ಬೆಂಗಳೂರು
ಶಿಕ್ಷಣ ಇಲಾಖೆಯ ಶೇಕಡ 95ರಷ್ಟು ಭಾಗ ಬಿಇಒ, ಡಿಡಿಪಿಐಗಳು ನಿಯಮಗಳನ್ನು ಉಲ್ಲಂಘಿಸಿ, ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಉತ್ತೇಜಿಸುತ್ತಿದ್ದಾರೆ ಇಲಾಖೆಯ ಕೆಲ ಭ್ರಷ್ಟ ಅಧಿಕಾರಿಗಳಿಂದಲೇ ಪ್ರಾಥಮಿಕ ಶಿಕ್ಷಣ ದುರ್ಬಲವಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್. ಜಿ.ಸಿದ್ದರಾಮಯ್ಯ ಅವರು ಗಂಭೀರ ಆರೋಪ ಮಾಡಿದರು.
ನಗರದ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಆಕ್ಷನ್ ಎಯ್ಡ್ ಸಂಸ್ಥೆ ಆಯೋಜಿಸಿದ್ದ, ಎಲ್ಲರಿಗೂ ಗುಣಮಟ್ಟದ ಹಾಗೂ ಸಮಾನ ಶಿಕ್ಷಣಕ್ಕಾಗಿ ಆಂದೋಲನ ಕುರಿತು ದುಂಡು ಮೇಜಿನ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು.ಭ್ರಷ್ಟ ಅಧಿಕಾರಿಗಳನ್ನು ಕೆಲ ರಾಜಕಾರಣಿಗಳು ಬೆಂಬಲಿಸುತ್ತಿರುವುದು ಪ್ರಾಥಮಿಕ ಶಿಕ್ಷಣ ದುರ್ಬಲವಾಗುವುದಕ್ಕೆ ಪ್ರಮುಖ ಕಾರಣವಾಗಿದೆ ಎಂದರು,
ಮಕ್ಕಳ ಮನೋವಿಕಾಸಕ್ಕೆ ಪೂರಕವಾದ ಶಿಕ್ಷಣ ಬೇಕಿದೆ. ಆದರೆ, ಅವೈಜ್ಞಾನಿಕ ಪ್ರಶ್ನೆಗಳನ್ನು ಎತ್ತಿ ಸಮಸ್ಯೆಗಳನ್ನು ಸರಳೀಕರಿಸುತ್ತಿದ್ದಾರೆ ಕನ್ನಡ ಪ್ರಾಥಮಿಕ ಶಿಕ್ಷಣವನ್ನು ಕೆಲವು ಶಿಕ್ಷಕರು ಹಾಗೂ ರಾಜಕಾರಣಿಗಳು ದ್ರೋಹದ ರೀತಿಯಲ್ಲಿ ನೋಡುತ್ತಾರೆ. ಮಾಧ್ಯಮಗಳ ವರದಿ ಮುಂದಿಟ್ಟುಕೊಂಡು ಮಾತನಾಡುತ್ತಾ, ಭ್ರಮೆಯನ್ನು ಸೃಷ್ಟಿಸುತ್ತಿದ್ದಾರೆ ಎಂದು ದೂರಿದರು.
ಸರ್ಕಾರಿ ಶಾಲೆಗಳ ಸಬಲೀಕರಣಕ್ಕಾಗಿ ಹಿಂದಿನ ಸರ್ಕಾರಕ್ಕೆ ವರದಿ ಸಲ್ಲಿಸಿದ್ದು ಅದನ್ನೂ ಜಾರಿ ಮಾಡಿಲ್ಲ2015 ರಲ್ಲಿ ರಾಜ್ಯದ ಎಲ್ಲ ಖಾಸಗಿ ಶಾಲೆಗಳಲ್ಲಿ ಕನ್ನಡ ಒಂದು ಭಾಷೆಯಾಗಿ ಕಲಿಸಬೇಕು ಎಂದು ಅಧಿಸೂಚನೆ ಮಾಡಿದೆ.ಆದರೆ,2017 ರವರೆಗೂ ಜಾರಿ ಮಾಡಿಲ್ಲ. ಉನ್ನತ ಅಧಿಕಾರಿಗಳ ಒಳಸಂಚು ಹೇಗಿದೆ ನೋಡಿ ಎಂದರು.
ಕೇರಳ ಸರ್ಕಾರ ಎಲ್ಲ ಖಾಸಗಿ ಶಾಲೆಗಳಲ್ಲಿ ಮಲಯಾಳಂ ಕಡ್ಡಾಯವಾಗಿ ಕಲಿಸಬೇಕು ಎಂದು ಆದೇಶಿದಾಗ, ಕರ್ನಾಟಕದಲ್ಲಿ ನಾವು ಈ ರೀತಿಯ ಕಾಯ್ದೆ ಬಗ್ಗೆ ಪರಿಶೀಲಿಸಿದಾಗ ಇದು ಹೊರಗೆ ಬಂತು.ಈ ಕುರಿತು ಅಂದಿನ ಇಲಾಖೆ ಪ್ರಧಾನ ಕಾರ್ಯದರ್ಶಿಯನ್ನು ಪ್ರಶ್ನಿಸಿದರೆ ಸಿಬಿಎಸ್ಸಿ ಶಾಲೆಗಳಲ್ಲಿ ಇದನ್ನು ಜಾರಿ ಮಾಡಲು ಸಾಧ್ಯವಾಗಲ್ಲ ಎಂದಿದ್ದರು.ನಾವು ಪ್ರಶ್ನಿಸಿದಾಗ ಸಮಯಾವಾಕಾಶ ಕೋರಿ ಜಾರಿಗೆ ಬಂದರು.ಅಲ್ಲದೆ, ಬೆಂಗಳೂರು ನಗರದಲ್ಲಿ ಶೇ.25 ಖಾಸಗಿ ಶಾಲೆಗಳು ಕನ್ನಡ ಮಾತಾಡಿದರೆ ದಂಡ ಹಾಕುತ್ತಾರೆ. ಅಂದರೆ ನಾವು ಯಾವ ವ್ಯವಸ್ಥೆಯಲ್ಲಿದ್ದೇವೆ. ಸರ್ಕಾರದ ಆದೇಶ ಉಲ್ಲಂಘನೆ ಮಾಡುವ ಖಾಸಗಿ ಶಾಲೆಗಳ ಮೇಲೆ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು.
ಆಕ್ಷನ್ ಎಯ್ಡ್ ಸಂಸ್ಥೆಯ ಸದಸ್ಯೆ ನಂದಿನಿ ಮಾತನಾಡಿ, 18 ವರ್ಷದ ಎಲ್ಲರನ್ನೂ ಮಕ್ಕಳು ಎಂದು ಘೋಷಿಸಿದ್ದೇವೆ. ಆದರೆ, ಶಿಕ್ಷಣದಲ್ಲಿ 14 ವರ್ಷಕ್ಕೆ ಸೀಮಿಗೊಳಿಸಿರುವುದು ಸರಿಯಲ್ಲ, ಇದನ್ನು 18 ವರ್ಷದವರೆಗೆ ವಿಸ್ತರಿಸಬೇಕು. ಕಾಯ್ದೆ ತಿದ್ದುಪಡಿ ಅಗತ್ಯವಿದೆ ಎಂದು ಆಗ್ರಹಿಸಿದರು.
ಖಾಸಗಿ ಶಿಕ್ಷಣ ವ್ಯವಸ್ಥೆಯಲ್ಲಿ ವಿಶಾಲವಾದ ವಾತಾವರಣ, ಗುಣಮಟ್ಟ ಶಿಕ್ಷಣ, ಅಗತ್ಯ ಶಿಕ್ಷಕರು ಎಲ್ಲವೂ ಸಿಗುತ್ತದೆ. ಅದೇ ರೀತಿ, ನಮ್ಮೆಲ್ಲಾ ಸರಕಾರಿ ಶಾಲೆಗಳನ್ನು ಮೇಲೇರಿಸಿ ಸಿಗುವಂತೆ ಮಾಡಬೇಕು.ಜೊತೆಗೆಎಸ್.ಜಿ.ಸಿದ್ಧರಾಮಯ್ಯ ಅವರ ವರದಿ ಜಾರಿ ಮಾಡಿದರೆ ಕರ್ನಾಟಕ ಪಿನ್ ಲ್ಯಾಂಡ್ ಆಗುವುದರಲ್ಲಿ ಅನುಮಾನವಿಲ್ಲ ಎಂದು ಅಭಿಪ್ರಾಯಪಟ್ಟರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ