ಎಚ್.ಡಿ.ರೇವಣ್ಣ ನೀಡಿದ ಅನುದಾನಕ್ಕೆ ಶಾಸಕರಿಂದ ಭೂಮಿಪೂಜೆ: ಎಂಟಿಕೆ

ತುರುವೇಕೆರೆ

    ನೆಲ್ಲಿಗೆರೆ – ಶಿರಾ ನಂಜನಗೂಡು ರಾಜ್ಯ ಹೆದ್ದಾರಿಯ ರಸ್ತೆ ಅಭಿವೃದ್ಧಿಗೆ ನಮ್ಮ ಪಕ್ಷ ಸಂಮ್ಮಿಶ್ರ ಸರ್ಕಾರದ ಅಧಿಕಾರದಲ್ಲಿ ದ್ದಾಗಲೇ ಲೋಕೋಪಯೋಗಿ ಸಚಿವರಾಗಿದ್ದ ರೇವಣ್ಣ ಅನುದಾನ ನೀಡಿದ್ದರು. ಈಗ ಶಾಸಕ ಮಸಾಲ ಜಯರಾಮ್ ಭೂಮಿ ಪೂಜೆ ಮಾಡಿದ್ದಾರೆ ಎಂದು ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಆರೋಪಿಸಿದರು.

     ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ಮಸಾಲಜಯರಾಮ್ ಮತ್ತೆ ಭೂಮಿ ಪೂಜೆ ಮಾಡಿ ಹಗ್ಗದ ಪ್ರಚಾರದ ಹಿಂದೆ ಬಿದ್ದಿದ್ದಾರೆ. ಈಗಾಗಲೇ ತಾಳಕೆರೆ, ಬೋಚಿಹಳ್ಳಿ ಕಣಕೂರು ರಸ್ತೆ ಹೀಗೆ ಹಲವಾರು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಕಳೆದ ವಿಧಾನಸಭಾ ಚುನಾವಣಾ ಪೂರ್ವದಲ್ಲೇ ನಾನು ಭೂಮಿ ಪೂಜೆ ನೆರವೇರಿಸಿದ್ದೆ. ಆದರೂ ಮತ್ತೆ ಶಾಸಕರು ಭೂಮಿ ಪೂಜೆ ಮಾಡುತ್ತಿದ್ದಾರೆ.

     ಸೊರವನಹಳ್ಳಿಯಿಂದ ವಡವನಘಟ್ಟದವರೆಗೂ ನಾನು ಶಾಸಕನಾದ ಮೇಲೆ ಅನುದಾನ ತಂದು ರಸ್ತೆ ಅಭಿವೃದ್ಧಿ ಮಾಡುತ್ತಿರುವುದು ಎಂಬ ಹೇಳಿಕೆಗೆ ಶಾಸಕ ಮಸಾಲಜಯರಾಮ್ ಸಂಬಂಧಪಟ್ಟ ಸಚಿವರಿಗೆ ಯಾವುದಾದರು ಒಂದು ಪತ್ರ ಕೊಟ್ಟ ಉದಾಹರಣೆ ಇದೆಯೆ ಮೊದಲು ತೋರಿಸಲಿ ಎಂದು ಸವಾಲು ಹಾಕಿದರು.

     ಎಂ.ಎನ್.ಆರ್.ಇ.ಜಿ ಕಾಮಗಾರಿಗಳು ಪ್ರತಿಯೊಬ್ಬರಿಗೂ ಕೂಲಿ ಕೊಡುವ ಯೋಜನೆಯಾಗಿದೆ. ಆದರೆ ಶಾಸಕರು ತಮ್ಮ ಹಿಂಬಾಲಕರಿಗೆ ಈ ಕಾಮಗಾರಿಗಳನ್ನು ನೀಡಿ ಅಧಿಕಾರ ದುರುಪಯೋಗಪಡಿಸಿಕೊಂಡು ಕಳಪೆ ಕಾಮಗಾರಿ ಮಾಡಿ ನಕಲಿ ಬಿಲ್ ಸೃಷ್ಟಿ ಮಾಡಿ ಹಣ ತೆಗೆದುಕೊಳ್ಳುತ್ತಿದ್ದಾರೆ. ಪಟ್ಟಣದ ಪ್ರವಾಸಿ ಮಂದಿರದ ರಿಪೇರಿಗೆಂದು 1 ಕೋಟಿ 16 ಲಕ್ಷ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿತ್ತು.

     ಆದರೆ ಗುತ್ತಿಗೆದಾರ ರಾಜೇಶ್, ಜೆ.ಇ.ಪ್ರದೀಪ್ ಮತ್ತು ನಿವೃತ್ತ ಎಇಇ ದಯಾನಂದ್ ಸೇರಿಕೊಂಡು ಕೆಲಸ ಮಾಡದೆ ಬಿಲ್ ಡ್ರಾ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಈ ಬಗ್ಗೆ ಲೋಕೋಪಯೋಗಿ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದು ಶಿಸ್ತು ಕ್ರಮಕ್ಕೆ ಒತ್ತಾಯಿಸುವೆ ಎಂದರು.

     ತಾಲ್ಲೂಕಿನ ಬಹುಪಾಲು ಕೆರೆಗಳನ್ನು ತುಂಬಿಸಿದ್ದೇನೆಂಬ ಹೇಳಿಕೆ ಕೊಡುವ ಶಾಸಕರು ಎ.ಹೊಸಹಳ್ಳಿ ಬಳಿಯ ಡಿ.8 ಹೇಮಾವತಿ ನ್ಯಾಲಾ ವ್ಯಾಪ್ತಿಯ ಕುಣಿಕೇನಹಳ್ಳಿ, ಮರಾಠಿಪಾಳ್ಯ, ಗೊಲ್ಲರಹಟ್ಟಿ ಬಳ್ಳೆಕಟ್ಟೆ, ಶ್ರೀರಾಂಪುರ, ಪುರ ಹಾಗೂ ಡಿ.10 ನಾಲಾ ವ್ಯಾಪ್ತಿಯ ಈ ಭಾಗದ ಕೆರೆಗಳಿಗೆ ಹೇಮೆಯ ನೀರು ಹರಿದೇಯಿಲ್ಲ. ಹಾಗೂ ಮಾಯಸಂದ್ರ ಹೋಬಳಿಯ ತರಮನ ಕೋಟೆ, ಸೀಗೆಹಳ್ಳಿ, ಶೆಟ್ಟಿಗೊಂಡನಹಳ್ಳಿ, ತುಯ್ಯಲಹಳ್ಳಿ ಸೇರಿದಂತೆ ಇನ್ನು ಹಲವಾರು ಕಡೆಯ ಕೆರೆಗಳಿಗೆ ನಾಲಾ ನೀರು ಹರಿದಿಲ್ಲ ಇದಕ್ಕೆ ಏನು ಹೇಳುತ್ತಾರೆ. ಈ ಭಾಗಕ್ಕೆ ನಾಲಾ ನೀರು ಹರಿಯಿಸುವಂತೆ ನಾಲಾ ಅಧಿಕಾರಿಗಳನ್ನು ಈ ಮೂಲಕ ಒತ್ತಾಯಿಸುವೆ. ರಾಜ್ಯದಲ್ಲಿ ನಡೆಯುತ್ತಿರುವ ಉಪಚುನಾವಣೆ ಮುಗಿದ ನಂತರ ತಾಲ್ಲೂಕಿನ ಹೇಮಾವತಿ ನಾಲಾ ನೀರು ಮತ್ತು ಇನ್ನಿತರ ಅಕ್ರಮಗಳ ಬಗ್ಗೆ ಹೋರಾಟ ಮಾಡುವುದಾಗಿ ಎಚ್ಚರಿಸಿದರು.ಸುದ್ದಿಗೋಷ್ಠಿಯಲ್ಲಿ ಪ.ಪಂ. ವಿಜಯೇಂದ್ರ, ಮುಖಂಡರುಗಳಾದ, ಜೆಡಿಎಸ್ ಯೂತ್ ತಾಲ್ಲೂಕು ಅಧ್ಯಕ್ಷ ಬಾಣಸಂದ್ರರಮೇಶ್, ಶಿವರಾಮ್, ರಾಘು, ಜಗದೀಶ್, ಯೋಗಾನಂದ್ ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap