ನೃತ್ಯ ಕಲೆಗಳನ್ನು ಉಳಿಸಿ ಬೆಳೆಸಲು ಕರೆ

ಗುಬ್ಬಿ

      ಕಲೆ, ಕ್ರೀಡೆ, ಸಾಹಿತ್ಯ, ನಾಟಕ ಮತ್ತು ಸಂಗೀತ ಕ್ಷೇತ್ರದಲ್ಲಿ ತನ್ನದೆ ಆದ ಮಹತ್ವದ ಹೆಸರುಗಳಿಸಿರುವ ಗುಬ್ಬಿಯಲ್ಲಿ ತರಂಗಿಣಿ ಸ್ಕೂಲ್ ಆಫ್ ಡ್ಯಾನ್ಸ್ ತರಬೇತಿ ಕೇಂದ್ರ ಪ್ರಾರಂಭಿಸುತ್ತಿರುವುದು ವಿದ್ಯಾರ್ಥಿಗಳು ಮತ್ತು ಯುವಕರಿಗೆ ಹೆಚ್ಚು ಸಹಕಾರಿಯಾಗುವುದರ ಜೊತೆಗೆ ಆಧುನಿಕತೆಯಿಂದ ಮರೆಯಾಗುತ್ತಿರುವ ನಮ್ಮ ನೃತ್ಯ ಕಲೆಗಳನ್ನು ಉಳಿಸಿ ಬೆಳೆಸಲು ಸಾಧ್ಯವಾಗುತ್ತದೆ ಎಂದು ಬೆಟ್ಟದಹಳ್ಳಿ ಗವಿಮಠದ ಶ್ರೀಚಂದ್ರಶೇಖರಸ್ವಾಮೀಜಿ ತಿಳಿಸಿದರು.

       ಪಟ್ಟಣದ ಪೊಲೀಸ್ ಠಾಣೆ ಸಮೀಪ ನೂತನ ತರಂಗಿಣಿ ಸ್ಕೂಲ್ ಆಫ್ ಡ್ಯಾನ್ಸ್ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಇಂತಹ ಸಾಂಸ್ಕøತಿಕ ಕಲೆಯನ್ನು ಅಭ್ಯಸಿಸುವ ಮೂಲಕ ಉತ್ತಮ ಕಲೆಯನ್ನು ಬೆಳೆಸಿಕೊಳ್ಳುವಂತೆ ತಿಳಿಸಿದರು.

      ಸಾಂಸ್ಕತಿಕ ಕಲೆಗಳು ಶಿಕ್ಷಣದ ಒಂದು ಭಾಗವಾಗಿದ್ದು ವಿದ್ಯಾರ್ಥಿಗಳು ಬಿಡುವಿನ ಸಮಯದಲ್ಲಿ ಸಂಗೀತ ಮತ್ತು ನೃತ್ಯ ಕಲೆಗಳನ್ನು ಕಲಿಯುವ ಮೂಲಕ ಉತ್ತಮ ನೃತ್ಯಪಟುಗಳಾಗುವಂತೆ ತಿಳಿಸಿದ ಅವರು, ನಮ್ಮ ತಾಲ್ಲೂಕಿನಲ್ಲಿ ಸಾಕಷ್ಟು ಜನರು ನಾಟಕ, ಸಂಗೀತದಲ್ಲಿ ಉತ್ತಮ ಸಾಧನೆ ಮಾಡುತ್ತ ಬಂದಿದ್ದಾರೆ. ಆದರೆ ನೃತ್ಯದಲ್ಲಿ ಯಾರು ಇಲ್ಲ. ಇಂತಹ ನೃತ್ಯ ಶಾಲೆಗಳನ್ನು ತೆರೆದಾಗ ಖಂಡಿತವಾಗಿಯು ಸಾಕಷ್ಟು ಪ್ರತಿಭೆಗಳು ಬೆಳೆಯಲು ಸಾಧ್ಯವಾಗುತ್ತದೆ. ಪೋಷಕರು ಕೇವಲ ಟಿವಿಯಲ್ಲಿ ಬರುವ ಮಕ್ಕಳನ್ನು ನೋಡಿ ಸಂತೋಷಪಡುವುದಕ್ಕಿಂತ ನಿಮ್ಮ ಮಕ್ಕಳೆ ಟಿವಿಯಲ್ಲಿ ಬಂದಾಗ ಇನ್ನೂ ಹೆಚ್ಚಿನ ಸಂತೋಷ ಪಡುತ್ತೀರ. ಹಾಗಾಗಿ ಇಂತಹ ಶಾಲೆಗಳಿಗೆ ನಿಮ್ಮ ಮಕ್ಕಳನ್ನು ಕಳುಹಿಸಿಕೊಡಿ ಎಂದರು.

       ಪ್ರಿಯಾ ಆಂಗ್ಲ ಶಾಲೆಯ ಪ್ರಾಂಶುಪಾಲ ಕೆ.ಪಿ.ಅರುಣ್ ಮಾತನಾಡಿ ಇಂದಿನ ವಿದ್ಯಾರ್ಥಿಗಳಲ್ಲಿ ಸಾಕಷ್ಟು ಪ್ರತಿಭೆ ಇದೆ. ಆದರೆ ಅವರಿಗೆ ಮಾರ್ಗದರ್ಶನದ ಕೊರತೆ ಕಾಡುತ್ತಿದೆ. ಸರಿಯಾದ ಮಾರ್ಗದರ್ಶನ ನೀಡಿದಲ್ಲಿ ನಗರ ಪ್ರದೇಶಗಳ ವಿದ್ಯಾರ್ಥಿಗಳಿಗೂ ನಮ್ಮ ವಿದ್ಯಾರ್ಥಿಗಳು ಕಡಿಮೆಯಿಲ್ಲ. ಹಾಗಾಗಿ ಇಲ್ಲಿಗೆ ಇಂತಹ ಒಂದು ನೃತ್ಯ ಶಾಲೆಯ ಅವಶ್ಯಕತೆ ಇತ್ತು ಎಂದು ತಿಳಿಸಿದರು.

       ನೃತ್ಯಶಾಲೆಯ ವ್ಯವಸ್ಥಾಪಕರಾದ ರೇಖಾನಟರಾಜು ಮಾತನಾಡಿ ನಾವು ಟಿ.ವಿ.ವಾಹಿನಿಯಲ್ಲಿ ಬರುವಂತಹ ಕಾರ್ಯಕ್ರಮಗಳನ್ನು ನೋಡಿದಾಗ ನಮ್ಮ ಭಾಗದ ಯುವಕರು, ವಿದ್ಯಾರ್ಥಿಗಳು ಬರುತ್ತಿಲ್ಲವಲ್ಲ ಎಂಬ ಬೇಸರ ಕಾಡುತ್ತಿತ್ತು. ಹಾಗಾಗಿ ನಾವೇ ಒಂದು ಶಾಲೆಯನ್ನು ಮಾಡಿದರೆ ಹೇಗೆ ಎಂದು ತೀರ್ಮಾನಿಸಿ ನಾಟ್ಯ ಶಾಲೆ ತೆರೆಯಲಾಗಿದೆ. ಎಲ್ಲಾ ತರಹದ ಸಂಗೀತಾ ನಾಟಕ ಹಾಗೂ ನೃತ್ಯ ರೂಪಕಗಳನ್ನು ಇಲ್ಲಿ ಕಲಿಸಲಾಗುತ್ತದೆ ಎಂದು ತಿಳಿಸಿದರು.

        ಕಾರ್ಯಕ್ರಮದಲ್ಲಿ ಪ.ಪಂ.ಸದಸ್ಯ ಶೌಕತ್ ಆಲಿ, ಪೊಲೀಸ್ ಇಲಾಖೆಯ ಆರಾಧ್ಯ, ಬಸವರಾಜು, ಮುಖಂಡರಾದ ಗರುಡಾಚಾರ್, ನಟರಾಜು, ದಿಲೀಪ್, ಅಕ್ಷಯ್, ದಿವ್ಯ ಮುಂತಾದವರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link