ತುರುವೇಕೆರೆ:
ಅಧಿವೇಶನದಲ್ಲಿ ಬಿಜೆಪಿ ಶಾಸಕರ ಹೋರಾಟದ ಪಲವಾಗಿ ಜಿಲ್ಲೆಗೆ ಹೇಮಾವತಿ ನೀರು ಮತ್ತೊಮ್ಮೆ ಹರಿದರು, ನನ್ನ ಕ್ಷೇತ್ರಕ್ಕೆ ಅನ್ಯಾಯವಾಗಿದ್ದು, ಈ ವಾರದೊಳಗೆ ನೀರು ಹರಿಸದಿದ್ದರೆ ಜಿಲ್ಲಾಡಳಿತದ ಹಾಗೂ ಹೇಮಾವತಿ ಅಧಿಕಾರಿಗಳ ವಿರುದ್ದ ಹೋರಾಟ ಮಾಡಲಾಗುವುದು ಎಂದು ಶಾಸಕ ಮಸಾಲಾಜಯರಾಮ್ ಎಚ್ಚರಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ರೈತರೊಂದಿಗೆ ಪತ್ರಿಕಾಗೋಷ್ಠಿಯಲ್ಲಿ ನಡೆಸಿ ಮಾತನಾಡಿದ ಅವರು ಕ್ಷೇತ್ರದ ನೀರಿನ ಸಮಸ್ಯೆ ಬಗ್ಗೆ ಜಲಸಂಪನ್ಮೂಲ ಸಚಿವರಾದ ಡಿ.ಕೆ. ಶಿವಕುಮಾರ್ಗೆ ಹಲವು ಭಾರಿ ಮನವಿ ಮಾಡಲಾಗಿದೆ. ತಾಲೂಕಿನ ಮಾಯಸಂದ್ರ ಹೋಬಳಿಯ ಭೈತರಹೊಸಹಳ್ಳಿ, ರಾಮಸಾಗರ ಸೇರಿದಂತೆ ಎಲ್ಲಾ ಕೆರೆಗಳಿಗೆ ಕಳೆದ 2 ದಿನಗಳಿಂದ ನೀರು ಹರಿಯುತ್ತಿದೆ. ಆದರೆ ಸಿ.ಎಸ್.ಪುರ ಹೋಬಳಿಯಲ್ಲಿ 5 ಪ್ರಮುಖ ಕೆರೆಗಳಾದ ಇಡಗೂರು, ಕಲ್ಲೂರು, ಮಾವಿನಹಳ್ಳಿ, ಚಂಗಾವಿ. ಸಿ.ಎಸ್.ಪುರ ಕೆರೆಗಳಿಗೆ ಸಮರ್ಪಕವಾಗಿ ನೀರು ಹರಿದಿಲ್ಲ.
ಇಡಗೂರು ಕೆರೆಗೆ ಇದ್ದ ಸ್ವಲ್ಪ ನೀರು ಇಂಗಿ ಹೋಗಿದ್ದು ಹೋಬಳಿಯ 5 ಕೆರೆಗಳಿಗೆ ಜಿಲ್ಲಾಡಳಿತದ ಡಿಸೆಂಬರ್ 31 ರೊಳಗೆ ನೀರು ಹರಿಸಬೇಕು ಇಲ್ಲದಿದ್ದರೆ ಸಾವಿರಾರು ರೈತರೊಂದಿಗೆ ಪ್ರತಿಭಟನೆ ಮಾಡಲಾಗುವುದು ಹಾಗು ಮುಂದಾಗಬಹುದಾದ ಅಚಾತುರ್ಯಕ್ಕೆ ಜಿಲ್ಲಾಡಳಿತ ಹಾಗು ಹೇಮಾವತಿ ಅಧಿಕಾರಿಗಳೇ ನೇರ ಹೊಣೆ ಎಂದರು.’
ಪತ್ರಿಕಾಗೋಷ್ಠಿಯಲ್ಲಿ ಮಾದಿಹಳ್ಳಿ ಗ್ರಾಮ ಪಂಚಾಯ್ತಿ ಅದ್ಯಕ್ಷ ಬೊಮ್ಮಲಿಂಗಯ್ಯ, ಟಿ.ಎ.ಪಿ.ಸಿ.ಎಂ.ಎಸ್ ಅಧ್ಯಕ್ಷ ಮೈನ್ಸ್ರಾಜು, ಮುಖಂಡರಾದ ಕೊಂಡಜ್ಜಿವಿಶ್ವನಾಥ್, ನಾಗಲಾಪುರ ಮಂಜು ಹಾಗೂ ಸಿ.ಎಸ್. ಪುರ ಹೋಬಳಿ ರೈತ ಮುಖಂಡರುಗಳು ಸೇರಿದಂತೆ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








