆ ನಿಟ್ಟಿನಲ್ಲಿ ತನು, ಮನ, ಧನಗಳ ಸಹಕಾರವನ್ನು ನೀಡಲು ಎಲ್ಲರೂ ಸಿದ್ದರಾಗೋಣ ಎಂದರು.

        ಕಸಾಪ ತಾಲೂಕು ಘಟಕದ ಅಧ್ಯಕ್ಷ ಲೋಕೇಶ್ ಮಾತನಾಡಿ, ಕನ್ನಡ ನಾಡು ನುಡಿ ಯ ಮೆರಗನ್ನು ಹೆಚ್ಚಿಸಲು ಗ್ರಾಮೀಣ ಭಾಗಗಳು ಸಹಕಾರಿಯಾಗಲಿವೆ. ಹಾಗಾಗಿ ಶಿವಪುರ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದೆ.

         ತಾಲೂಕು ಸಾಹಿತ್ಯ ಸಮ್ಮೇಳನ ನಡೆಸಲು ಕಸಾಪ 1 ಲಕ್ಷ ರೂ ನೀಡುತ್ತದೆ. ಆದರೆ ಇಲ್ಲಿನ ರೂಪು ರೇಷಗಳ ಪ್ರಕಾರ ಸುಮಾರು 6-8 ಲಕ್ಷ ರೂ ಹಣದ ಅಗತ್ಯವಿದ್ದು, ಸಾಹಿತ್ಯಾಭಿಮಾನಿಗಳು, ದಾನಿಗಳ ಸಹಕಾರ ಕೋರಲಾಗುತ್ತಿದೆ. ಸಮ್ಮೇಳನದಲ್ಲಿ ಕವಿಗೋಷ್ಠಿ, ಕೃಷಿಗೋಷ್ಠಿ ಸೇರಿದಂತೆ 3 ಗೋಷ್ಠಿಗಳನ್ನು ನಡೆಸಲಾಗುವುದು. ಸಮ್ಮೇಳನಕ್ಕೂ ಮುನ್ನ ಇನ್ನು ಮೂರ್ನಾಲ್ಕು ಪೂರ್ವಭಾವಿ ಸಭೆಗಳನ್ನು ನಡೆಸಲಾಗುವುದು, ಆಗ ಇನ್ನಷ್ಟು ವಿಷಯಗಳ ಬಗ್ಗೆ ಚರ್ಚೇ ನಡೆಸಿ, ಎಲ್ಲಾ ಅಭಿಪ್ರಾಯ, ಸಲಹೆ, ಸಹಕಾರಗಳನ್ನು ಸಂಗ್ರಹಿಸಲಾಗುವುದು ಎಂದರು.

          ಗ್ರಾಪಂ ಅಧ್ಯಕ್ಷೆ ಕೆಂಚಮ್ಮ, ಉಪಾಧ್ಯಕ್ಷ ಗುರುಪ್ರಸಾದ್, ಜಿಪಂ ಮಾಜಿ ಅಧ್ಯಕ್ಷ ಆರ್.ಶಿವಕುಮಾರ್, ತಾಪಂ ಮಾಜಿ ಸದಸ್ಯ ಶರತ್‍ಕುಮಾರ್ ಪಾಟೀಲ್, ನಿವೃತ್ತ ನೌಕರರ ಸಂಘದ ಕಾರ್ಯದರ್ಶಿ ವೈ.ಎಸ್.ಜಯದೇವಪ್ಪ, ಪ್ರೌಢಶಾಲಾ ಸಮಿತಿ ಅಧ್ಯಕ್ಷ ಟಿ.ಎಂ.ಪರಮೇಶ್ವರಪ್ಪ, ಎಪಿಎಂಸಿ ಸದಸ್ಯ ಪುಣಜೂರು ಕುಮಾರಪ್ಪ, ಮಾಜಿ ಕಸಾಪ ತಾಲೂಕು ಅಧ್ಯಕ್ಷರಾದ ಕೆ.ಬಿ.ಬಸವರಾಜಯ್ಯ, ಎಂ.ಜಿ.ವೆಂಕಟೇಶ್, ಮುಖಂಡರಾದ ಗುಂಡಿಮಡು ಕುಬೇರಪ್ಪ, ಕಸಾಪ ಪದಾಧಿಕಾರಿಗಳು, ಸ್ತ್ರೀ ಶಕ್ತಿ ಸಂಘದ ಸದಸ್ಯರು, ಶಿವಪುರ ಹಾಗೂ ಸುತ್ತಲಿನ ಗ್ರಾಮಸ್ಥರು ಮತ್ತಿತರರಿದ್ದರು. 

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap