ತಿಪಟೂರು :

ವರ್ಷದಲ್ಲಿ ಬೆಳೆದ ಬೆಳೆಯನ್ನು ಪೂಜಿಸಿ ಮನೆತರುವ ಮತ್ತು ಸೂರ್ಯ ದಕ್ಷೀಣದಿಂದ ಉತ್ತರಕ್ಕೆ ತನ್ನ ಪಥವನ್ನು ಬದಲಿಸುವ ಕಾಲವೇ ಸುಗ್ಗಿಯ ಸಂಕ್ರಾಂತಿ ಈ ಹಬ್ಬವೆಂದರೆ ಹೆಂಗೆಳೆಯರಿಗೆ ಅಚ್ಚುಮೆಚ್ಚು ಆದರೆ ಇಂದು ಮಾರುಕಟ್ಟೆಗೆ ಬಂದ ಹೆಂಗೆಳೆಯರು ವಸ್ತುಗಳ ಬೆಲೆಯನ್ನು ಕೇಳಿ ಹೌಹಾರಿದರು.
ಸಂಕ್ರಾಂತಿ ಎಂದರೆ ಸುಗ್ಗಿಹಬ್ಬ ಎಂದರೆ ಪ್ರಚಲಿತ ಈದಿನಗಳಲ್ಲಿ ರೈತರು ತಾವು ಬೆಳೆದ ಬೆಳೆಯ ಫಸಲನ್ನು ಮನೆತುಂಬಿಸಿ ಕೊಳ್ಳುತ್ತಾರೆ. ಇದಕ್ಕಾಗಿ ಹಲವಾರು ಸಾಮಗ್ರಿಗಳನ್ನು ತರುವುದುಂಟುಅದಕ್ಕಾಗಿ ನಗರಕ್ಕೆ ಬಂದ ಮಹಿಳೆಯರು ಕಬ್ಬು, ನೆಲಗಡಲೆಕಾಯಿ, ಕಡಲೆ ಗಿಡ, ಗೆಣಸು ಅವರೇಕಾಯಿ ಮುಂತಾದವುಗಳನ್ನು ಕೊಳ್ಳಲು ಮುಂದಾಗಿದ್ದರು ಆದರೆ ವ್ಯಾಪಾರಸ್ಥರು ಹೇಲುತ್ತಿದ್ದ ಬೆಳಗಳನ್ನು ಕೇಳಿ ತಮ್ಮ ಹತ್ತಿರುವ ಇರುವಹಣದಲ್ಲಿ ಎಲ್ಲವನ್ನು ಹೊಂದಿಸಿಕೊಳ್ಳುವಸ ಸ್ಥಿತಿ ಮಹಿಳೆಯರದ್ದಾಗಿತ್ತು.
ಹಬ್ಬಕ್ಕೆ ಹಿಗ್ಗಿದ ಅವರೆ :
ಇನ್ನು ಮಾಗಿ ಕಾಲದಲ್ಲಿ ಆರೋಗ್ಯಕ್ಕೆ ಹಿತವನ್ನುಂಟುಮಾಡುವ ಅವರೇಕಾಯಿನ್ನು ಮೊನ್ನತಾನೆ 25ರಿಂದ 30 ಇತ್ತು ಆದರೆ ಸಂಕ್ರಾಂತಿಗೆ ಹೇಗೂ ತೆಗೆದುಕೊಳ್ಳುತ್ತಾರೆಂದು ತಿಳಿದ ವರ್ತಕರು ಇಂದು ಕೆ.ಜಿಗೆ ಸುಮಾರು 45 ರಿಂದ 60ರವರೆಗೆ ಹೋಗಿತ್ತು, ಕಬ್ಬು ಜಲ್ಲೆಗೆ 60 ರಿಂದ 100, ಕಡಲೆಕಾಯಿ 50ರೂ ಸೇರು, ಕಡಲೆಬೀಜ ಕೆ.ಜಿ.ಗೆ 130 ಹೀಗೆ ಎಲ್ಲ ಧರಗಳು ಏರಿದ್ದರು ಸಂಪ್ರ್ರಾದಾಯಿಕವಾಗಿ ಎಷ್ಟುಬೇಕೋ ಅಷ್ಟು ಕೊಂಡುಕೊಂಡು ಹೋಗುತ್ತಿದ್ದರು.
ಟ್ರಾಫಿಕ್ ಸಮಸ್ಯೆ :
ಇನ್ನು ನಗರದ ಕಿಸ್ಕೆಂದೆಯಂತಹ ರಸ್ತೆಗಳಲ್ಲಿ ವಾಹನಗಳು ಸಂಚರಿಸುವುದು ಕಷ್ಟಸಾಧ್ಯವಾದ ಮಾತಾಗಿದೆ ಆದರೆ ಇಂದು ಸಂಕ್ರಾಂತಿಯ ಸುಗ್ಗಿಯಂತೆ ಕೊಂಡುಕೊಳ್ಳಲು ಬಂದ ಗ್ರಾಹಕರು ಮೋರ್ ಮುಂದೆ, ಸಿಂಗ್ರಿನಂಜಪ್ಪ ವೃತ್ತ, ಅರಳಿಕಟ್ಟೆ ಹತ್ತಿರ ಸಾಕಷ್ಟು ಜನಜಂಗುಳಿ ಉಂಟಾಗಿದ್ದು ಟ್ರಾಫಿಕ್ ಸಮಸ್ಯೆ ಬಗೆಹರಿಸಲು ಆರಕ್ಷಕರು ಹರಸಾಹಸ ಪಡುತ್ತಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








